ಸಾವಿರ ಹಾಡಿನ ಸರದಾರ

0
60


 

 

 

ಸಾವಿರ ಹಾಡಿನ ಸರದಾರ

ಉಪಮೆಗಳ ಸಾವಕಾರ

ಹಾವ ಭಾವಗಳ ಚಮತ್ಕಾರ

ರೂಪಾಲಂಕಾರಗಳ ಆಗರ

ಮುರಗೋಡದಲಿ ಜನಿಸಿದನು

ಕರ್ನಾಟಕವನು ಸುತ್ತಿದನು

ಜಾನಪದ ಸೊಗಡನು

ಸುತ್ತೆಲ್ಲ ಹರಡಿದನು

ಬಾಳಪ್ಪನು ಹಾಡಿದನೆಂದರೆ

ಜೋಳದ ಅರಳು ಹುರಿದಂಗ

ಎಣ್ಣೆ ಹಚ್ಚಿ ಎರೆದಾಂಗ

ಅಮೃತ ಧಾರೆ ಹರಿದಾಂಗ

ಬಾಳಪ್ಪನ ಹಾಡು ಹರವಬೇಕ

ಎಲ್ಲ ದ್ವೇಷವ ಮರೆಯಬೇಕ

ನಕ್ಕು ನಗಿಸಿ ನಲಿಯಬೇಕ

ಜನಪದ ಸುಧೆಯ ಸವಿಯಬೇಕ

ಚಿಂತಿ ಎಲ್ಲಾ ಮರೆಯಬೇಕ

ಆರ್.ಎಸ್. ಚಾಪಗಾವಿ

ಬೆಳಗಾವಿ

 

loading...

LEAVE A REPLY

Please enter your comment!
Please enter your name here