ಸಿಜೆಐ ಆಗಿ ರಂಜನ್ ಗಗೋಯ್ ನೇಮಕ

0
13

ನವದೆಹಲಿ- ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ ಆಗಿ ಹಿರಿಯ ನ್ಯಾಯದೀಶ ರಂಜನ್ ಗೊಗೊಯ್ ಅವರನ್ನು ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ಚೀಫ್ ಜಸ್ಟೀಸ್ ದೀಪಕ್ ಮಿಶ್ರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.   ಇದರೊಂದಿಗೆ ಗೊಗೊಯ್ ಅವರು ಸುಪ್ರೀಂಕೋರ್ಟ್‍ನ ಮುಂದಿನ ಮುಖ್ಯ ನ್ಯಾಯಮೂರ್ತಿ ಅಗುವುದು ನಿಶ್ಚಿತವಾಗಿದ್ದು, ಅಕ್ಟೋಬರ್ 3ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.  ಈ ಸಂಬಂಧ ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯಾಂಗ ಸಚಿವಾಲಯಕ್ಕೆ ಪತ್ರ ಬರೆದಿರುವ ಸಿಜೆಐ, ತಮ್ಮ ಉತ್ತರಾಧಿಕಾರಿಯನ್ನಾಗಿ ಸುಪ್ರೀಂಕೋರ್ಟ್‍ನ ಅತ್ಯಂತ ಹಿರಿಯ ನ್ಯಾಯಾಧೀಶರಾದ ಗೊಗೊಯ್ ಅವರನ್ನು ನೇಮಕ ಮಾಡಬೇಕು ಎಂದು ಕೋರಿದ್ದಾರೆ.

loading...