ಹಾಕಿ ಆಟಗಾರ್ತಿಯರಿಗೆ ಕೋಟಿ ರೂ. ಬಹುಮಾನ ಘೋಷಿಸಿದ ನವೀನ್ ಪಟ್ನಾಯಕ್

0
13

ಭುವನೇಶ್ವರ; ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮಹಿಳಾ ಹಾಕಿ ತಂಡದ ಒಡಿಶಾ ಆಟಗಾರ್ತಿಯರಿಗೆ ಅಲ್ಲಿನ ಸಿಎಂ ನವೀನ್ ಪಟ್ನಾಯಕ್ ತಲಾ 1 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದಾರೆ. ಭಾರತ ಮಹಿಳಾ ಹಾಕಿ ತಂಡದಲ್ಲಿ ಒಡಿಶಾದ ನಾಲ್ವರು ಆಟಗಾರ್ತಿಯರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ‌ ನವೀನ್ ಪಟ್ನಾಯಕ್, ಉತ್ತಮವಾಗಿ ಆಡಿದಿರಿ, ಟೀಂ ಇಂಡಿಯಾ! ನಮ್ಮ ಮಹಿಳಾ ಹಾಕಿ ತಂಡಕ್ಕೆ ಅಭಿನಂದನೆ. ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಿ ಎಂದು ಶುಭ ಕೋರಿದ್ದಾರೆ.

ಅತ್ಯುತ್ತಮ ಹಾಕಿ ಪ್ರತಿಭೆಗಳನ್ನು ರೂಪಿಸಿದ ಒಡಿಶಾ, ಯಾವಾಗಲೂ ಹಾಕಿಗೆ ಉತ್ತೇಜಿಸಿದೆ. ನಾವು ನವೆಂಬರ್ 28 ರಿಂದ ಪುರುಷರ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಿದ್ದೇವೆ. ಸಿದ್ಧತೆ ಪೂರ್ಣಗೊಂಡಿದೆ ಎಂದು ರಾಜ್ಯ ಕ್ರೀಡಾ ಮತ್ತು ಯುವಜನ ಸೇವೆ ಇಲಾಖೆ ಸಚಿವರಾದ‌ ಚಂದ್ರ ಶಾರಥಿ ಬೆಹೆರಾ ತಿಳಿಸಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್, ಒಡಿಯ ಸ್ಪ್ರಿಂಟರ್ ಡುಟಿ ಚಂದ್ ಗೆ 3 ಕೋಟಿ ರೂ. ಚೆಕ್ ನೀಡಿದ್ದಾರೆ. 100 ಮೀಟರ್ ಮತ್ತು 200 ಮೀಟರ್ ಸ್ಪ್ರಿಂಟ್ ಸ್ಪರ್ಧೆಯಲ್ಲಿ ಡುಟಿ ಚಂದ್ ಬೆಳ್ಳಿ ಪದಕ ಗೆದ್ದಿದ್ದಾರೆ.

loading...