ಸುನಿಲಗೌಡ ಪಾಟೀಲ ೨೦೪೦ ಮತಗಳ ಅಂತರದಿಂದ ಗೆಲವು:ವಿಜಯೋತ್ಸವ

0
19

ಆಲಮೇಲ: ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ವಿಧಾನ ಪರಿಷತ್ ಉಪಚುಣಾವನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಿದ ಸುನಿಲಗೌಡ ಪಾಟೀಲ ೨೦೪೦ ಮತಗಳ ಅಂತರದಿಂದ ಗೆಲವು ಸಾಧಿಸಿದ್ದರಿಂದ ಆಲಮೇಲ ಪಟ್ಟಣದ ಬಸ್ ನಿಲ್ದಾಣದ ಬಳಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಆಚರಣೆ ಮಾಡಿ ಸಿಹಿ ಹಂಚಿದರು.
ಮಾಜಿ ಕೇಂದ್ರ ಸಚಿವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಅವರಿಂದ ತೆರವು ಆದ ಸ್ಥಾನಕ್ಕೆ ಸೆ.೬ರಂದು ಚುಣಾವನೆ ಮಾಡಲಾಗಿದ್ದು ಸೆ,೧೧ ರಂದು ಮಂಗಳವಾರ ಮತ ಏಣಿಕೆ ನಡೆದ್ದವು, ಬಿಜೆಪಿ ಅಭ್ಯರ್ಥಿ ಗೋಳಪ್ಪ ಸಿದ್ದಪ್ಪ ಶಟಗಾರ ೨೭೭೯ ಮತಗಳು ಗಳಿಸಿದರೆ, ಮಾಜಿ ಸಚಿವ ಎಂ.ಬಿ ಪಾಟೀಲ ಅವರ ಸಹೋದರ ಸುನೀಲಗೌಡ ಪಾಟೀಲ ೪೮೧೯ ಮತಗಳು ಪಡೆದುಕೊಮಡು ೨೦೪೦ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಕಾಂಗ್ರೆÃಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸುನಿಲಗೌಡ ಪಾಟೀಲ ಅವರ ವಿಜಯದ ವಿಷಯ ತಿಳಿದ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವಆಚರಣೆ ಮಾಡಿದರು,
ಈ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯ ಹಿಂದುಳಿಂದಮೋರ್ಚಾ ಪ್ರಧಾನ ಕಾರ್ಯದರ್ಶಿ ರಮೇಶ ಭಂಟನೂರ ಮಾಜಿ ಸಚಿವ ಎಂ.ಬಿ ಪಾಟೀಲ ಹಾಗೂ ನಮ್ಮ ನಾಯಕರು ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರ ಆಡಳಿತ ನೋಡಿ ಜನರು ಜೆಡಿಎಸ್ ಬೆಂಬಲಿತ ಕಾಂಗ್ರಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ, ಸುನೀಲಗೌಡ ಅವರು ವಿಜಯಪುರ ಹಾಗೂ ಬಾಗಲಕೋಟ ಎರಡು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವ ಕಾರ್ಯ ಮಾಡುತ್ತಾರೆ ಎಂದರು.
ಈ ವೇಳೆ ಡಾ, ಸಂದೀಪ ಪಾಟೀಲ, ಪ.ಪಂ ಸದಸ್ಯ ಸಾಧಿಕ ಸುಂಬಡ, ವಾಬ ಸುಂಬಡ, ಪ್ರಭು ವಾಲಿಕಾರ, ಬಸವರಾಜ ತೆಲ್ಲೂರ, ಶಿರಾಜ ಬೆಣ್ಣೆÃಸೂರ, ಗುಂಡು ಕರೋಟಿ, ಪುಂಡಳಿಕ ದೊಡ್ಡಮನಿ, ಅಪ್ಪುಗೌಡ ಪಾಟೀಲ, ರುದ್ರಪ್ಪ ಮೇಟಿ ಇತರರು ಉಪಸ್ಥತ್ತರಿದ್ದರು.

loading...