ಸಿಎಂ ಸಿದ್ದರಾಮಯ್ಯರ ಕೈ ಹಿಡಿದ ಬಾದಾಮಿ ಮತದಾರ

0
32

ಬೆಂಗಳೂರು:ಬಾಗಲಕೋಟೆ ಜಿಲ್ಲೆಯಲ್ಲಿ ಬಿಜೆಪಿಯೂ ವಿಧಾನಸಭೆ ಚುನಾವಣೆಯಂತೆಯೇ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದೆ.
ಜಿಲ್ಲೆಯಲ್ಲಿ ನಡೆದ 12 ಸ್ಥಳೀಯ ಸಂಸ್ಥೆಗಳಲ್ಲೂ ಹೆಚ್ಚಿನ ಅಧಿಕಾರ ಗಿಟ್ಟಿಸುವುದರ ಮೂಲಕ ತನ್ನ ಪಾರುಪತ್ಯ ಕಾಯ್ದುಕೊಂಡಿದೆ.
ಜಿಲ್ಲೆಯ ಐದು ನಗರಸಭೆ, ಐದು ಪುರಸಭೆ, ಎರಡು ಪಟ್ಟಣ ಪಂಚಾಯಿತಿಗಳ 312 ವಾರ್ಡ್‍ಗಳ ಪೈಕಿ 309 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ವಿಜಯದುಂದುಬಿ ಮೊಳಗಿಸಿದೆ.
ಬಾಗಲಕೋಟೆ ನಗರಸಭೆ, ಮುಧೋಳ ನಗರಸಭೆ, ಇಳಕಲ್ ನಗರಸಭೆ, ರಬಕವಿ ಬನಹಟ್ಟಿ ನಗರಸಭೆ ಅಧಿಕಾರ ಬಿಜೆಪಿ ಪಾಲಾದರೆ, ದಿವಂಗತ ಶಾಸಕ ಸಿದ್ದು ನ್ಯಾಮಗೌಡ ಅವರ ಜಮಖಂಡಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಜಮಖಂಡಿ ನಗರಸಭೆ ಕಾಂಗ್ರೆಸ್ ಪಾಲಾಗಿದೆ.
ಇನ್ನು ಬಾದಾಮಿ ಕ್ಷೇತ್ರದ ಮತದಾರರು ಮತ್ತೆ ಮಾಜಿ ಸಿಎಂ ಸಿದ್ದರಾಮಯ್ಯನವರ ಕೈ ಹಿಡಿದಿದ್ದಾರೆ.ಬಾದಾಮಿ ಕ್ಷೇತ್ರ ವ್ಯಾಪ್ತಿಯ ಬಾದಾಮಿ ಪುರಸಭೆ ಹಾಗೂ ಗುಳೇದಗುಡ್ಡ ಪುರಸಭೆ ಕಾಂಗ್ರೆಸ್ ಪಾಲಾಗಿವೆ.ಕೆರೂರು ಪಟ್ಟಣ ಪಂಚಾಯತ್ ಅತಂತ್ರವಾಗಿದೆ.
ರಬಕವಿ-ಬನಹಟ್ಟಿ ನಗರಸಭೆ ಬಿಜೆಪಿ ಪಾಲಾಗಿದ್ದು ಮಾಜಿ ಸಚಿವೆ ಉಮಾಶ್ರೀ ಅವರಿಗೆ ತೀವ್ರ ಮುಖಭಂಗವಾಗಿದೆ.

loading...