ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

0
17

ಕನ್ನಡಮ್ಮ ಸುದ್ದಿ ಹುಬ್ಬಳ್ಳಿ: ಮೈತ್ರಿ ವಿಚಾರ ಜಿಲ್ಲಾ ಮಟ್ಟದ ನಾಯಕರಿಗೆ ಬಿಟ್ಟಿದ್ದು. ಲೋಕಸಭೆ ಮೈತ್ರಿ ವಿಚಾರ ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನವಾಗುತ್ತೆ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮನ್ವಯತೆಯಿಂದ ನಡೆಯಬೇಕು. ಹೀಗಾಗಿ ಕೆಲವೊಂದು ಹೊಂದಾಣಿಕೆ ಅನಿವಾರ್ಯ ಎಂದರು.
ಬಾದಾಮಿಗೆ ತೆರಳುವ ಮುನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಚುನಾವಣೆಯಲ್ಲಿ ಮೈತ್ರಿ ವಿಚಾರವನ್ನು ಆಯಾ ಜಿಲ್ಲಾ ಮಟ್ಟದ ನಾಯಕರಿಗೆ ಬಿಡಲಾಗುವುದು ಎಂದರು.
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬೇಕು ಅಥವಾ ಬೇಡ ಬೇಡವೋ, ಎಂಬುದು ಕುರಿತಂತೆ ಸಮನ್ವಯ ಸಮಿತಿ ನಿರ್ಧಾರ ಕೈಗೊಳ್ಳುತ್ತದೆ. ಲೋಕಸಭಾ ಚುನಾವಣೆಯಲ್ಲಿ ಬಹುತೇಕ ಮೈತ್ರಿ ನಡೆಸುವ ಸಂಭವವಿದೆ ಎಂಬ ಇಂಗಿತ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರು ಕಾಲ ಬಂದಾಗ ನೋಡೋಣ ಬಿಡಿ ಎಂದು ಹಾರಿಕೇ ಉತ್ತರ ನುಡಿದರು ಪ್ರಸಕ್ತ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವವರಿಗೆ ಮೈತ್ರಿ ಧರ್ಮ ಪಾಲನೆ ಅತ್ಯಗತ್ಯ ಎಂದ ಅವರು ಇದು ಕಾಂಗ್ರೆಸ್ ಮತ್ತು ಜೆಡಿಎಸ್ ಉಭಯ ಪಕ್ಷಗಳ ಸಮನ್ವಯ ವಾಗುತ್ತದೆ ಎಂದು ತಿಳಿಸಿದರು. ಶಾದಿ ಭಾಗ್ಯವನ್ನು ಕೈಬಿಡುವ ವಿಷಯ ಕುರಿತಂತೆ ಮಾತನಾಡಿದ ಅವರು ಈ ಕುರಿತು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾಗುತ್ತದೆ, ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

loading...