ಸಾಹುಕಾರನ ನಡೆಗೆ ಕಾರ್ಯಕರ್ತರು ಕಂಗಾಲ್ !

0
30

ಹಿರೇಮಠ ಆರ್.ಕೆ.

ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದರೆ ರಾಜ್ಯದಲ್ಲಿ ಸರಕಾರ ರಚಿಸಲು ಬಿಜೆಪಿಗೆ ಪುಷ್ಟಿ ನೀಡುವಂತೆ ಮಾಡಿದೆ.

ಡಿಸೆಂಬರ್‍ನಲ್ಲಿ 2018ರ ರಾಜ್ಯ ಸಮ್ಮಿಶ್ರ ಸರಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡು ಕಾಂಗ್ರೆಸ್ ವಿರುದ್ದ ಬಂಡಾಯದ ಬಾವುಟ ಹಾರಿಸಿರುವ ಗೋಕಾಕನ ರೆಬೆಲ್ ಶಾಸಕ ರಮೇಶ ಜಾರಕಿಹೊಳಿ ಲೋಕಸಭಾ ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯುವುದರೊಂದಿಗೆ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡಿರುತ್ತಿರುವ ಹಿನ್ನೆಲೆಯಲ್ಲಿ ಗೋಕಾಕನಲ್ಲಿ ಮಾಜಿ ಸಚಿವ ರಮೇಶ ಬದಲು ಅವರ ಸಹೋದರ ಲಖನ್ ಜಾರಕಿಹೊಳಿಗೆ ಕಾಂಗ್ರೆಸ್ ಉತ್ತರಾಧಿಕಾರಿ ಎಂದು ಘೋಷಣೆ ಮಾಡುತ್ತಿರುವುದು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವಂತೆ ಮಾಡಿದೆ.

ಕಳೆದ 20 ವರ್ಷಗಳಿಂದ ಗೋಕಾಕನಲ್ಲಿ ತಮ್ಮದೆಯಾದ ಹಿಡಿತ ಹೊಂದಿ ಕಾಂಗ್ರೆಸ್ ಕಟ್ಟಿ ಬೆಳೆಸಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಕಾಂಗ್ರೆಸ್ ಶಾಸಕರು ಆಯ್ಕೆಯಾಗಲು ಶ್ರಮಿಸಿದ್ದರು. ಆದರೆ ಬೆಳಗಾವಿ ತಾಲೂಕಿನ ಪಿಎಲ್ ಡಿ ಬ್ಯಾಂಕ್ ಚುನಾವಣೆಯಿಂದ ಕಾಂಗ್ರೆಸ್ ವರಿಷ್ಠರೊಂದಿಗೆ ಮುನಿಸಿಕೊಂಡಿದ್ದ ರಮೇಶ ಬೆಳಗಾವಿಯ ರಾಜಕಾರಣದಲ್ಲಿ ಸಚಿವ ಡಿ.ಕೆ.ಶಿವಕುಮಾರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಂದಿನಿಂದ ಸಮ್ಮಿಶ್ರ ಸರಕಾರದ ವಿರುದ್ದ ಬಂಡಾಯದ ಬಾವುಟ ಹಾರಿಸಿದ್ದ ರಮೇಶ ನಡೆ ಕಾಂಗ್ರೆಸ್ ವರಿಷ್ಠರಿಗೆ ಮಾತ್ರವಲ್ಲ. ಸಿಎಂ ಕುಮಾರಸ್ವಾಮಿ ಅವರಿಗೂ ಕಂಟವಾಗಿದ್ದು ಮಾತ್ರ ಸತ್ಯ.

ಬೆಳಗಾವಿ ತಾಲೂಕಿನ ಪಿಎಲ್‍ಡಿ ಬ್ಯಾಂಕ್‍ನ ಒಂದು ಸಣ್ಣ ಚುನಾವಣೆ ಇಡೀ ಸಮ್ಮಿಶ್ರ ಸರಕಾರವನ್ನು ಬುಡಮೇಲು ಮಾಡುವಂತೆ ಮಾಡಿತ್ತು. ಈ ವಿಷಯ ಹೈಕಮಾಂಡ್ ವರೆಗೂ ಹೋಗಿ ಕೊನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿ ಇದಕ್ಕೆ ಕೊನೆ ಹಾಡಿದರೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಅಸಮಾಧಾನ ತಣ್ಣಗಾಗಿರಲಿಲ್ಲ. ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ರಮೇಶ ಜಾರಕಿಹೊಳಿ ವೈಯಕ್ತಿ ಆರೋಪಗಳನ್ನು ಮಾಡಿ ಸರಕಾರಿ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದರಲ್ಲದೆ, ಸಚಿವ ಸಂಪುಟದ ಸಭೆಗೆ ಗೈರು ಹಾಜರಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು.

ಗೋಕಾಕನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ನಿಷ್ಠೆ ತೋರಿಸಿದ್ದ ಅವರು ಸಹೋದರರ ನಡುವಿನ ವೈಮನಸ್ಸು ಹಾಗೂ ರಮೇಶ ಜಾರಕಿಹೊಳಿಯವರ ತಟಸ್ಥ ನಿರ್ಧಾರದಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿರುವುದು ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ತಲೆನೋವಾಗಿ ಕಾಡುತ್ತಿದೆ.

ಗೋಕಾಕ ವಿಧಾನಸಭಾದಲ್ಲಿ ಉಪಚುನಾವಣೆ !

ಕಾಂಗ್ರೆಸ್ ವಿರುದ್ದ ಬಂಡಾಯದ ಬಾವುಟ ಹಾರಿಸಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ ಎಂದು ಹೇಳುತ್ತಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಒಂದು ವೇಳೆ ಕಾಂಗ್ರೆಸ್ ತೊರೆದರೆ ಗೋಕಾಕ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಾಗುವುದ್ದಂತೂ ನಿಶ್ವಿತ.

 

ರಮೇಶ ಬಿಜೆಪಿ ಪರ ಕೆಲಸ?

ಮಾಜಿ ಸಚಿವ ರಮೇಶ ಜಾರಕಿಹೊಳಿ ಕಾಂಗ್ರೆಸ್ ನಾಯಕರೊಂದಿಗೆ ಮುನಿಸು ಮುಂದುವರೆಸಿ ಲೋಕಸಭಾ ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯುವುದಾಗಿ ಹೇಳಿರುವ ಅವರು ತಮ್ಮ ಬೆಂಬಲಿಗರಿಗೆ ಪರೋಕ್ಷವಾಗಿ ಬಿಜೆಪಿ ಬೆಂಬಲಿಸುವಂತೆ ಸೂಚನೆ ನೀಡಿದ್ದಾರೆ ಎಂದು ಗೋಕಾಕ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಆದರೆ ರಮೇಶ ಜಾರಕಿಹೊಳಿ ಬಹಿರಂಗವಾಗಿ ಎಲ್ಲಿಯೂ ತಾವು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ಹೇಳಿಕೊಂಡಿಲ್ಲ. ಆದರೆ ಬಿಜೆಪಿಯ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಅವರು ಮಾತ್ರ ರಮೇಶ ಜಾರಕಿಹೊಳಿ ಬಿಜೆಪಿಯ ಸ್ಟಾರ್ ಪ್ರಚಾರಕ ಎಂದು ಹೇಳಿಕೆ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ರಮೇಶ ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ರಮೇಶ ವಿರುದ್ದ ಕ್ರಮಕ್ಕೆ ಬೆಳಗಾವಿ ಕಾಂಗ್ರೆಸ್ ಸಮಿತಿ ಹೈಕಮಾಂಡ್‍ಗೆ ದೂರು ನೀಡಲಾಗಿದೆ ಎಂದು ಹೇಳಿರುವುದು ಗೋಕಾಕನಲ್ಲಿ ಸಂಚನಲ ಮೂಡಿಸಿದೆ.

——————————————–

 

ಗೋಕಾಕನಲ್ಲಿ ಕ್ಲಿಕ್ ಆಗತ್ತಾರೆ ಲಖನ್ ?

ಈಗಾಗಲೇ ಗೋಕಾಕನಲ್ಲಿ ಕಾಂಗ್ರೆಸ್‍ನ ಮುಂದಿನ ನಾಯಕ ಲಖನ್ ಜಾರಕಿಹೊಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಆದರೆ 20 ವರ್ಷಗಳಿಂದ ಗೋಕಾಕನಲ್ಲಿ ಕಾಂಗ್ರೆಸ್ ಕಟ್ಟಿದ್ದ ರಮೇಶ ಜಾರಕಿಹೊಳಿ ಬೆಂಬಲಿಗರು ಲಖನ್ ಜತೆ ಇರುತ್ತಾರೆ. ಒಂದು ವೇಳೆ ಇಲ್ಲಿ ಅವರನ್ನು ಕಾರ್ಯಕರ್ತರು ಒಪ್ಪಿಕೊಳ್ಳುತ್ತಾರೆಯೇ ಎನ್ನುವ ಪ್ರಶ್ನೆ ವ್ಯಾಪಕವಾಗಿ ಕೇಳಿ ಬರುತ್ತಿದೆ.

———————————–

ಗೋಕಾಕನಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಬಿಜೆಪಿ ಪರವಾಗಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಇಲ್ಲಿ ಕಾಂಗ್ರೆಸ್‍ಗೆ ಹಿನ್ನಡೆಯಾಗುವುದು ನಿಜ. ನಾವು ಈಗ ಸಮಿಪೈನಲ್‍ನಲ್ಲಿದ್ದೇವೆ. ಆರು ತಿಂಗಳ ನಂತರ ಲಖನ್ ಜಾರಕಿಹೊಳಿ ಮೂಲಖ ಫೈನಲ್ ಮ್ಯಾಚ್ ನಡೆಯಲಿದೆ.

*ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

——————————–

 

loading...