ಸುಭದ್ರ ರಾಷ್ಟç ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸಿ: ಕರಡಿ ಸಂಗಣ್ಣ

0
10

ಕನ್ನಡಮ್ಮ ಸುದ್ದಿ-ಯಲಬುರ್ಗಾ: ೭೦ ವರ್ಷಗಳ ಕಾಲ ಆಳ್ವಿಕೆ ಮಾಡಿ ಬಡತನದಲ್ಲೆÃ ಇರುವಂತೆ ಮಾಡಿದ ಕಾಂಗ್ರೆÃಸ್‌ನ ದುರಾಡಳತ ಕೊನೆಗೊಳಿಸಿ ಐದು ವರ್ಷದಲ್ಲಿ ಇಡೀ ಜಗತ್ತು ನಮ್ಮತ್ತ ತಿರುಗಿ ನೋಡುವಂತೆ ಮಾಡಿದ ಭಾರತ ಸ್ವತಂತ್ರವಾದ ನಂತರ ಆಗಿ ಹೋದ ಅನೇಕ ಪ್ರಧಾನಿಗಳಲ್ಲಿ ಅಪ್ರತಿಮ,ದೇಶಭಕ್ತ,ದೇಶ ರಕ್ಷಕ, ನರೇಂದ್ರ ಮೋದಿಜಿಯವರನ್ನು ಮತ್ತೊÃಮ್ಮೆ ಈ ದೇಶದ ಪ್ರಧಾನಿಯನ್ನಾಗಿ ಮಾಡಲು ಪಣ ತೊಡುವಂತೆ ಕೊಪ್ಪಳ ಸಂಸದ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿ ಕರಡಿ ಸಂಗಣ್ಣ ಹೇಳಿದರು.
ಯಲಬುರ್ಗಾ ಬಿಜೆಪಿ ಮಂಡಳ ವತಿಯಿಂದ ಇಲ್ಲಿಯ ಹಳೇ ಪಪಂ ಹತ್ತಿರ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಸುಭದ್ರ ರಾಷ್ಟç ನಿರ್ಮಾಣಕ್ಕೆ ನಾವು ಮೋದಿಯವರನ್ನು ಬೆಂಬಲಿಸಲೇಬೇಕು. ಪ್ರಧಾನಿ ನರೇಂದ್ರ ಮೋದೀಜಿ ಈ ದೇಶದ ಮಹಾನ ಆಸ್ತಿ.ಕೇಂದ್ರದಲ್ಲಿ ಈ ಭಾರಿಯೂ ಬಿಜೆಪಿ ಅಧಿಕಾರಕ್ಕೆ ತರಲು ಎಲ್ಲಾ ಪ್ರಜ್ಞಾವಂತ ಮತದಾರರು ಆಶೀರ್ವದಿಸಬೇಕು.ದೇಶದ ಬಡ ಜನತೆಗೆ,ರೈತರಿಗೆ ಹತ್ತು ಹಲವಾರು ಜನಪರ ಯೋಜನೆಗಳನ್ನು ತರುವ ಮೂಲಕ ಅವರನ್ನು ಮೇಲೆತ್ತುವ ಹಾಗೂ ಅಭಿವೃದ್ದಿ ಹೊಂದಲು ಬಿಜೆಪಿಗೆ ಮತ ನೀಡುವಂತೆ ಸಲಹೆ ನೀಡಿದ ಅವರು,ನಾನು ಈ ಕ್ಷೆÃತ್ರದಲ್ಲಿ ಸಂಸದನಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು,ಕ್ಷೆÃತ್ರದ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದು,ಈ ಭಾರಿಯು ಕೂಡಾ ನನಗೆ ಆಶೀರ್ವದಿಸುವಂತೆ ಮನವಿ ಮಾಡಿದರು.

ಶಾಸಕ ಹಾಲಪ್ಪ ಆಚಾರ ಮಾತನಾಡಿ,ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತದಾರರು ಆಶೀರ್ವದಿಸುವದರಿಂದ ದೇಶದಲ್ಲಿ ನರೇಂದ್ರ ಮೋದಿ ಇವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಮತ್ತೊÃಮ್ಮೆ ಅಧಿಕಾರಕ್ಕೆ ಬರುವದರಲ್ಲಿ ಯಾವುದೇ ಸಂದೇಹವಿಲ್ಲ. ಅಲ್ಲದೇ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಕರಡಿ ಸಂಗಣ್ಣ ಭರ್ಜರಿ ಗೆಲುವು ಸಾಧಿಸುವರು ಎಂದು ಶಾಸಕ ಹಾಲಪ್ಪ ಆಚಾರ ವಿಶ್ವಾಸ ವ್ಯಕ್ತಪಡಿಸಿದ ಅವರು, ದೇಶದ ರಕ್ಷಣೆ, ದೇಶದ ಪ್ರಗತಿಗಾಗಿ ರಾಷ್ಟçದ ಜನ ಮತ್ತೆ ಮುಂದಿನ ಐದು ವರ್ಷದ ಪ್ರಧಾನಿ ಮಾಡಲು ಬಯಸಿದ್ದಾರೆ. ಅಂiÀÄÄಷ್ಯಾನ್ ಭಾರತ, ರೈತ ಸಮ್ಮಾನ, ಮುದ್ರಾ, ಜನಧನ್, ಉಜ್ಜಲ್ ಗ್ಯಾಸ್ ಯೋಜನೆಯಿಂದ ಬಡವರಿಗೆ ನ್ಯಾಯ ದೊರಕಿದೆ. ಇರದಿಂದಾಗಿ ದೇಶದಲ್ಲಿ ನರೇಂದ್ರ ಮೋದಿಯವರು ಈ ದೇಶದಲ್ಲಿ ಮತ್ತೊÃಮ್ಮೆ ಪ್ರಧಾನ ಮಂತ್ರಿಯಾಗುತ್ತಾರೆ, ಈ ನಿಟ್ಟಿನಲ್ಲಿ ಇವರ ಕೈಬಲಪಡಿಸಬೇಕಾದರೆ ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣನವರನ್ನು ಮತ್ತೊÃಮ್ಮೆ ಆಶೀರ್ವದಿಸುವ ಮೂಲಕ ಗೆಲ್ಲಿಸುವಂತೆ ಮನವಿ ಮಾಡಿದರು. ಬಿಜೆಪಿ ಪಕ್ಷದ ಹಿರಿಯ ಮುಖಂಡ ಬಸವಲಿಂಗಪ್ಪ ಭೂತೆ ಸೇರಿದಂತೆ ಮತ್ತಿತರರು ಮಾತನಾಡಿದರು.
ಸಮಾರಂಭದಲ್ಲಿ ಬಿಜೆಪಿ ಪಕ್ಷದ ಅಧ್ಯಕ್ಷ ರತನ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಜಿಲ್ಲಾಧ್ಯಕ್ಷ ವೀರುಪಾಕ್ಷಪ್ಪ ಸಿಂಗನಾಳ, ಚಂದ್ರು ಹಲಗೇರಿ, ಪಕ್ಷದ ಮುಖಂಡರಾದ ಸಿ.ಎಚ್.ಪೋಲೀಸ್ ಪಾಟೀಲ್, ನವೀನಕುಮಾರ ಗುಳಗಣ್ಣನವರ್, ಅರವಿಂದಗೌಡ ಪಾಟೀಲ್, ಶಿವನಗೌಡ ಬನಪ್ಪಗೌಡ್ರ, ಮುನಿಯಪ್ಪ ಹುಬ್ಬಳ್ಳಿ, ಶಕುಂತಲಾದೇವಿ ಮಾಲಿಪಾಟೀಲ್, ಈರಪ್ಪ ಕುಡಗುಂಟಿ, ಪ್ರಭುರಾಜ ಕಲಬುರ್ಗಿ, ಸಿದ್ರಾಮೇಶ ಬೇಲೇರಿ, ಪಪಂ ಸದಸ್ಯರಾದ ವಸಂತಕುಮಾರ ಭಾವಿಮನಿ, ಅಶೋಕ ಅರಕೇರಿ, ಅಮರೇಶ ಹುಬ್ಬಳ್ಳಿ, ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಷಣ್ಮುಖಪ್ಪ ರಾಂಪೂರು ನಿರೂಪಿಸಿ,ಸ್ವಾಗತಿಸಿದರು.

loading...