ಸುಳ್ಳು ಪ್ರಕರಣ ಸಚಿವರಿಗೆ ಮನವಿ

0
25

ಬೆಳಗಾವಿ 05: ಪ್ರತಿಯೊಂದು ಹೆಣ್ಣು ಮಕ್ಕಳಿಗೆ ತನ್ನ ಅಕ್ಕ ತಂಗಿಯರೆಂದು ತಿಳಿದುಕೊಂಡು ಉತ್ತಮ ಕೆಲಸ ಮಾಡುತ್ತಿರುವ ನಾಶಿಪೂಡಿ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಉದ್ದೇಶಪೂರ್ವಕ ಪ್ರಕರಣ ದಾಖಲಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಓಂ ಸಾಯಿ ರಾಮ ಯಂಗ್ ಕಮಿಟಿ ಹಾಗೂ ಶ್ರೀ ನಿಲಾಂಬುಕಾ ಮಹಿಳಾ ಢೋರ ಸಮಾಜ ಸೇವಾ ಸಂಘದ ಸದಸ್ಯರು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.
ತೃಪ್ತಿ ಪಟ್ಟನಕೊಡಿ ಹಾಗೂ ಅಖಿಲಾ ಪಠಾಣ ಅವರು ಡಾ. ನಾಶಿಪೂಡಿ ಅವರ ಮೇಲೆ ಸುಳ್ಳು ಸುಳ್ಳು ಆರೋಪ ಮಾಡಿ ಬೆದರಿಕೆಯ ಕೇಸುಗಳನ್ನು ದಾಖಲಿಸಿದ್ದಾರೆ. ಅಖಿಲಾ ಪಠಾಣ ಹಾಗೂ ಇನ್ನು ಕೆಲ ಮಹಿಳೆಯರು ಡಾ. ನಾಶಿಪೂಡಿ ಮಾಡುವ ಕಾರ್ಯಗಳನ್ನು ಆರೋಪ ಮಾಡುತ್ತಾರೆ. ಆದ್ದರಿಂದ ಇವರೆಲ್ಲರೂ ಸೇರಿಕೊಂಡು ಈ ಸುಳ್ಳು ಕೃತ್ಯವನ್ನು ಏಸಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರಾಜು ಟೊಂಬರೆ, ದೀಪಕ ಬಿಲಾವರ, ನಾಗರಾಜ ಧಮೋನೆ, ಕಿರಣ ತಿವಾರಿ, ಸಾಗರ ಬದಾಮಿ, ಗಣೇಶ ಕೇಸರಕರ, ನಿರ್ಮಲಾ ಬದಾಮಿ, ರೂಪಾ ಟೊಂಬರೆ, ಅಂಜನಾ ಟೊಂಬರೆ, ಸುರೇಖಾ ಬದಾಮಿ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here