ಸೋಮವಾರ ಎಂಇಎಸ್ ವಿರುದ್ಧ ಕನ್ನಡ ರಕ್ಷಣಾ ವೇದಿಕೆ ಪ್ರತಿಭಟನೆ

0
69

ಬೆಳಗಾವಿ

ನಾಡಹಬ್ಬ ರಾಜ್ಯೋತ್ಸವದ ದಿನದಂದು ಕರಾಳ ದಿನಾಚಾರಣೆ ಆಚರಿಸುವ ಎಂಇಎಸ್ ಗೆ ಅನುಮತಿ ನೀಡಬಾರದು ಎಂದು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ನೀಡಲಾಗುವುದು ಎಂದು ಕನ್ನಡ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಕೋಟ ಭಾಸ್ಕರ್ ಪೂಜಾರಿ ಹೇಳಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ‌ ಮಾತನಾಡಿದರು. ಬೆಳಗಾವಿಯಲ್ಲೇ ರಾಜ್ಯ ಮಟ್ಟದ ರಾಜ್ಯೋತ್ಸವದವನ್ನು ಆಚರಣೆ ಮಾಡಲಿದ್ದೇವೆ. ಗಡಿನಾಡ‌ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದ ವಿರುದ್ದವಾಗಿ ಎಂಇಎಸ್ ಆಚರಿಸುವ ಕರಾಳ ದಿನಕ್ಕೆ ಅನುಮತಿ ನೀಡಬಾರದು ಎಂದು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ನೀಡುತ್ತೇವೆ ಎಂದರು.

ಪ್ರಭು ರಾಠೋಡ, ಅನುಪೂರ್ಣೆಶ್ವರಿ, ಬಸವರಾಜ ಹಂಪಣ್ಣವರ, ರಾಮಚಂದ್ರ ಕಡಕೋಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...