ಹರಿಪ್ರಸಾದಗೆ ಪ್ರತ್ಯುತ್ತರ ಕೊಟ್ಟ ಕೌರವ

0
29

ಬೆಳಗಾವಿ

ಬಿಜೆಪಿ ನಾಯಕರು ಮಾಧಕ ವ್ಯಸನಿಗಳು ಎಂದು ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದಗೆ ಪ್ರತ್ಯುತ್ತರ ಕೊಟ್ಟ ಸಚಿವ ಬಿ.ಸಿ. ಪಾಟೀಲ ಹರಿಪ್ರಸಾದ್ ಹೇಳಿದ ತಕ್ಷಣ ಅದು ವೇದ ವಾಕ್ಯ ಅಲ್ಲ, ಆತ ಬ್ರಹ್ಮ ಅಲ್ಲ ಎಂದು ತಿಕ್ಷ್ಣವಾಗಿ ಎದುರೆಟು ನೀಡಿದರು.

ಸೋಮವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಬಿಜೆಪಿ ನಾಯಕರು ಮಾಧಕ ವ್ಯಸನ ಮಾಡುವುದನ್ನು ಹರಿಪ್ರಸಾದ್ ಯಾವಗಾ ನೋಡಿದರು. ನೋಡಿದ್ದರೆ ಮೊದಲೇ ಹೇಳಬೇಕಿತ್ತಲ್ಲ. ಇಷ್ಟು ದಿನ ಏಕೆ ಬಾಯಿ ಮುಚ್ಚಿಕೊಂಡರು, ಸುಮ್ಮನೇ ಆಪಾದನೆ ಮಾಡಿ ಹೋಗುವುದು ತಪ್ಪು ಎಂದು ಕಡಿಕಾರಿದರು.

ಆರ್‌ಎಸ್‌ಎಸ್ ರೀತಿ ನಾವು ಶತ್ರುಗಳನ್ನು ಸೃಷ್ಟಿ ಮಾಡಲ್ಲ ಎಂಬ ಹೇಳಿಕೆ ಪ್ರತಿಕ್ರಿಯಿಸಿಸಿದ ಸಚಿವರು,ಎಸ್‌ಡಿಪಿಐ ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಗಲಾಟೆ ಮಾಡಿದವರು ಯಾರು.ಗಲಾಟೆ ಎಲ್ಲಿಂದ ಆಗಿದೆ. ಶತ್ರುಗಳನ್ನು ತಯಾರು ಮಾಡುತ್ತಿರುವವರ ಯಾರು. ಅವರೇ,ದೇಶದ್ರೋಹಿಗಳು ಅವರಲ್ಲೇ ಜಾಸ್ತಿ ಜನ ಇದ್ದಾರೆ, ಅವರನ್ನು ಬಚಾವ್ ಮಾಡಲು ಎಷ್ಟೋ ಜನರ ಪ್ರಾಣ ಹೋಗಿದೆ, ಆಸ್ತಿ ಪಾಸ್ತಿ ನಷ್ಟ ಆಗಿದೆ, ಕೋಮು ಗಲಭೆ ಪ್ರಚೋದನೆ ಕೊಡುತ್ತಾರೆ ಎಂದು ಬಿ‌.ಕೆ.ಹರಿಪ್ರಸಾದ್‌ ವಿರುದ್ದ ಸಚಿವ ಬಿ.ಸಿ.ಪಾಟೀಲ ಹರಿಹಾಯ್ದರು.

loading...