ಸೌಕರ್ಯಗಳಿಲ್ಲದ ನೆಲಗಂಟಿ ಗ್ರಾಮ

0
17

ಗೋಕಾಕ,22: ಗ್ರಾಮೀಣ ಪ್ರದೇಶಗಳು ಸುಧಾರಣೆಯಾದಾಗ ಮಾತ್ರ

ಭಾರತ ಸುಧಾರಣೆಯಾಗುತ್ತವೆ ಎಂದು ರಾಷ್ಟ್ತ್ರಪಿತ ಮಹಾತ್ಮಾ ಗಾಂಧೀಜಿ

ಹೇಳಿದ ಮಾತು ಹಾಗೆಯೇ ಉಳಿದುಕೊಂಡಿದೆ ಎಂಬುದಕ್ಕೆ ವರದಿಯೊಂದಿಗೆ

ಪ್ರಕಟಗೊಂಡಿರುವ ಚಿತ್ರಗಳೇ ಸಾಕ್ಷಿಯಾಗಿವೆ.

ತಾಲೂಕಿನ ಕೊನೆಯ ಗ್ರಾಮವಾಗಿರುವ ನೆಲಗಂಟಿ ಮೂಲಭೂತ

ಸೌಕರ್ಯಗಳಿಂದ ವಂಚಿತವಾಗಿದ್ದು, ಇದು ಗ್ರಾಮ ಎಂದು ಗುರುತಿಸಲಾಗದಷ್ಟು

ಕುಗ್ರಾಮವಾಗಿ ಪರಿಣಮಿಸಿದೆ. ನೆಲಗಂಟಿ 660 ಜನರನ್ನು ಹೊಂದಿರುವ ಈ

ಗ್ರಾಮದಲ್ಲಿ ಹಿಂದುಳಿದ ವರ್ಗದ ಜನರ ಪ್ರಮಾಣವೇ ಅಧಿಕವಾಗಿದೆ. ಗ್ರಾಮದ

ನಡುಮಧ್ಯೆ ಕೊಳಚೆ ನೀರು ಹರಿಯುತ್ತಿರುವುದರಿಂದ ನಡುಗಡ್ಡೆಯಂತೆ

ಬಿಂಬಿತವಾಗುತ್ತಿದೆ ಗಟಾರ ಇಲ್ಲದ ಈ ಗ್ರಾಮದಲ್ಲಿ ಕೊಳಚೆ ನೀರು ರಸ್ತೆಯ

ತುಂಬೆಲ್ಲಾ ಹರದಾಡುತ್ತಿರುವುದು

ಸಾಮಾನ್ಯವಾಗಿದೆ. ಸುಲಧಾಳ ಗ್ರಾ.ಪಂ.

ವ್ಯಾಪ್ತಿಯನ್ನು ಒಳಗೊಂಡಿರುವ

ನೆಲಗಂಟಿ ಗ್ರಾಮ ಅಂಕಲಗಿಯಿಂದ

12 ಕಿ.ಮೀ ದೂರದಲ್ಲಿದೆ. ಮೂಲಭೂತ

ಸೌಕರ್ಯಗಳಿಂದ ವಂಚಿತಗೊಂಡಿದ್ದು,

ಬಸ್ ಸೌಲಭ್ಯವಿಲ್ಲ. ಹೀಗಾಗಿ ಈ

ಗ್ರಾಮದ ಜನತೆ ಖಾಸಗಿ ವಾಹನಗಳನ್ನು

ಅವಲಂಬಿಸುವುದು ಇಲ್ಲವೇ ಕಾಲ್ನಡಿಗೆ

ಮೂಲಕ ಸಂಚರಿಸಬೇಕಾದ

ಅನಿವಾರ್ಯ ಸ್ಥಿತಿ ಎದುರಾಗಿದೆ.

ದೇಶ ಸ್ವಾತಂತ್ರ್ಯಗೊಂಡು 6

ದಶಕಗಳು ಕಳೆದರೂ ಮೂಲಭೂತ

ಸೌಕರ್ಯಗಳನ್ನೇ ಕಾಣದ ಈ

ಗ್ರಾಮದ ಜನರು ದುರ್ದೈವಿಗಳು.

ತಮ್ಮ ಬೇಕು ಬೇಡಿಕೆಗಳನ್ನು

ಪೂರೈಸಿಕೊಳ್ಳಲು ಹೋರಾಟ

ನಡೆಸಬೇಕಾದ ಸ್ಥಿತಿಯನ್ನು

ಎದುರಿಸುವಂತಾಗಿದೆ. ಚರಂಡಿ

ವ್ಯವಸ್ಥೆಯನ್ನು ಹೊಂದದ ಈ ಗ್ರಾಮದ ಜನರು ಸಾಂಕ್ರಾಮಿಕ ರೋಗದ

ಭೀತಿಯನ್ನು ಎದುರಿಸುತ್ತಿದ್ದರೂ ಆರೋಗ್ಯ ಇಲಾಖೆ ಗಮನಹರಿಸದಿರುವುದು

ಸೋಜಿಗವಾಗಿದೆ. ಗ್ರಾಮದ ಯಾವುದೇ ಇಲಾಖೆಯ ಅಧಿಕಾರಿಗಳು ಭೇಟಿ

ನೀಡದೇ ಗ್ರಾಮ ಸುಧಾರಣೆಗೆ ಒತ್ತು ಕೊಡದಿರುವುದು ಅಚ್ಚರಿ ಮೂಡಿಸಿದೆ.

ಗೋಕಾಕ ಮತಕ್ಷೇತ್ರವು ಕಳೆದ 15 ವರ್ಷಗಳಿಂದ ಪ್ರತಿನಿಧಿಸುತ್ತಿರುವ

ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸದೇ ಅನ್ಯಾಯ ವೆಸಗಿದ್ದಾರೆ.

ಈಗಲೂದರೂ ಎಚೇತ್ತುಕೊಂಡು ಈ ಗ್ರಾಮದ ಅಭಿವೃದ್ದಿಗೆ ಶ್ರಮಿಸಬೇಕಾಗಿದೆ.

ಗ್ರಾಮದ ಮುಗ್ಧ ಜನತೆಗೆ ಮೋಸ ಮಾಡಿದ್ದಾರೆ ಎಂದು ಕೆಜೆಪಿ ತಾಲೂಕಾಧ್ಯಕ್ಷ

ಉಮೇಶ ನಿರ್ವಾಣಿ ಕನ್ನಡಮ್ಮಕ್ಕೆ ತಿಳಿಸಿದ್ದಾರೆ

loading...

LEAVE A REPLY

Please enter your comment!
Please enter your name here