ಸಿದ್ದು ಸರ್ಕಾರದಲ್ಲಿನ ಸಚಿವರ ಪ್ರಯಾಣ ಭತ್ಯೆ ಕೇಳಿದರೆ ಬೆಚ್ಚಿ ಬಿಳತಿರಾ…!

0
88

ಸಿದ್ದು ಸರ್ಕಾರದಲ್ಲಿನ ಸಚಿವರ ಪ್ರಯಾಣ ಭತ್ಯೆ ಕೇಳಿದರೆ ಬೆಚ್ಚಿ ಬಿಳತಿರಾ…!

ಕನ್ನಡಮ್ಮ ಸುದ್ದಿ- ಬೆಳಗಾವಿ: ಸಿದ್ದರಾಮಯ್ಯ ಮುಖ್ಯಮಂತ್ರಿ ಇರುವ ಸಂದರ್ಭದಲ್ಲಿ ಸಚಿವ ಪ್ರಯಾಣವನ್ನು 24ಕೋಟಿ ಹಣ ವೆಚ್ಚ ಮಾಡಿರುವುದು ಮಾಹಿತಿ ಹಕ್ಕಿನಿಂದ ತಿಳಿದು ಬಂದಿದೆ.

  1. ಕಾಂಗ್ರೆಸ್ ಸರ್ಕಾರ ಆಡಳಿತ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ಮಾಡಬೇಕಾದ ಸಚಿವರು‌ ತಮ್ಮ ಪ್ರಯಾಣ ಬತ್ತೆಯನ್ನೇ 24,28,02,864 ರೂ. ಸಾರ್ವಜನಿಕರ ಹಣವನ್ನು ಪೋಲು ಮಾಡಿದ್ದಾರೆ.
    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾಗಿದ್ದ, ಯು.ಟಿ ಖಾದರ ಅವರು 1 ಕೋಟಿ 56 ಲಕ್ಷ 08 ಸಾವಿರದಾ‌ 590 ರೂ. ಪ್ರಯಾಣ ಭತ್ಯೆ ಪಡೆದು ಮೊದಲ‌ ಸ್ಥಾನದಲ್ಲಿದ್ದಾರೆ.ಅರಣ್ಯ ಸಚಿವ ರಮಾನಾಥ ರೈ ಅವರು 1 ಕೋಟಿ 52 ಲಕ್ಷ 36 ಸಾವಿರದಾ 321 ರೂ.ಪ್ರಯಾಣ ಭತ್ಯೆ ಪಡೆದು ದ್ವಿತಿಯ ಸ್ಥಾನದಲ್ಲಿದ್ದಾರೆ.ಕಾನೂನು ಸಚಿವ ಟಿ.ಬಿ ಜಯಚಂದ್ರ ಅವರು 99 ಲಕ್ಷ 72 ಸಾವಿರ 41 ರೂ. ಪಡೆದು ತೃತೀಯ ಸ್ಥಾನದಲ್ಲಿದ್ದಾರೆ.
    ಒಟ್ಟಾರೆಯಾಗಿ ಸಾರ್ವಜನಿಕ ರ ಹಣ ದುಂದು ವೆಚ್ಚ ಮಾಡುತ್ತಿದ್ದು,ಈ ಬಗ್ಗೆ ಅತೀ ಹೆಚ್ಚು ಪ್ರಮಾಣದಲ್ಲಿ ಪ್ರಯಾಣದ ವಿವರವನ್ನು‌ ಸಂಗ್ರಹಿಸುತ್ತಿದ್ದು,ಅವು ದೊರೆತ ಮೇಲೆ ಹೆಚ್ಚಿನ ತನಿಖೆಗೆ ಸಂಬಂಧಿಸಿದ ಪ್ರಾಧಿಕಾರದಲ್ಲಿ ಪ್ರಕರಣವನ್ನು‌ದಾಖಲಿಸಲಾಗುವುದು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪಾ ಗಡಾದ ತಿಳಿಸಿದ್ದಾರೆ.
loading...