ಹಾಲಕೆರಿ ಗ್ರಾಮದ ಮುಖಂಡರು ಮುಖಂಡರು ಬಿಜೆಪಿಗೆ ಸೇರ್ಪಡೆ

0
28

ಕನ್ನಡಮ್ಮ ಸುದ್ದಿ ನರೇಗಲ್ಲ: ಶಿವಕುಮಾರ ಉದಾಸಿ ಅವರ ಅಭಿವೃದ್ದಿ ಕಾರ್ಯವನ್ನು ಮೆಚ್ಚಿ ಹಾಲಕೆರಿ ಗ್ರಾಮದ ದಲಿತ ಮುಖಂಡರು ಬಿಜೆಪಿ ಪಕ್ಷ ಸೇರ್ಪಡೆಯಾಗಿರುವದು ಸಂತೋಷದ ವಿಷಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಐದು ವರ್ಷದ ಆಡಳಿತದಲ್ಲಿ ದೀನ, ದಲಿತರ ವಿಶೇಷ ಕಾಳಜಿ ವಹಿಸುತ್ತಿದ್ದಾರೆ ಎಂದು ರೋಣ ಶಾಸಕ ಕಳಕಪ್ಪ ಬಂಡಿ ಹೇಳಿದರು. ಅವರು ಸಮೀಪದ ಹಾಲಕೆರೆ ಗ್ರಾಮದಲ್ಲಿ ಶುಕ್ರವಾರ ಹಾವೇರಿ ಲೋಕಸಭೆ ಬಿಜೆಪಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಪ್ರಚಾರದ ವೇಳೆಯಲ್ಲಿ ದಲಿತ ಸಮಾಜದ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು. ದೇಶದಲ್ಲಿ ಮೋದಿ ಅವರ ಅಲೆ ಇದ್ದು, ದೇಶದಲ್ಲಿ ಅತೀ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಕೇಂದ್ರದಲ್ಲಿ ಸರ್ಕಾರ ರಚಿಸುವಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಕೇಂದ್ರ ಸರ್ಕಾರದ ಸಾಧನೆಗಳನ್ನು ಯುವಕರಿಗೆ ಮಾದರಿಯಾಗಿವೆ. ರಾಜ್ಯದಲ್ಲಿ ಕೇಂದ್ರ ಸರ್ಕಾರದ ಅನುದಾನವನ್ನು ಹೆಚ್ಚು ಬಳಕೆ ಮಾಡುವದರಲ್ಲಿ ಶಿವಕುಮಾರ ಉದಾಸಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಕ್ಷೆÃತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಪಡೆದ ಮತಗಳಿಕ್ಕಿಂತ ಈ ಭಾರಿ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆದು ಗೆಲ್ಲುವು ಸಾಧಿಸಲ್ಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಹನಮಂತಪ್ಪ ತಲೆಖಾನ, ಪರಸಪ್ಪ ತಲೆಖಾನ, ಮುತ್ತಪ್ಪ ಪೂಜಾರ, ಆನಂದ ಹಿರೇಕೊಪ್ಪ, ಶಿವಪ್ಪ ಬಂಗಾಳಿಗಿಡದ. ನಾಗರಾಜ ಪೂಜಾರ, ರಮೇಶ ಬಂಗಾಳಿಗಿಡದ, ಮುತ್ತಪ್ಪ ಬನ್ನಿಗಿಡಿದ, ಶಿವಲಿಂಗಪ್ಪ ತಲೆಖಾನ, ದುರಗಪ್ಪ ತಲೆಖಾನ, ಕಾಳಿಂಗಪ್ಪ ಪೂಜಾರ, ಬಸವರಾಜ ಪೂಜಾರ ಸೇರಿದಂತೆ ೨೫ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯರ್ತರು ಬಿಜೆಪಿ ಸೇರ್ಪಡೆಯಾದರು. ರಮೇಶ ಕುರಿ, ಸುರೇಶ ರೊಟ್ಟಿ, ಶರಣಪ್ಪ ಜವಳಗೇರಿ, ಬಸವರಾಜ ಹೊಸಗಂಡಿ, ಎ.ಆರ್. ಪೂಜಾರ, ಎಂ.ಸಿ. ರೊಟ್ಟಿ, ಗುಳಪ್ಪ ಅಂಗಡಿ, ಬುಡ್ಡಪ್ಪ ಮುಲಿಮನಿ, ದುರಗಪ್ಪ ಸಂದಿಮನಿ, ಬಿ.ಎ. ಹಾದಿಮನಿ ಸೇರಿದಂತೆ ಇದ್ದರು.

loading...