ಹಜರತಲಿ ದೇಗಿನಾಳ ನಿಸ್ವಾರ್ಥ ಸೇವೆ ಶ್ಲಾಘನೀಯ :ಪ್ರೊ.ಎಲ್.ವಿ.ಪಾಟೀಲ

0
26


ಕನ್ನಡಮ್ಮ ಸುದ್ದಿ
ಸಂಕೇಶ್ವರ 01: ಸರಕಾರದ ಉನ್ನತ ಸೇವೆಯಲ್ಲಿದ್ದರೂ ಸಹ ಹಜರತಲಿ ದೇಗಿನಾಳ ಅವರು ತಮ್ಮ ಪ್ರಾಮಾಣಿಕತೆ ಹಾಗೂ ನಿಸ್ವಾರ್ಥ ಸೇವೆಯಿಂದ ಯಶಸ್ಸಿನ ಉತ್ತುಂಗಕ್ಕೇರುವುದು ಶತಸಿದ್ಧವೆಂದು ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾಧ್ಯಕ್ಷ ಪ್ರೊ.ಎಲ್.ವ್ಹಿ.ಪಾಟೀಲ ಹೇಳಿದರು.

ಅವರು ಇತ್ತೀಚೆಗೆ ನಗರದ ಸರಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಸಿರಿಗನ್ನಡ ಮಹಿಳಾ ವೇದಿಕೆ ಹುಕ್ಕೇರಿ, ಲೋಕವಿದ್ಯಾ ಪ್ರಕಾಶನ, ಹವ್ಯಾಸಿ ಕಲಾ ಬಳಗ ಹಾಗೂ ಡಾ.ಗುರುಪಾದ ಮರಿಗುದ್ದಿ ಪರಿವಾರದ ಸಂಯುಕ್ತಾಶ್ರಯದಲ್ಲಿ ಎರ್ಪಡಿಸಿದ ನಿಪ್ಪಾಣಿ ವಾಣಿಜ್ಯ ಇಲಾಖೆ ಉಪ ಆಯುಕ್ತÀ್ತ ಹಾಗೂ ಸಾಹಿತಿ ಹಜರತ್‍ಅಲಿ ದೇಗಿನಾಳರ ವರ್ಗಾವಣೆ ನಿಮಿತ್ಯ ಸನ್ಮಾನ ಮತ್ತು ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ವಾಂಸ ಡಾ.ಗುರುಪಾದ ಮರಿಗುದ್ದಿ ಮಾತನಾಡಿ, ನಿಪ್ಪಾಣಿಯಂತಹ ಗಡಿಭಾಗದಲ್ಲಿ ಕನ್ನಡದ ಬೆಳವಣಿಗೆಗೆ ಹಜರತ್‍ಅಲಿ ದೇಗಿನಾಳ ಅವರ ಸೇವೆ ಗುರುತರವಾಗಿದ್ದು, ಒಬ್ಬ ಸರಕಾರಿ ಅಧಿಕಾರಿಯಾಗಿ, ಕನ್ನಡ ಕಟ್ಟುವ ಕೆಲಸದಲ್ಲಿ ತೋರಿದ ಆಸ್ಥೆ ಮತ್ತು ಬದ್ಧತೆ ಇನ್ನುಳಿದ ಸರಕಾರಿ ಅಧಿಕಾರಿಗಳಿಗೆ ತೋರಿದಲ್ಲಿ ಇನ್ನೊಂದು ವರ್ಷದಲ್ಲಿ ನಿಪ್ಪಾಣಿ ಕನ್ನಡಮಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಗಡಿಭಾಗದಲ್ಲಿ ಕನ್ನಡಪರ ಕಾಳಜಿಯುಳ್ಳ ಅಧಿಕಾರಿಗಳನ್ನು ನೇಮಿಸುವತ್ತ ಸರ್ಕಾರ ಗಮನಹರಿಸಬೇಕೆಂದರು.

ಪ್ರೊ.ಕುಮಾರ ತಳವಾರ ಅನಿಸಿಕೆ ಹಂಚಿಕೊಂಡರು. ನಾನಾ ಸಂಘ ಸಂಸ್ಥೆಗಳಿಂದ ನಿಪ್ಪಾಣಿ ಕಸಾಪ ನಿಕಟಪೂರ್ವ ಅಧ್ಯಕ್ಷರಾಗಿಯೂ ಕನ್ನಡಮ್ಮನ ಗುರುತರ ಸೇವೆಗೈದ ಹಜರತ್ ಅಲೀ ದೇಗಿನಾಳರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವಿಕರಿಸಿ ಮಾತನಾಡಿದ ದೇಗಿನಾಳ ಅವರು ನಿಪ್ಪಾಣಿಯ ನಂಟು ಮತ್ತು ಕನ್ನಡ ಕಟ್ಟುವ ಕೆಲಸಗಳನ್ನು ನೆನೆಸಿಕೊಂಡರು.
ಈ ಸಂದರ್ಭದಲ್ಲಿ ನಿಪ್ಪಾಣಿ ಗಡಿನಾಡು ಕನ್ನಡ ಬಳಗದ ನೂತನ ಅಧ್ಯಕ್ಷ ಮಹಾದೇವ ಬರಗಾಲೆ, ಕ.ಸಾ.ಪ.ವಲಯ ಅಧ್ಯಕ್ಷ ಕಿರಣ ನೇಸರಿ, ಶಂಕರಗೌಡ ಪಾಟೀಲ, ಹಮಿದಾಬೇಗಂ ದೇಸಾಯಿ, ಸಂಕೇಶ್ವರ ಸರಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ದತ್ತಾತ್ರೆಯ ದೊಡ್ಡಮನಿ, ಕಿರಣ ನೇಸರಿ, ಡಾ.ಶ್ರೀಶೈಲ ಮಠಪತಿ, ಪ್ರೊ.ವ್ಹಿ.ಎಂ.ಮಗದುಮ ಸೇರಿದಂತೆ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
ಕವಿ ಆಕಬರ ಸನದಿ ಭಾವಗೀತೆ ಹಾಡಿದರು. ಕವಯತ್ರಿ ಹಮೀದಾ ಬೇಗಂ ದೇಸಾಯಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಎಂ.ಎಸ್.ಖರಾಡಿ ನಿರೂಪಿಸಿದರು. ಕಾಡೇಶ ಬಸ್ತವಾಡೆ ವಂದಿಸಿದರು.
..

loading...