ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ಸಾಧ್ಯವೇ ಇಲ್ಲ

0
29

ಕೊಳ್ಳೆಗಾಲ:ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲು ಸಾಧ್ಯವೇ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದಲ್ಲಿ ಮಾತನಾಡಿದ ಅವರು,ಪ್ರಸ್ತುತ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದಾರೆ.ಅವರಿಗೆ ನಾನು ಬೆಂಬಲ ನೀಡುತ್ತೇನೆ.ಅಭಿವೃದ್ಧಿ ಯೋಜನೆಗಳ ಬಗ್ಗೆ ಕುಮಾರಸ್ವಾಮಿ ಸಾಕಷ್ಟು ಕನಸು ಕಟ್ಟಿಕೊಂಡಿ ದ್ದಾರೆ.ಅಂತಹವರಿಗೆ ಅಡಚಣೆ ಉಂಟು ಮಾಡಬಾರದು.ಕಾಂಗ್ರೆಸ್ ಕುಮಾರಸ್ವಾಮಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಇಬ್ಬರನ್ನು ಮುಂದೆ ತಂದು ನಿಮ್ಮೆ ಆಯ್ಕೆ ಏನು ಅಂದರೇ ನಾನು ಕುಮಾರಸ್ವಾಮಿ ಅವರನ್ನೇ ಬೆಂಬಲಿಸುತ್ತೇನೆ.ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಅವರೇ ಐದು ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಎಂದು ನುಡಿದರು.
ಕುಮಾರಸ್ವಾಮಿ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿದಾಗ ಸ್ಥಳೀಯ ಮುಖಂಡರು ಹಾಗೂ ಅಭಿಮಾನಿಗಳ ಕೋರಿಕೆ ಮೇರೆಗೆ ದೇವಾಲಯಗಳಿಗೆ ಹೋಗಲೇ ಬೇಕಾಗುತ್ತದೆ.ಅದರಲ್ಲಿ ತಪ್ಪೇನಿದೆ ಎಂದು ಮರು ಪ್ರಶ್ನೆ ಕೇಳಿದರು.
ಸಿಎಂ ಹೋದ ಕಡೆಗಳೆಲ್ಲಾ ಆಡಳಿತ ವರ್ಗವೂ ಹೋಗಬೇಕಾಗುತ್ತದೆ.ಆಷಾಢ ಪೂಜೆ ಸಂಬಂಧ ಒಂದೆರೆಡು ದೇವಾಲಯಗಳಿಗೆ ಮಾತ್ರ ಕುಟುಂಬ ಸಮೇತ ಅವರು ಭೇಟಿ ನೀಡಿದ್ದಾರೆ.ಉಳಿದ ಕಡೆ ಅವರೊಬ್ಬರೇ ದೇವರ ದರ್ಶನ ಪಡೆದಿದ್ದಾರೆ.ಈ ಹಿಂದೆ ಸಿದ್ದರಾಮಯ್ಯ ಹಾಗೂ ಬಿ.ಎಸ್.ಯಡಿಯೂರಪ್ಪರ ಕಾಲದಲ್ಲೂ ದೇವಾಲಯ ಭೇಟಿ ನಡೆದಿತ್ತು ಎಂದು ಸಚಿವ ಮಹೇಶ್ ಸಮರ್ಥಿಸಿಕೊಂಡರು.
ಸ್ಥಳೀಯ ನಗರಸಭೆ ಚುನಾವಣೆಯಲ್ಲಿ ಬಿಎಸ್‍ಪಿ ಈ ಬಾರಿ ಆಡಳಿತ ಚುಕ್ಕಾಣಿ ಹಿಡಿಯಲಿದೆ. ಇದರಲ್ಲಿ ಎರಡು ಮಾತಿಲ್ಲ ಎಂದ ಅವರು, ಅಭಿವೃದ್ಧಿಗಾಗಿ ಬಿಎಸ್‍ಪಿಯನ್ನು ಬೆಂಬಲಿಸಿ ಎಂದರು.

loading...