ಸೆನ್ಸೆಕ್ಸ್ 88 ಅಂಕ ಏರಿಕೆ

0
4


ಮುಂಬೈ: ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ 88 ಅಂಕ ಜಿಗಿದು 37,840.64 ರಲ್ಲಿ ವಹಿವಾಟು ಆರಂಭಿಸಿತು.
ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ ಸಹ 41 ಅಂಕ ಏರಿಕೆ ಕಂಡು 11,382.50 ಯಲ್ಲಿ ವಹಿವಾಟು ಆರಂಭಿಸಿತು.
ಸೆನ್ಸೆಕ್ಸ್ ಅಂತರದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 37,907.78 ಮತ್ತು 37,737.31 ರಷ್ಟಿತ್ತು.
ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ 11,383.45 ಮತ್ತು 11,329.25 ಯಷ್ಟಿತ್ತು.
ಇಂಡಸ್ ಇಂಡ್ ಬ್ಯಾಂಕ್ ಶೇ. 2.83 ರಷ್ಟು ಏರಿಕೆ ಕಂಡು 1,682.50 ರೂ, ಸನ್‌ ಫಾರ್ಮಾ ಶೇ 2 ರಷ್ಟು ಏರಿಕೆ ಕಂಡು 251 ರೂ, ಯೆಸ್ ಬ್ಯಾಂಕ್ ಶೇ 2.72 ಏರಿಕೆ ಕಂಡು 463.75 ರೂ, ಭಾರ್ತಿ ಏರ್‌ಟೆಲ್ ಶೇ 1.62 ಏರಿಕೆ ಕಂಡು 342.80 ರೂ ನಷ್ಟಿತ್ತು.
ಎಚ್‌ಸಿಎಲ್ ಶೇ 1.44 ರಷ್ಟು ಇಳಿಕೆ ಕಂಡು 1013.40 ರೂ, ಹೀರೋಮೋಟೋ ಕಾರ್ಪ್ ಶೇ 1.34 ಇಳಿದು 2768.50 ರೂ, ಎಮ್‌ & ಎಮ್ ಶೇ 0.66 ಇಳಿಕೆ ಕಂಡು 680 ರೂ ಹಾಗೂ ಹಿಂದ್ ಯೂನಿಲಿವರ್ ಶೇ 0.59 ರಷ್ಟು ಕುಸಿದು 17355.90 ರೂ ನಷ್ಟಿತ್ತು.

loading...