ಹನಿ ಟ್ರ್ಯಾಪ್ : ಐವರು ವ್ಯಕ್ತಿಗಳು ಅಂಧರ

0
55

ಹನಿ ಟ್ರ್ಯಾಪ್ : ಐವರು ವ್ಯಕ್ತಿಗಳು ಅಂಧರ

ಬೆಳಗಾವಿ: ಹಣದ ವ್ಯಾಮೋಹಕ್ಕೆ ಬಿದ್ದು,
ಪ್ರಭಾವಿಶಾಯಾಗುವ ಹಗಲು ಕನಸು ಕಂಡಿದ್ದ ಐವರು ಹನಿ ಟ್ರ್ಯಾಪ್
ಮಿಖಾಗಳನ್ನು ಬುಧವಾರ ಪೋಲಿಸರಿಗೆ ತಗಲಾಕೋಂಡಿದ್ದಾರೆ.

ಮಹಿಳೆಯರ ಮೂಲಕ ಜಮಖಂಡಿ ಮೂಲದ ವ್ಯಕ್ತಿಗೆ ಹನಿ ಟ್ರ್ಯಾಪ್ ದಿಂದ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮೂವರು ಮಹಿಳೆಯರ ಸಮೇತ ಇಬ್ಬರು ಪುರುಷರನ್ನು ಬಂಧಿಸಲಾಗಿದೆ.

ಅಥಣಿಯ ಸದಾಶಿವ ಚಿಪ್ಪಲಟ್ಟಿ ( 28), ಬೆಳಗಾವಿಯ ನೆಹರು ನಗರದ ರಘುನಾಥ ಧುಮಾಳೆ (32) ಸವದತ್ತಿಯ ಗೌರಿ ಲಮಾಣಿ (27), ಮಂಜುಳಾ ಜತ್ತೆನ್ನವರ ( 32), ಸವದತ್ತಿ ತಾಲೂಕಿನ ಉಗರಗೋಳದ ಸಂಗೀತಾ ಕಣಕಿಕೊಪ್ಪ ಬಂಧಿತ ಆರೋಪಿಗಳು.

ಐಶಾರಾಮಿ ಜೀವನದ ಆಸೆಯಿಂದಾಗಿ ಜಮಖಂಡಿ ಮೂಲದ ವ್ಯಕ್ತಿಯ ಬ್ರೇನ್ ವಾಶ್ ಮಾಡಿ, ದೈನಿಕ ಸಂಪರ್ಕ ನಡೆಸಲು ನಗರ ಲಾಡ್ಜ್ ಗೆ ಕರೆಸಿಕೊಂಡು ವ್ಯಕ್ತಿಯೊಂದಿಗೆ ಸಲುಗೆ ಬೆಳೆಸಿಕೊಂಡ ಈ ಮಹಿಳೆಯರು ಹನಿಟ್ರ್ಯಾಪ್ ಜಾಲ ಬೀಸಿ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವದಾಗಿ ಹೇಳಿ 10 ಲಕ್ಷ ಬೇಡಿಕೆ ಇಟ್ಟಿದ್ದಾರೆ ಇದಕ್ಕೆ ಬಗ್ಗದರಿಂದ 5 ಲಕ್ಷ ರೂ ವಾದರೂ ನೀಡು ಎಂದು ದುಂಬಾಲು ಬಿದಿದ್ದಾರೆ. ತದನಂತರ ವ್ಯಕ್ತಿ ಪೊಲೀಸರಿಗೆ ಮಾಹಿತಿ ತಿಳಿಸಿದಾಗ
ಈ ಐವರನ್ನು ಲಾಡ್ಜ್ ನಲ್ಲಿ ವಿಚಾರಣೆ ನಡೆಸಿದಾಗ ಹನಿಟ್ರ್ಯಾಪ್ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಮಾರ್ಕೆಟ್ ಎಸಿಪಿ ಎನ್.ವಿ. ಭರಮನಿ, ಮಾಳಮಾರುತಿ ಇನ್ಸಪೆಕ್ಟರ್ ಬಿ.ಆರ್. ಗಡ್ಡೇಕರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಹನಿಟ್ರ್ಯಾಪ್ ಜಾಲವನ್ನು ಭೇದಿಸಿದ್ದಾರೆ.‌

loading...