ಹಾಲಶುಗರ್ಸ ಚುನಾವಣೆ ವೇಳಾಪಟ್ಟಿ ಹೊರಡಿಸಲು ಎಸಿ ಹಿಂದೇಟು

0
19

ಕನ್ನಡಮ್ಮ ಸುದ್ದಿ
ನಿಪ್ಪಾಣಿ 28: ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರಖಾನೆ ಪಂಚವಾರ್ಷಿಕ ಚುನಾವಣೆ ಸೆ.15, 2018ರಂದು ನಡೆಯಲಿರುವ ಬಗ್ಗೆ ಸರಕಾರ ಆದೇಶ ಹೊರಡಿಸಿದೆ. ಚುನಾವಣೆ ದಿನಾಂಕ ನಿಗದಿಪಡಿಸಿದ್ದರೂ, ಚುನಾವಣೆ ವೇಳಾಪತ್ರಿಕೆ ಇನ್ನೂ ಹೊರಡಿಸಲಾಗಿಲ್ಲ. ಆದರೆ ಚಿಕ್ಕೋಡಿ ಉಪವಿಭಾಗಾಧಿಕಾರಿ ಕಚೇರಿ ವತಿಯಿಂದ ಕಾರಖಾನೆಗೆ ಸೆ.15 ರಂದು ಚುನಾವಣೆ ನಡೆಯಲಿರುವ ಬಗ್ಗೆ ಪತ್ರ ತಲುಪಿದೆ. ಉಪವಿಭಾಗಾಧಿಕಾರಿ ಗೀತಾ ಕೌಲಗಿ ಚುನಾವಣಾಧಿಕಾರಿ ಆಗಿ ನೇಮಕಗೊಂಡಿದ್ದಾರೆ. ಚುನಾವಣೆ ಸಿದ್ಧತೆ ಕೈಗೊಳ್ಳಲು ಎಸಿ ಅವರು ಕಾರಖಾನೆಗೆ ಸೂಚಿಸಿದ್ದರಿಂದ ಮುಂದಿನ ಒಂದೂವರೆ ತಿಂಗಳು ಕಾರಖಾನೆ ಚುನಾವಣೆ ಕಾವು ರಂಗೇರಲಿದೆ. ಕಾರಖಾನೆ ಒಟ್ಟು 23,800 ಸದಸ್ಯರಿದ್ದು, ಕಾರಖಾನೆಯು ಪ್ರಸ್ತುತ 20800 ಸದಸ್ಯರ ಕಚ್ಚಾ ಯಾದಿಯನ್ನು ಡಿಸಿ ಕಚೇರಿಗೆ ರವಾನಿಸಿದೆ. ಸಹಕಾರ ಕ್ಷೇತ್ರದ ಗಡಿಭಾಗದ ಏಕೈಕ ಸಕ್ಕರೆ ಕಾರಖಾನೆ ಇದಾಗಿದ್ದು,265 ಕೋಟಿ ರೂ.ಗಳ ಸಾಲದ ಸುಳಿಗೆ ಸಿಲುಕಿ ನಲಗುತ್ತಿದೆ. ಸಹಕಾರ ಕ್ಷೇತ್ರದ ಕಾರಖಾನೆ ಅಸ್ತಿತ್ವ ಉಳಿಸಿ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಜನಪ್ರತಿನಿಧಿಗಳಿಂದ ಆಗಬೇಕಿದೆ.
..

loading...