ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಮರುಕಳಿಸಲಿದೆ ಇತಿಹಾಸ

0
16

ಸುಪ್ರೀಂ ಕೋರ್ಟ್‌ನಲ್ಲಿ 2013ರ ಇತಿಹಾಸ ಮತ್ತೆ ಮರುಕಳಿಸಲಿದೆ. ನ್ಯಾ. ಆರ್‌.ಬಾನುಮತಿ ಹಾಗೂ ಇಂದಿರಾ ಬ್ಯಾನರ್ಜಿ ಅವರ ಮಹಿಳಾ ಪೀಠ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಪ್ರಕರಣಗಳ ವಿಚಾರಣೆ ನಡೆಸಲಿದೆ.

2013ರಲ್ಲಿ ಮೊದಲ ಬಾರಿಗೆ ಮಹಿಳಾ ನ್ಯಾಯಮೂರ್ತಿಗಳನ್ನು ಮಾತ್ರ ಹೊಂದಿರುವ ನ್ಯಾಯಪೀಠ ಕಾರ್ಯ ನಿರ್ವಹಿಸಿತ್ತು. ನ್ಯಾ. ಗ್ಯಾನ್‌ ಸುಧಾ ಮಿಶ್ರ ಹಾಗೂ ರಂಜನ ಪ್ರಕಾಶ್‌ ದೇಸಾಯಿ ಪ್ರಕರಣದ ವಿಚಾರಣೆ ನಡೆಸಿದ್ದರು.

ಸ್ವಾತಂತ್ರ್ಯ ಬಳಿಕ ಅಪೆಕ್ಸ್‌ ಕೋರ್ಟ್‌ಗೆ ನೇಮಕಗೊಂಡ 8ನೇ ಮಹಿಳಾ ನ್ಯಾಯಧೀಶರಾಗಿ ನ್ಯಾ. ಇಂದಿರಾ ಬ್ಯಾನರ್ಜಿ ಆಗಸ್ಟ್‌ನಲ್ಲಿ ಅಧಿಕಾರ ಸ್ವೀಕರಿಸಿದ್ದರು. ಮೂವರು ಮಹಿಳಾ ನ್ಯಾಯಾಧೀಶರಲ್ಲಿ ಭಾನುಮತಿ ಹಿರಿಯರಾಗಿದ್ದು, 2014ರ ಆ.13ರಂದು ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡಿದ್ದರು.

ನ್ಯಾ. ಫಾತಿಮಾ ಬೀವಿ ಸುಪ್ರೀಂ ಕೋರ್ಟ್‌ ಮೊದಲ ಮಹಿಳಾ ಜಡ್ಜ್‌ ಆಗಿದ್ದು, ಆ ಬಳಿಕ ಸುಜಾತಾ ಮನೋಹರ್‌, ರುಮಾ ಪಲ್‌, ಗ್ಯಾನ್‌ ಸುಧಾ ಮಿಶ್ರಾ, ರಂಜನ್‌ ಪ್ರಕಾಶ್‌ ದೇಸಾಯಿ, ಆರ್‌. ಭಾನುಮತಿ, ಇಂದು ಮಲ್ಹೋತ್ರ ಹಾಗೂ ಇಂದಿರಾ ಬ್ಯಾನರ್ಜಿ ಅವರು ನೇಮಕವಾಗಿದ್ದಾರೆ. ಇದರಲ್ಲಿ ಫಾತಿಮಾ ಬೀವಿ ಆಗೂ ರುಮ ಪಲ್‌, ತಮ್ಮ ಕಾರ್ಯಾವಧಿಯನ್ನು ಪೂರ್ಣಗೊಳಿಸಿದ್ದಾರೆ. ರುಮಾ ಪಲ್‌ ಅವರು ದೇಸಾಯಿ ಅವರ ಬಳಿಕ ನ್ಯಾಯಧೀಶರಾಗಿದ್ದು, ಅತ್ಯಧಿಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ(2000-2006).

loading...