ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ಕಬ್ಬಿನ ಬಿಲ್ ವಿಳಂಬ ಆಕ್ರೋಶಗೊಂಡ ರೈತರು

0
35

ಕನ್ನಡಮ್ಮ ಸುದ್ದಿ-ಚನ್ನಮ್ಮನ ಕಿತ್ತೂರು: ಹಿರೇನಂದಿ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ರೈತರಿಗೆ ಕಬ್ಬಿನ ಬಿಲ್ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವ ಹಿನ್ನಲೆಯಲ್ಲಿ ಕಿತ್ತೂರು ಭಾಗದ ರೈತರು ಕಬ್ಬಿನ ಬಿಲ್ ಕೊಡಿಸುವಂತೆ ಜಾನುವಾರಗಳೊಂದಿಗೆ ಇಲ್ಲಿನ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ನೀಡಿದರು.
ಮನವಿ ಸಲ್ಲಿಸಿ ಮಾತಾನಡಿದ ರೈತರು, ಹೆಂಡತಿ ಮಕ್ಕಳೊಂದಿಗೆ ಹಗಲು ರಾತ್ರಿ ದುಡಿದು ಕಾರ್ಖಾನೆಗೆ ಕಬ್ಬು ಕಳುಹಿಸಿ ಎರಡು ಮೂರು ವರ್ಷಗಳಾದರೂ ಈವರೆಗೂ ಸಮರ್ಪಕ ಹಣ ನೀಡುತ್ತಿಲ್ಲ. ಸತತ ನಾಲ್ಕು ವರ್ಷಗಳಿಂದ ಬರಗಾಲದಿಂದ ಕಂಗೆಟ್ಟಿದ್ದು, ಜಾನುವಾರುಗಳಿಗೆ ಮೇವು ಹಾಕದ ಪರಿಸ್ಥಿತಿ ತಲೆದೋರಿದೆ. ಹಣ ನೀಡುತ್ತೇವೆ ಎಂಬ ಆಶ್ವಾಸನೆ ನೀಡಿ ಕೇವಲ ಬೆರಳಣಿಕೆಯಷ್ಟು ಜನರಿಗೆ ಬಿಲ್ ನೀಡಿ ಬಾಯಿ ಮುಚ್ಚಿಸುವ ಕೆಲಸವನ್ನು ಕಾರ್ಖಾನೆ ಸಿಬ್ಬಂದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸುನೀಲ ಕಳಾಯಿ, ಕಲ್ಲಪ್ಪ ನಾಯ್ಕರ, ಬಸಪ್ಪ ಅಂಬಡಗಟ್ಟಿ, ಚನ್ನಪ್ಪ ಅಂಬಡಗಟ್ಟಿ, ಮಹಾವೀರ ಚಂದನ್ನವರ, ಗುಂಡು ದೇವಲತ್ತಿ, ಮಧು ಲೋಕುರ, ರವೀಂದ್ರ ದೇವಲತ್ತಿ, ಕಾಶೀಮ ಕಿತ್ತೂರು ಇತರರು ಇದ್ದರು.

loading...