ಸ್ವರಚಿತ ಗ್ರಂಥಗಳ ಬಿಡುಗಡೆ ಕಾರ್ಯಕ್ರಮ

0
32

ಕುಮಟಾ: ನಿವೃತ್ತ ಶಿಕ್ಷಕಿ ಹಾಗೂ ಹಿರಿಯ ಲೇಖಕಿ ಶಾರದಾ ಕೃಷ್ಣಮೂರ್ತಿ ಭಟ್ಟ್ ಅವರ ಸ್ವರಚಿತ 3 ಗ್ರಂಥಗಳ ಬಿಡುಗಡೆ ಕಾರ್ಯಕ್ರಮವು ತಾಲೂಕಿನ ಕೆಳಗಿನ ಕೂಜಳ್ಳಿಯ ಶ್ರೀ ಶಾಂತಿಕಾ ಪರಮೇಶ್ವರ ದೇವಾಲಯದ ಸಭಾಭವನದಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಶಿಕ್ಷಕರು ಹಾಗೂ ಹಿರಿಯ ಸಾಹಿತಿಗಳು ಆದ ಪ್ರೊ.ಜಿ.ಎಮ್.ಭಟ್ಟ್ ಮಾತನಾಡಿ,” ಸಾಮಾನ್ಯವಾಗಿ ಯಾವುದೇ ಕೆಲಸಕ್ಕೇ ಆದರೂ ಯಾರದರೂ ಒಬ್ಬರ ಪ್ರೇರಣೆ ಅತೀ ಅವಶ್ಯಕ. ಆಗಮಾತ್ರ ನಮ್ಮಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಛಲ ಮೂಡಿಬರಲು ಸಾಧ್ಯ. ಆ ಪ್ರೇರಣೆ ಹಾಗೂ ಸಾಧಿಸಬೇಕು ಎಂಬ ಛಲದ ಪ್ರತಿಫಲವೇ ಇಂದು ಶಾರದಾ ಭಟ್ಟರು ಬಿಡುಗಡೆಗೊಳಿಸುತ್ತಿರುವ ಈ ಪುಸ್ತಕಗಳು. ಇಂದು ಬಿಡುಗಡೆಗೊಳ್ಳುತ್ತಿರುವ ಶಾರದಾ ಭಟ್ಟರ ಸ್ವರಚಿತ ಈ 3 ಕೃತಿಗಳು ಜನರಿಗೆ ತೀರಾ ಹತ್ತಿರವಾಗುವಂತಹದ್ದು. ಇದರಂತೆಯೇ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಪುಸ್ತಕಗಳನ್ನು ಅವರು ಬರೆದು ಸಮಾಜಕ್ಕೆ ಒಂದು ದಾರಿದೀಪವಾಗಿ ಪರಿಣಮಿಸಲಿ “ಎಂದು ಹಾರೈಸಿದರು. ಈ ವೇಳೆ ಲೇಖಕಿ ಶಾರದಾ ಭಟ್ಟರು ಬರೆದ “ಉತ್ತರ” ಎಂಬ ನಾಟಕ ಕೃತಿಯನ್ನು ಅಥಿತಿಗಳಾದ ಪ್ರೊ.ಜಿ.ಎಲ್.ಹೆಗಡೆ, “ಟಿಸಿಲು” ಎಂಬ ಭಜನಾ ಕೃತಿಯನ್ನು ಹರಿಶ್ಚಂದ್ರ ಭಟ್ಟ್ ಹಾಗೂ “ಜೀವನ” ಎಂಬ ಚುಟುಕು ಕೃತಿಯನ್ನು ನಿವೃತ್ತ ಮುಖ್ಯಾಧ್ಯಾಪಕ ಅರುಣ ಉಭಯಕರ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಸಾಹಿತಿಗಳು ಕೃತಿಗಳ ಕಿರುಪರಿಚಯವನ್ನು ಮಾಡಿದರು. ಪ್ರಾರಂಭದಲ್ಲಿ ಲೇಖಕಿ ಶಾರದಾ ಭಟ್ಟ್ ಪ್ರಾಸ್ಥಾವಿಕ ಮಾತನಾಡಿ ತಮ್ಮ ಜೀವನದಲ್ಲಿ ತಾವು ನಡೆದುಬಂದ ಹಾದಿ ಹಾಗೂ ವೃತ್ತಿ ಜೀವನದ ಕುರಿತು ಸವಿವರವಾಗಿ ತಿಳಿಸಿಕೊಟ್ಟರು. ಮಾಜಿ ಜಿಲ್ಲಾ ಪಂಚಾಯತ ಸದಸ್ಯೆ ರೋಶನಿ ಭಟ್ಟ್ ಅತಿಥಿಗಳನ್ನು ಸ್ವಾಗತಿಸಿದರೆ ಶಿಕ್ಷಕ ಮೂರ್ತಿ ಭಟ್ಟ್ ನಿರೂಪಸಿದರು.
ಕಾರ್ಯಕ್ರಮದಲ್ಲಿ ಕೂಜಳ್ಳಿ ಗ್ರಾ.ಪಂ ಅಧ್ಯಕ್ಷೆ ಯಶೋಧಾ ನಾಯ್ಕ, ಶಿಕ್ಷಕ ಮಂಜುನಾಥ ನಾಯ್ಕ, ಪ್ರೊ. ಮೋಹನ್ ಡಿ ನಾಯ್ಕ, ಕ್ರಷ್ಣಮೂರ್ತಿ ಭಟ್ಟ್, ಸಾಹಿತಿ ಹಾಗೂ ಲೇಖಕ ವಿಠ್ಠಲದಾಸ ಕಾಮತ, ಕ.ಸಾ.ಪ ಸದಸ್ಯ ಸುರೇಶ್ ನಾಯ್ಕ, ವಾಮನ ನಾಯ್ಕ, ಸುರೇಶ್ ಭಟ್ಟ್, ಗಣೇಶ್ ಭಟ್ಟ್, ಪಿ.ಆರ್.ಹೆಗಡೆ, ಗೌತಮ್ ಭಟ್ಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

loading...