ಸ್ಮಾರ್ಟ್ ಸಿಟಿಯಲ್ಲಿ ಕಳಪೆ ಕಾಮಗಾರಿ: ಶಾಸಕ ಅಭಯ ಪಾಟೀಲ ಆರೋಪ

0
46

 

ಕನ್ನಡಮ್ಮ ಸುದ್ದಿ- ಬೆಳಗಾವಿ: ನಗರದಲ್ಲಿ ತಿಲಕವಾಡಿಯ ಎಕ್ಷನ ಡಿಪೋದಲ್ಲಿ ಸ್ಮಾರ್ಟ್ ಸಿಟಿಯಡಿ ಕೈಗೊಂಡಿರುವ ಕಾಮಗಾರಿ ಕಳಪೆ ಮಟ್ಟದಾಗಿತ್ತು. ತನಿಖೆ ಕೈಗೊಳ್ಳಬೇಕೆಂದು ಶಾಸಕ ಅಭಯ ಪಾಟೀಲ ಆಗ್ರಹಿಸಿದ್ದಾರೆ.

ಅವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲನೆ ನಡೆಸುವ ಮೂಲಕ ತನಿಖೆಗೆ ಆಗ್ರಹಿಸಿದ್ದಾರೆ.

ಸ್ಮಾರ್ಟ್ ಸಿಟಿಯಲ್ಲಿ‌ ಕೈಗೊಂಡಿರುವ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿವೆ ಎನ್ನುವುದಕ್ಕೆ ಎಕ್ಷನ ಡಿಪೋದಲ್ಲಿ ಕಾಲುವೆ ಕಾಮಗಾರಿಯೇ ಜೀವಂತ ಉದಾಹರಣೆಯಾಗಿದೆ ಎಂದು ಆರೋಪಿಸಿದ್ದಾರೆ.ಕಾಲುವೆ ನಿರ್ಮಾಣದ ಕಾಮಗಾರಿ ಯಲ್ಲಿ ಶೇ.90ರಷ್ಟು ಮರಳು ಮಣ್ಣು ಮಿಶ್ರಿತವಾಗಿದೆ. ಅಧಿಕಾರಿಗಳು ಸಹ ಯಾವ‌ ರೀತಿಯಾಗಿ ಮರಳು ಪರಿಶೀಲನೆ ನಡೆಸಿದ್ದಾರೆ ಎಂಬುವುದು ತಿಳಿಯುತ್ತಿಲ್ಲಾ.ಕಾಂಕ್ರೀಟ್ ನಲ್ಲಿ ಸಿಮೇಂಟ್ ಕಡಿಮೆಯಾಗಿ ಬಳಕೆ‌ ಮಾಡಿದ್ದಾರೆ.ಆದ್ದರಿಂದ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

loading...