ಸಿರಿ ಧ್ಯಾನ್ಯಗಳನ್ನು ಸೇವನೆ ಮಾಡಿದರೆ ಆರೋಗ್ಯ ಉತ್ತಮ: ಪ್ರೋ. ಗೀತಾ

0
66

ಕನ್ನಡಮ್ಮ ಸುದ್ದಿ-ಶಿರಹಟ್ಟಿ: ಸಿರಿ ಧಾನ್ಯಗಳನ್ನು ಸೇವನೆ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಕೃಷಿ ವಿಸ್ತರಣಾ ಕೇಂದ್ರ ತಜ್ಞ ಗೀತಾ ಚನ್ನಾಳ ಹೇಳಿದರು.
ಇತ್ತೀಚೆಗೆ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಆತ್ಮಾ ಯೋಜನೆ ಅಡಿ ಸಿರಿಧಾನ್ಯ ಉತ್ಪಾಧನೆ ಮತ್ತು ಮಾರುಕಟ್ಟೆ ಮೌಲ್ಯ ವರ್ದನೆ ಕುರಿತು ತರಭೇತಿ ಶಿಬಿರಕ್ಕೆ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಅವರು. ನಗರದಲ್ಲಿ ಶ್ರೀಮಂತ ಜನರು ಸಿರಿ ಧಾನ್ಯಗಳಾದ ಊದಲು, ಹಾರಕ, ಸಾಮೆ, ಸಜ್ಜೆ, ರಾಗಿ, ನವಣೆ, ಕೊರ್ಲೆ, ಬರಗು ಜೋಳವನ್ನು ಸಮತೊಲನ ಹಾರವನ್ನು ಸೇವಿಸುತ್ತಿದ್ದಾರೆ. ಆ ಕಾರಣದಿಂದ ನಗರದ ಜನರು ಆರೋಗ್ಯದಿಂದ ಜೀವನವನ್ನು ಸಾಗಿಸುತ್ತಿದ್ದಾರೆ.
ಹಾಗಾಗಿ ರೈತರು ಇದನ್ನು ಹೆಚ್ಚಾಗಿ ಬೆಳೆದರೆ ಉತ್ತಮ ಬೆಲೆ ದೊರೆಯುವುದರ ಜೊತೆಗೆ ರೈತರು ಈ ಧಾನ್ಯಗಳಲ್ಲಿ ಉತ್ತಮ ಪೊಷಕಾಂಶ ದೊರೆಯುತ್ತದೆ. ಈ ನಿಟ್ಟಿನಲ್ಲಿ ರೈತರಿಗೆ ಸರ್ಕಾರ ಸಿರಿ ಧಾನ್ಯಗಳನ್ನು ಬೆಳೆಸಲು ಪ್ರೋತ್ಸಾಹ ನೀಡುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಸಾವಯವ ಕೃಷಿ ತಜ್ಞ ಬಸವರಾಜ ನಾವಿ ಮಾತನಾಡಿ, ಸಿರಿ ಧಾನ್ಯಗಳನ್ನು ಬೆಳೆಯಲು ಹೆಚ್ಚು ಕರ್ಚು ಬರುವುದಿಲ್ಲ ಅದರ ಜೊತೆಗೆ ಕಡಿಮೆ ಪ್ರಮಾಣದ ಮಳೆಯಾದರು ಸಹಿತ ಈ ಬೆಳೆಗಳು ರೈತರ ಕೈ ಸೇರುತ್ತವೆ. ಹಾಗೇಯೆ ಈ ಧಾನ್ಯಗಳಿಗೆ ಯಾವುದೇ ರೋಗಗಳು ಕಡಿಮೆ, ರಾಸಾಯನಿಕ ಗೊಬ್ಬರವನ್ನು ಸಿಂಪಡಿಸುವುದು ಅವಶ್ಯಕತೆ ಇಲ್ಲ ಹಾಗಾಗಿ ಇಂತಹ ಧಾನ್ಯಗಳನ್ನು ಬೆಳೆದು ರೈತರು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯ್ತಿಯ ಅಧ್ಯಕ್ಷೆ ಪಕ್ಕಿರವ್ವ ಬಾವಳ್ಳಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಾವಯವ ಕೃಷಿಕ ಬಸವರಾಜ ಹ್ಯಾಟಿ, ಸೋಮಣ್ಣ ಹುಬ್ಬಳ್ಳಿ, ತಿರಕಪ್ಪ ಅಳವಂಡಿ, ಕೃಷಿ ಅಧಿಕಾರಿಗಳಾದ ಚಂದ್ರಶೇಖರ ನರಸಮ್ಮನವರ, ಎಂ ಎಸ್. ಪೂಜಾರ, ಸಿ ಬಿ ಬೇವುರ, ಆರ್ ಎಚ್ ಹಳೆಮನಿ ಸೇರಿದಂತೆ ನೂರಾರು ರೈತರು ಇದ್ದರು.

loading...