ಹಬ್ಬಗಳು ಭಾರತೀಯ ಸಂಸ್ಕøತಿಯ ಪ್ರತೀಕ: ಉಲ್ಲಾಸ್

0
26

ಕನ್ನಡಮ್ಮ ಸುದ್ದಿ-ಧಾರವಾಡ: ಪಂಚಮಿ ಹಬ್ಬವು ಒಂದು ವಿಶೇಷತೆಯನ್ನು ಒಳಗೊಂಡಿದ್ದು, ಅಣ್ಣ-ತಂಗಿಯರ ಹಬ್ಬವೆಂದೆ ಸಂಭ್ರಮದಿಂದ ಆಚರಿಸುತ್ತಾರೆ. ನಮಗೆ ನಮ್ಮ ಹಿರಿಯರು ಹಬ್ಬ ಹರಿದಿನಗಳ ಸಂಪ್ರದಾಯವನ್ನು ತಿಳಿಸುತ್ತಾ ಬಂದಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಯೋಜನಾಧಿಕಾರಿ ಉಲ್ಲಾಸ್ ಮೇಸ್ತ ಹೇಳಿದರು.
ತಾಲೂಕಿನ ಉಪ್ಪಿನಬೇಟಗೇರಿ ವಲಯದ ಪುಡಕಲಕಟ್ಟಿ ಕಾರ್ಯಕ್ಷೇತ್ರದ ನಿಸರ್ಗ ಜ್ಞಾನ ವಿಕಾಸ ಕೇಂದ್ರದಲ್ಲಿ ಪಂಚಮಿ ಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಬ್ಬಗಳು ನಮ್ಮ ಭಾರತೀಯ ಸಂಸ್ಕøತಿಯ ವಿಶೇಷತೆಯನ್ನು ಪ್ರತಿಬಿಂಬಿಸುತ್ತವೆ ಅದರಲ್ಲೂ ಹಳ್ಳಿ ಹಬ್ಬಗಳ ಆಚರಣೆಗಳು ನಮ್ಮ ಇಂದಿನ ಪೀಳಿಗೆಯವರಿಗೆ ಕೊಡುಗೆಯಾಗಿ ನೀಡಬೇಕಿದೆ. ಇಂತಹ ಕಾರ್ಯಕ್ರಮಗಳನ್ನು ಸಾಮೂಹಿಕವಾಗಿ ಆಚರಿಸಿ ವಿಧವಿಧವಾದ ಸಿಹಿ ಪಧಾರ್ಥಗಳನ್ನು ಹಂಚುವ ಮೂಲಕ ಹಬ್ಬಕ್ಕೆ ಸಂಬಧಿಸಿದ ಜನಪದ ಗೀತೆಗಳನ್ನು ಹಾಡುವುದು ಸಂತಸದ ವಿಷಯ ಎಂದರು.ಪುಡಕಲಕಟ್ಟಿಯ ಪೌಡಶಾಲೆಯ ಉಪನ್ಯಾಸಕ ಮಹಾಬಳೇಶ್ವರ, ಈರಯ್ಯ ಇಂಡಿ. ಸಾವಿತ್ರಿ ಗುಂಡಗೋವಿ, ಮಂಜುನಾಥ ಕೋರಕೊಪ್ಪ, ಸಿದ್ದಪ್ಪ ಗದ್ದಿಕೇರಿ ಮತ್ತು ವಲಯದ ಮೇಲ್ವಿಚಾರಕರು ಜ್ಞಾನ ವಿಕಾಸ ಸಮನ್ವಯಾಧಿಕಾರಿಯವರು ಸೇವಾಪ್ರತಿನಿಧಿಗಳು ಮತ್ತು ಸಂಘಗಳ ಸದಸ್ಯರು ಪಾಲ್ಗೊಂಡು ಹಬ್ಬದ ಆಚರಣೆಯನ್ನು ಮಾಡಿದರು. ಉಪಪ್ರಾಂಶುಪಾಲ ಶೈಲಾ ಸಂಕೊಜಿ ಸ್ವಾಗತಿಸಿದರು. ವಲಯದ ಮೇಲ್ವಿಚಾರಕಿ ಭಾರತಿ ನಿರೂಪಿಸಿದರು. ವಾಗೇಶ ಚೌಡಿ ವಂದಿಸಿದರು.

loading...