ಹಳ್ಳದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರ ಸಾವು

0
7

ಕನ್ನಡಮ್ಮ ಸುದ್ದಿ-ಕೊಪ್ಪಳ: ಕೊಪ್ಪಳ ತಾಲೂಕಿನ ನರೇಗಲ್ ಗ್ರಾಮದ ಹಳ್ಳದಲ್ಲಿ ಈಜುಲು ತೆರಳಿದ್ದ ಇಬ್ಬರು ಬಾಲಕರು ಮುಳುಗಿ ಸಾವಿಗೀಡಾದ ಘಟನೆ ಬುಧವಾರ ನಡೆದಿದೆ.
ಮೃತ ಬಾಲಕರನ್ನು ಬಸವರಾಜ ಈರಪ್ಪ ಗುಡೇರ (12), ನಾಗರಾಜ ಸಂಗಪ್ಪ ಕುಳ್ಳಳ್ಳಿ (14) ಎಂದು ಗುರುತಿಸಲಾಗಿದೆ. ಈ ಕುರಿತು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ತನಿಖೆ ನಡೆಸಿದ್ದಾರೆ. ಮೃತ ಬಾಲಕರ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶಾಲೆಗೆ ಎರಡು ದಿನ ರಜೆಯಿದ್ದರಿಂದ ಮಕ್ಕಳು ಈಜಲು ತೆರಳಿದ್ದರು. ಆದರೆ ಹಳ್ಳದಲ್ಲಿ ಅಕ್ರಮವಾಗಿ ಮರಳು ತೆಗೆದಿದ್ದರಿಂದ ಭಾರಿ ಪ್ರಮಾಣದ ತಗ್ಗುಗಳಲ್ಲಿ ಆಳವಾದ ನೀರು ನಿಂತಿದ್ದರಿಂದ ನೀರಿನ ಆಳದಲ್ಲಿ ಸಿಲುಕಿದ ಬಾಲಕರು ಈಜು ಬಾರದೇ ಸಾವಿಗೀಡಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

loading...