ಸೇವಾ ಮನೊಭಾವನೆ ಬೆಳಸಿಕೊಳ್ಳಿ

0
69

ರಾಷ್ಟ್ರೀಯ ವಿಚಾರ ಸಂಕೀರ್ಣದಲ್ಲಿ ವಿದ್ಯಾರ್ಥಿಗಳಿಗೆ ಹಲಸಗಿ ಕಿವಿ ಮಾತು
ಕನ್ನಡಮ್ಮ ಸುದ್ದಿ-ಬೆಳಗಾವಿ: ಪ್ರಪಂಚದ ತರುಣ ದೇಶವಾದ ಭಾರತದಲ್ಲಿ ನಿಸ್ವಾರ್ಥ ಸೇವೆಯ ಮೂಲಕವೇ ದೇಶವನ್ನು ಮನ್ನಡೆಸುವದು ಎನ್‍ಎಸ್‍ಎಸ್ ಸ್ವಯಂ ಸೇವಕರ ಜವಾಬ್ದಾರಿಯಾಗಿದೆ, ದೇಶದಲ್ಲಿ 40 ಲಕ್ಷ ಸ್ವಯಂ ಸೇವಕರು ಭಾಗಿಯಾಗಿ ನಿರಂತರ ಸ್ವಚ್ಚತೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಡಾ. ಎಸ್. ಒ. ಹಲಸಗಿ ಅಭಿಪ್ರಾಯ ವ್ಯಕ್ತಪಡಿಸಿದಿರು.
ಬುಧವಾರ ಜರುಗಿದ ಖಾನಾಪೂರ ಪಟ್ಟಣದ ಮರಾಠಾ ಮಂಡಳ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ “ರಾಷ್ಟ್ರೀಯ ಸೇವಾ ಯೋಜನೆ ಕೊಶ” ಹಾಗೂ ಕಾಲೇಜಿನ ಎನ್ಎಸ್ಎಸ್ ಮತ್ತು ಎನ್.ಸಿಸಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸಮೂದಾಯ ಸೇವೆಗಳಲ್ಲಿ ಎನ್‍ಎಸ್‍ಎಸ್ ಹಾಗೂ ಎನ್‍ಸಿಸಿ ಘಟಕಗಳ ಪಾತ್ರ ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.
ಬೆಳಗಾವಿಯ ವಾಣಿಜ್ಯ ಮಹಾವಿದ್ಯಾಲಯದ ಪಾಧ್ಯಾಪಕ ಡಾ. ಎಂ. ಎಲ್. ಲಮಾನಿ ಕಾರ್ಯಕ್ರಮದ ಉಧ್ಘಾಟಸಿ ಮಾತನಾಡಿ, ದೇಶದ ಬೆಳವಣಿಗೆಗೆ ಎನ್‍ಎಸ್‍ಎಸ್ ಮತ್ತು ಎನ್‍ಸಿಸಿ ಘಟಕಗಳ ಕೊಡುಗೆಯನ್ನು ವಿಶ್ಲೇಷಿಸಿದರು.
ವೇದಿಕೆಯ ಮೇಲೆ ಮರಾಠಾ ಮಂಡಳದ ಆಡಳಿತ ಮಂಡಳಿಯ ಸದಸ್ಯ ಶಿವಾಜಿರಾವ ಪಾಟೀಲ ಅಧ್ಯಕ್ಷತೆ ವಹಿಸಿದ್ದರು ಇನ್ನೊರ್ವ ಸದಸ್ಯ ಪರಶುರಾಮನ್ನಾ ಗುರವ ವಿಶೇಷ ಆಮಂತ್ರಿತರಾಗಿ ಉಪಸ್ಥಿತರಿದ್ದರು.
ವಿವಿಧ ತಾಂತ್ರಿಕ ಗೊಷ್ಟಿಗಳಿಗೆ ಡಾ. ಬಿ. ಎಸ್. ನಾವಿ, ಡಾ. ಎಸ್. ಎನ್. ಪಾಟೀಲ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್. ಜಿ. ಸೊನ್ನದ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು ಡಾ. ಜೆ. ಕೆ. ಬಾಗೇವಾಡಿ ಪರಿಚಯಸಿದರು ಡಾ. ಡಿ. ಎಂ. ಮುಲ್ಲಾ ನಿರೂಪಿಸಿದರು ಪ್ರೊ. ಎಸ್. ಕೆ. ಪವಾರ ವಂದಿಸಿದರು.
ಕಾರ್ಯಕ್ರಮಕ್ಕೆ ವಿವಿಧ ಕಾಲೇಜಿನ ಐಕ್ಯೂಎಸಿ ಕೋಆರ್ಡಿನೆಟರ ಪ್ರೊ. ಬಿ. ಎಂ. ಹಮ್ಮಣ್ಣವರ ಉಪಸ್ಥಿತರಿದ್ದರು ಕಾಲೇಜುಗಳಿಂದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

loading...