ಸ್ವಚ್ಛತೆಗೆ ಆದ್ಯತೆ ನೀಡಿ: ಉಪವಿಭಾಗಾಧಿಕಾರಿ ರೋಷನ್‌

0
17

ಕನ್ನಡಮ್ಮ ಸುದ್ದಿ-ಸವಣೂರ: ಶೌಚಾಲಯದ ತ್ಯಾಜ್ಯದಿಂದ ಹಲವಾರು ರೋಗಗಳು ಉಂಟಾಗುತ್ತಿದ್ದು, ಅದನ್ನು ಚರಂಡಿಗಳಿಗೆ ಬಿಡದಂತೆ ಸಾರ್ವಜನಿಕರು ಗಮನಹರಿಸಿ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಸ್ವಚ್ಛ ನಗರವನ್ನಾಗಿಸಬೇಕು ಎಂದು ಉಪವಿಭಾಗಾಧಿಕಾರಿ ಎಂ ರೋಷನ್‌ ಹೇಳಿದರು.
ಪ್ರಧಾನ ಮಂತ್ರಿ ಸ್ವಚ್ಛಭಾರತ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪಟ್ಟಣದ ಅಂಬೇಡ್ಕರ ವೃತ್ತದಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಂಬಾಗದ ರಸ್ತೆಯನ್ನು ಸ್ವಚ್ಚಗೊಳ್ಳಿಸುವ ಮೂಲಕ ಬೆಳಗಿನ 5 ಘಂಟೆಯಿಂದ ಪೌರ ಕಾರ್ಮಿಕರೊಂದಿಗೆ ಕಾರ್ಯಪ್ರವೃತರಾಗಿ ಸುದ್ಧಿಗಾರರೊಂದಿಗೆ ಅವರು ಮಾತನಾಡಿದರು.
ತಾಲ್ಲೂಕಿನಾಧ್ಯಂತ ಮುಂಗಾರು ಮಳೆ ಪ್ರಾರಂಭವಾದ್ದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿದೆ. ಇವುಗಳ ನಿಯಂತ್ರಣಕ್ಕೆ ಅಧಿಕಾರಿಗಳೊಂದಿಗೆ ಸಾರ್ವಜನಿಕರು ಸಹಕರಿಸಿದಾಗ ಪಟ್ಟಣವನ್ನು ಸೊಳ್ಳೆಮುಕ್ತ ಮಾಡಲು ಸಾದ್ಯವಾಗುತ್ತದೆ.
ಸವಣೂರ ಪಟ್ಟಣದಲ್ಲಿ ಸೊಳ್ಳೆಗಳಿಂದ ಡೆಂಗ್ಯೂ, ಮಲೇರಿಯಾ, ಚಿಕ್ಕೂನ್‌ ಗುನ್ಯಾ, ಕ್ಷಯ ರೋಗಗಳಂತ ಹತ್ತು ಹಲವಾರು ಸಾಂಕ್ರಾಮಿಕ ರೋಗಗಳು ಪ್ರಾರಂಭವಾಗಿದ್ದು ಇವುಗಳಿಂದ ಸಾಕಷ್ಟು ಜನರು ಅನಾರೋಗ್ಯದಿಂದ ಬಳಲುವಂತಾಗಿದೆ. ಆದ್ದರಿಂದ, ಇವುಗಳ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಪ್ರಮುಖವಾಗಿದೆ.
ಸವಣೂರ ಪಟ್ಟಣವನ್ನು ಒಂದು ಮಾದರಿ ನಗರವನ್ನಾಗಿ ನಿರ್ಮಾಣ ಮಾಡುವ ಮಹದಾಸೇಯನ್ನಿಟ್ಟುಕೊಂಡು ನಗರದ ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಈ ಹಿನ್ನೇಲೆಯಲ್ಲಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸುಚಿಯಾಗಿಟ್ಟುಕೊಂಡು ಸೊಳ್ಳೆಗಳಿಗೆ ಆಸ್ಪದ ನೀಡದಂತೆ ಕ್ರಮ ವಹಿಸಬೇಕು. ಶೌಚಾಲಯದ ತ್ಯಾಜ್ಯವನ್ನು ಚರಂಡಿಗಳಿಗೆ ಬಿಡದೆ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಿ ಸ್ಥಳದಲ್ಲಿಯೆ ಇಂಗಿಸುವಂತೆ ಮಾಡಬೇಕು. ಇಂಗು ಗುಂಡಿಗಳನ್ನು ಮಾಡಿದೆ ಚರಂಡಿಗಳಿಗೆ ಹರಿಬಿಟ್ಟಿ ಮನೆಗಳಿಗೆ ನೋಟಿಸ್‌ ನೀಡಿ ಪ್ರತಿ ಮನೆಗೆ 2 ಸಾವಿರ ದಂಡ ಹಾಗುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಸವಣೂರ ನಗರವನ್ನು ಸ್ವಚ್ಚವಾಗಿಡುವ ನಿಟ್ಟಿನಲ್ಲಿ ಪ್ರಮುಖವಾಗಿ ಪಟ್ಟಣದಲ್ಲಿರುವ ಸಾರ್ವಜನಿಕ ಶೌಚಾಲಯ, ಮೂತ್ರಾಲಯಗಳನ್ನು ಫೀನಾಯಿಲ್‌ನಿಂದ ಸ್ವಚ್ಚಗೊಳಿಸಿ ಅವುಗಳಿಗೆ ಬಣ್ಣ ಬಳಿಯುವಂತಾಗಬೇಕು. ರಸ್ತೆ ಬದಿಯಲ್ಲಿರುವ ಗಿಡ ಕಂಟೆಗಳನ್ನು ಕತ್ತರಿಸಿ ಪೌಡರ್‌ ಸಿಂಪರಣೆ ಮಾಡಿ ಪಾಗಿಂಗ್‌ ಮಾಡುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಖಲಂದರ ಅಕ್ಕೂರ ಉಪಾಧ್ಯಕ್ಷೆ ರಾಜೇಶ್ವರಿ ಬುಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ ಸಂಕ್ಲಿಪೂರ, ಪುರಸಭೆ ಪ್ರಭಾರಿ ಆರೋಗ್ಯ ನಿರೀಕ್ಷಕ ರಮೇಶ ಮುಂಜೋಜಿ, ಪ್ರಭಾರಿ ಮುಖ್ಯಾಧಿಕಾರಿ ಮಹೇಶ ದೊಡ್ಡಣ್ಣನವರ, ಜೂನಿಯರ ಪ್ರೋಗ್ರಾಮರ ಭಗವಂತ, ಕಿರಿಯ ಅಭಿಯಂತರ ಸಂಗಮೇಶ ಹಾದಿಮನಿ, ಕಂದಾಯ ಅಧಿಕಾರಿ ಚಂದ್ರಶೇಖರ ಬಾರಕೇರ, ಪ್ರಭು ಬಾಲೇಹೊಸೂರ, ಪುರಸಭೆ ಸಿಬ್ಬಂದಿ, ಕಾರ್ಮಿಕರು ಹಾಗೂ ಸಾರ್ವಜನಿಕರು ಇದ್ದರು.

loading...