ಸಾವು, ಬದುಕು ನಮ್ಮ‌ ಕೈಯಲ್ಲಿ ಇಲ್ಲ: ಸಚಿವ ಜಾರಕಿಹೊಳಿ

0
117

ಸಾವು, ಬದುಕು ನಮ್ಮ‌ ಕೈಯಲ್ಲಿ ಇಲ್ಲ: ಸಚಿವ ಜಾರಕಿಹೊಳಿ

ಬೆಳಗಾವಿ

ಸಾವು ಬದುಕು ನಮ್ಮ ಕೈಯಲ್ಲಿ ಇಲ್ಲ. ಮುಂದಿನ ದಿನಗಳಲ್ಲಿ ಕೋವಿಡ್ ಮಧ್ಯೆಯೇ ಬದುಕುವ ಪರಿಸ್ಥಿತಿ ಬಂದಿದೆ. ಮಾಧ್ಯಮದವರು ಸ್ಪಲ್ಪ ಕೋವಿಡ್ ವಾಡ್೯ಗೆ ಹೋಗಿ ಬನ್ನಿ ತಿಳಿಯುತ್ತದೆ. ಅಧಿಕಾರಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಸೋಮವಾರ ಜಿಪಂ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕೋವಿಡ್ -19 ಸಂದರ್ಭದಲ್ಲಿ ಸೋಂಕಿತರು ಮೃತಪಡುತ್ತಿರುವ ವಿಷಯಕ್ಕೆ ಪ್ರತಿಕ್ರಯಿಸಿದ ಸಚಿವ ಜಾರಕಿಹೊಳಿ, ಸಾವು, ಬದುಕು ನಮ್ಮ ಕೈಯಲ್ಲಿ‌ ಇಲ್ಲ. ಹೋರಾಟ ಮಾಡಿ ಬದುಕಿಸುವ ಪ್ರಯತ್ನ ಮಾಡಬೇಕೆಂದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ರಚನೆಯಾಗಿ ಒಂದು‌ವರ್ಷ ಪೂರೈಸಿದೆ ಅದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ವಿಶೇಷ ಸಮಯದಲ್ಲಿ ರಾಜ್ಯದಲ್ಲಿ ಅಧಿಕಾರ ಹಿಡಿದು ಸಾಲು ಸಾಲು ಸಾಲು ಸಮಸ್ಯೆ ಎದುರಿಸಿ ಜನರ ಸಂಕಷ್ಟಗಳನ್ನು ದೂರ ಮಾಡಿ‌ ಅವರ ಮನಸ್ಸು ಗೆದ್ದಿದ್ದಾರೆ.

ಅದರಂತೆ ಮುಂದಿನ ಎರಡೂವರೆ ವರ್ಷವೂ ಬಿ.ಎಸ್.ಯಡಿಯೂರಪ್ಪ ಉತ್ತಮ ಆಡಳಿತ ನೀಡುತ್ತಾರೆ.ಅಲ್ಲದೆ ಮುಂದಿನ 2023ರ ವಿಧಾನಸಭೆ ‌ಚುನಾವಣೆಯನ್ನು ಸಹ ಯಡಿಯೂರಪ್ಪ ‌ನೇತೃತ್ವದಲ್ಲಿಯೇ ನಡೆಯಲಿದೆ.

ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ಸಚಿವ ಸಂಪುಟ ವಿಸ್ತರ್ಣೆಯ ಬಗ್ಗೆ ನನಗೆ ಗೋತ್ತಿಲ್ಲ ಎಂದರು.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿ ಭೇಟಿ ನೀಡಿದ ವಿಷಯವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಮುಖ್ಯಮಂತ್ರಿ ಬದಲಾವಣೆ ಯಾವುದೇ ಕಾರಣಕ್ಕೂ ಇಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ನನ್ನ ಭೇಟಿ ಮಾಡಿದ್ದು ಅವರು ನಮ್ಮ ಪಕ್ಷದ ನಾಯಕರು ಯಾವುದೇ ಕಾರಣಕ್ಕೂ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಮಾಡುವುದಲ್ಲ. ಅದು ಮಾಧ್ಯಮದವರ ಸೃಷ್ಟಿ ಎಂದರು.

ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಕೇಂದ್ರ ಸಚಿವ ನಿತೀನ್ ಗಡ್ಕರ್ ಭೇಟಿ ವಿಚಾರವಾಗಿ ಉತ್ತರಿಸಿದ ಅವರು, ಅವರ ಇಲಾಖೆಯ ವಿಚಾರವಾಗಿ ದೆಹಲಿಗೆ ಹೋಗಿದ್ದಾರೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದರು.

ಕಾಂಗ್ರೆಸ್, ಜೆಡಿಎಸ್ ತನ್ನ ಕೆಲಸ ಮಾಡಲಿ ಈಗ ಒಳ್ಳೆಯ ವಾತಾವರಣ ಇದೆ ಎಂದು ರಮೇಶ ಜಾರಕಿಹೊಳಿ ಹೇಳಿದರು.

ಬಿಮ್ಸ್ ನಲ್ಲಿ ಗಲಾಟೆಯ ವಿಚಾರ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಿರ್ಣಯ ತೆಗೆದುಕೊಳ್ಳುತ್ತೇವೆ.

ಬಿಮ್ಸ್ ಮುಂದೆ ಅಂಬ್ಯುಲೆನ್ಸ್ ಸುಟ್ಟ ಪ್ರಕರಣ ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇದರಲ್ಲಿ ತಪ್ಪು ಮಾಡಿದ ಅಧಿಕಾರಿಗಳಿದ್ದರೂ ಕ್ರಮ ಖಂಡಿತ ಎಂದರು.

loading...