ಸ್ಥಳಿಯರ ಸಹಮತದೊಂದಿಗೆ ಅವಿರೋದ ಆಯ್ಕೆ

0
24

ಕನ್ನಡಮ್ಮ ಸುದ್ದಿ-ಮುಂಡಗೋಡ: ಶಾಸಕರ ದುಡ್ಡಿನ ಅಹಂಕಾರ ಹಾಗೂ ತಾಲೂಕಿನ ಕಾಂಗ್ರೆಸ್ ಮುಖಂಡರ ಕ್ಷುಲಕ ರಾಜಕಾರಣದಿಂದಾಗಿ ಸುಮಾರು 35-40ವರ್ಷಗಳಿಂದ ಚುನಾವಣೆ ನಡೆಸದೆ ನಿರಂತರ ಸ್ಥಳಿಯರ ಸಹಮತದೊಂದಿಗೆ ಅವಿರೋದ ಆಯ್ಕೆ ಪ್ರಕ್ರಿಯೆ ನಡೆಸುತ್ತ ಬರಲಾಗಿದ್ದ ತಾಲೂಕಿನ ಕಲಕೇರಿ-ಅಂದಲಗಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಈ ಬಾರಿ ಚುನಾವಣೆ ನಡೆಯಿತು ಎಂದು ಕಲಕೇರಿ-ಅಂದಲಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷ ಬಾಪುಗೌಡ ಪಾಟೀಲ ಹೇಳಿದರು.
ಅವರು ಗುರುವಾರ ತಾಲೂಕಿನ ಕಲಕೇರಿ-ಅಂದಲಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸುವ ಮೂಲಕ ಶಾಸಕರು ಮತ್ತು ಕಾಂಗ್ರೆಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 13 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಕೂಡ ಪಡೆದುಕೊಳ್ಳಲಾಗದೆ ಸೋಲುಂಡಿರುವ ಕಾಂಗ್ರೆಸ್ ಮುಖಂಡರಿಗೆ ಭಾರೀ ಮುಖಭಂಗವಾದಂತಾಗಿದೆ. ಈ ಚುನಾವಣೆಯಿಂದ ಸಂಘಕ್ಕೆ ಒಂದೂವರೆ ಲಕ್ಷ ಹೊರೆಯಾಗಿದ್ದು, ಇದು ರೈತರ ಮೇಲೆ ಬಿದ್ದ ಹೊರೆಯಾಗಿದೆ. ತಾಲೂಕಿನ ಯಾವ ಸಹಕಾರಿ ಸಂಘಗಳಲ್ಲಿಯೂ ಸಹ ಚುನಾವಣೆ ಮಾಡಬಾರದು. ಚುನಾವಣೆ ನಡೆದರೆ ಸಂಘಗಳಿಗೆ ನಷ್ಟವಾಗುತ್ತದೆ ಎಂಬುವುದನ್ನು ಅರ್ಥಮಾಡಿಕೊಳ್ಳಬೇಕಿದೆ. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಮಾಡುವ ಇವರು, ಮುಂದಿನ ದಿನಗಳಲ್ಲಿ ಶಾಲಾಭಿವೃದ್ದಿ ಸಮಿತಿ ರಚನೆಯಲ್ಲಿಯೂ ಸಹ ರಾಜಕೀಯ ಬೆರೆಸಿ ಚುನಾವಣೆ ನಡೆಸಲು ಹಿಂಜರಿಯುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಹಲವು ಮುಖಂಡರ ಹಗರಣಗಳ ಸರಮಾಲೆಯೇ ಇದ್ದು ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಬಹಿರಂಗಪಡಿಸುತ್ತೇನೆ. ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಶಾಸಕರು ಮತ್ತು ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳು ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳೊಂದಿಗೆ ಸೇರಿ ಹಸ್ತಕ್ಷೇಪ ಮಾಡುತ್ತಿರುವುದರಿಂದ ಗ್ರಾ.ಪಂ ಅಧ್ಯಕ್ಷರು ಮತ್ತು ಸದಸ್ಯರ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ ಇದಕ್ಕೆ ನಾಗನೂರ, ಇಂದೂರ ಮತ್ತು ಸಾಲಗಾಂವ ಗ್ರಾಮ ಪಂಚಾಯಿತಿಗಳೇ ಬಲವಾದ ಸಾಕ್ಷಿಯಾಗಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೈನಳ್ಳಿಯ ಬಿಜೆಪಿ ಮುಖಂಡ ಸಿ.ಕೆ.ಅಶೋಕ ರೈತ ಸಮೂಹ ಒಗ್ಗಟ್ಟಿನಿಂದ ಇರುವ ಸಹಕಾರಿ ಸಂಘದಲ್ಲಿ ರಾಜಕೀಯವಾಗಿರುವುದು ಖಂಡನೀಯ. ಸಹಕಾರಿ ಸಂಘಗಳು ಬೆಳೆಯಬೇಕಾದರೆ ರಾಜಕೀಯ ತರಬಾರದು. ರೈತರು ಕಷ್ಟಪಟ್ಟು ಸಂಘವನ್ನು ಕಟ್ಟಿರುತ್ತಾರೆ. ಯಾರದೋ ಸ್ವಹಿತಕ್ಕೋಸ್ಕರ ಚುನಾವಣೆ ನಡೆಸಿ ಸಂಘವನ್ನು ಒಡೆಯುವುದು ಸಮಂಜಸವಲ್ಲ ಎಂದರು. ಮೈನಳ್ಳಿ ಗ್ರಾ.ಪಂ ಕಾರ್ಯಾಲಯದಲ್ಲಿ ವಿವಿಧ ವಸತಿ ಯೋಜನೆಯಡಿಯ ಫಲಾನುಭವಿಗಳಿಂದ ದಾಖಲೆ ಸಂಗ್ರಹಣೆಗೆಂದು ಹೇಳಿ ರಸೀದಿ ಇಲ್ಲದೇ 3ರಿಂದ4 ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ ಈ ಬಗ್ಗೆ ವಿಚಾರಿಸಿದಾಗ ಹಾರಿಕೆ ಉತ್ತರ ನೀಡುತ್ತಾರೆ. ಅಲ್ಲದೇ ಸರಕಾರಿ ಯೋಜನೆ ವಿತರಿಸುವಲ್ಲಿ ಸಂಪೂರ್ಣ ಪಕ್ಷಪಾತ ಮಾಡಲಾಗುತ್ತಿದೆ ಎಂದು ಮೈನಳ್ಳಿ ಗ್ರಾಮಸ್ಥರು ಆರೋಪಿಸಿದರು. ಈ ವೇಳೆ ಬಿಜೆಪಿ ಮುಖಂಡ ಕರಿಯಣ್ಣ ಪಾಟೀಲ, ವಾಯ್.ಪಿ.ಪಾಟೀಲ, ನಾರಾಯಣ ಗುರಪ್ಪನವರ, ಮಾರುತಿ ಬನವಾಸಿ, ನಿಂಗಜ್ಜ ಕೋಣನಕೇರಿ, ನಾರಾಯಣ ಕ್ಯಾತನಳ್ಳಿ ಇತರರಿದ್ದರು.

loading...