ಹಿಂಡಲಗಾ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯಿಂದ ಅದ್ದೂರಿ ಜನ್ಮ ದಿನಾಚಾರಣೆ

0
252

 

ಕನ್ನಡಮ್ಮ ಸುದ್ದಿ
ಬೆಳಗಾವಿ:18 ಬೆಂಗಳೂರಿನ ಪರಪ್ಪ ಕೇಂದ್ರ ಅಗ್ರಹಾರದಲ್ಲಿ ನಡೆದ ಅವ್ಯವಹಾರದ ಪ್ರಕರಣದ ನಡುವೆಯೂ ಬೆಳಗಾವಿ ಹಿಂಡಲಗಾ ಕಾರಾಗೃಹದಲ್ಲಿ ಐಶಾರಾಮಿ ಜೀವನ ನಡೆಸುವ ಕೈದಿಯೊರ್ವ ತನ್ನ ಜನ್ಮ ದಿನವನ್ನು 50 ಸಾವಿರ ರೂ. ಖರ್ಚು ಮಾಡಿ ಅದ್ದೂರಿಯಾಗಿ ಆಚರಿಸಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜೈಲಿನಲ್ಲಿರುವ ಸ್ಥಿತಿವಂತ ಕೈದಿಗಳಿಗೆ ಹಿಂಡಲಗಾ ಕಾರಾಗೃಹದಲ್ಲಿ ಐಷಾರಾಮಿ‌ ಜೀವನ‌ ನಡೆಸುತ್ತಿದ್ದಾರೆ. ಇಲ್ಲಿ ಹಣ ವಿದ್ದರೇ ಮೋಜು‌ಮಸ್ತಿ ಸಲಿಸಾಗಿ ನಡೆಯುತ್ತಿವೆ. ಜೈಲಿನಲ್ಲಿರುವ ಕೊಠಡಿಯನ್ನೆ ಪಾರ್ಟಿ ಹಾಲ್ ನ್ನು ಮಾಡಿಕೊಂಡು ಜೈಲಿನಲ್ಲಿಯೇ ಅದ್ದೂರಿ ಜನ್ಮ ದಿನಾಚಾರಣೆಯನ್ನು ಮಾಡಿಕೊಳ್ಳುತ್ತಿದ್ದರೂ ಜೈಲಿನ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ವಿಪರ್ಯಾಸದ ಸಂಗತಿ.


ಬೆಳಗಾವಿ ಹಿಂಡಲಗಾ ಕಾರಾಗೃಹದಲ್ಲಿ ಕೈದಿಗಳ ಹತ್ತಿರ ದುಡ್ಡಿದ್ದರೇ ಎಲ್ಲವೂ ಇಲ್ಲಿ ಸಲಿಸಾಗಿ ಐಷಾರಾಮಿ ಜೀವನ ನಡೆಸಲು ಬಿಡುತ್ತಾರೆ.ಕೈದಿ ಚೇತನಗೌಡ ಜನ್ಮ ದಿನಾಚಾರಣೆ ಆಚರಿಸಿಕೊಂಡ ಘಟನೆಯನ್ನು ಜೈಲು ಮೂಲಗಳಿಂದ ತಿಳಿದು ಬಂದಿದೆ‌.
ಇಂಥ ಐಷಾರಾಮಿ ಜೀವನ‌ ನಡೆಸಲು ಚೇತನಗೌಡ ಹಿಂಡಲಗಾ ಕಾರಾಗೃಹದ ಸಿಬ್ಬಂದಿಗಳಿಗೆ ಕೈ ಬಿಸಿ ಮಾಡುತ್ತಾನೆ. ಪ್ರತಿ ತಿಂಗಳು ಇತನಿಂದ ಹಪ್ತಾ ನೀಡುತ್ತಾನೆ ಎಂದು ಹೇಳಲಾಗುತ್ತಿದೆ.
ಚೇತನಗೌಡ ಬಡ್ಡಿದಂದೆ ನಡೆಸುತ್ತಿದ್ದ ಇದಕ್ಕೆ ಅಧಿಕಾರಿಗಳ ಸಾಥ ನೀಡುತ್ತಿದ್ದರೂ ಎಂಬ ಆರೋಪ‌ ಜೈಲಿನ ಸಿಬ್ಬಂದಿಗಳ ಮೇಲೆ ಕೇಳಿ ಬರುತ್ತಿದೆ. ಇತ ಹೊರಗಿನವರಲ್ಲದೆ ಒಳಗಿನ ಖೈದಿಗಳಿಗೂ ನಿಡುತ್ತಾನಂತೆ ಸಾಲ. ೧೦೦ ವಾರಕೆ ೨೦ ರುಪಾಯಿ ಖೈದಿಗಳು ಬಡ್ಡಿ ಕಟ್ಟಬೆಕಂತೆ. ಇತ ಮಟಕಾ ದಂದೆಯ ರುವಾರಿ ಇತ ಯಾವಗ ಬೇಕಾದರೂ ಬೇರೆ ಖೈದಿಗಳ ಕೊಣೆಗೆ ಹೋಗಿ ಹೊಡೆದು ಬರುತ್ತಾನಂತೆ. ಜೈಲು ಇತನ ರಾಜ್ಯ ಇಲ್ಲಿ ಇತನೇ ರಾಜನಂತೆ ಮೆರೆಯುತ್ತಿದ್ದಾನೆ ಅನ್ನುವ ಮಾಹಿತಿ ಜೈಲು ಮೂಲಗಳಿಂದ ತಿಳಿದು ಬಂದಿದೆ.


ಇಲ್ಲಿ ಇರುವ ಬಹುತೇಕ ಖೈದಿಗಳ ಬಳಿ ಸ್ಮಾರ್ಟ ಪೋನ್ ಗಳಿವೆ‌ ಈ ಪೋನುಗಳು ಎಲ್ಲಿಂದ ಬಂದವು ಅನ್ನುವದನ್ನ ಈ ಜೈಲಿನ ಅಧಿಕಾರಿಗಳು ಉತ್ತರ ಕೊಡಬೇಕಾಗಿದೆ.
ಹಿಂಡಲಗಾ ಜೈಲಲ್ಲಿ ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಂಡ ಜಿವಾವಧಿ ಖೈದಿ ಬೆಂಗಳೂರು ಮೂಲದ ಆನಂದ ೫೦ ಸಾವಿರ ಹಣ ಖರ್ಚು ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡು ಖೈದಿ ಆನಂದನಿಗೆ ಮತ್ತೊಬ್ಬ ಖೈದಿ ಗುಬ್ಬಚ್ಚಿ ಸೀನ ಸೇರಿದಂತೆ ಹಿಂಡಲಗಾ ಜೈಲಿನಲ್ಲಿನ ಖೈದಿಗಳು ಸಾಥ್ ನೀಡಿದ್ದಾರೆ. ಇದೇ ವರ್ಷ ನಡೆದಿದೆ ಎನ್ನಲಾದ ಬರ್ತಡೆ ಪಾರ್ಟಿ. ಸಜಾ ಬಂಧಿಯಾಗಿದ್ರು ಹೈಫೈ ಬಟ್ಟೆ, ಸನ್ ಗ್ಲಾಸ್ ಹಾಕೊಂಡು ಎಂಜಾಯ್ ಮಾಡಿದ ಖೈದಿಗಳು. ಹಿಂಡಲಗಾ ಜೈಲಿನಲ್ಲಿ ನಡೆಯುತ್ತಿರುವ ಅಂಧಾ ದರ್ಬಾರ್ ನಡೆಯುತ್ತಿದ್ದರು ಜೈಲಿನ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣಾಗಿದೆ.

loading...