ಹಿಂದಿ ಹೇರಿಕೆ ವಿರೋಧಿಸಿ ಹುಕ್ಕೇರಿಯಲ್ಲಿ ಕರವೇ ಪ್ರತಿಭಟನೆ

0
55

ಹಿಂದಿ ಹೇರಿಕೆ ವಿರೋಧಿಸಿ ಹುಕ್ಕೇರಿಯಲ್ಲಿ ಕರವೇ ಪ್ರತಿಭಟನೆ

ಕನ್ನಡಮ್ಮ ಸುದ್ದಿ : ಹುಕ್ಕೇರಿ : ಕೇಂದ್ರ ಸರಕಾರದ ಹಿಂದಿ ದಿವಾಸ್ ,ಹಿಂದಿ ಸಪ್ತಾಹ ಮತ್ತು ಹಿಂದಿ ಪಕ್ವಾಡಗಳಂತಹ ಕಾರ್ಯಕ್ರಮಗಳನ್ನ ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹುಕ್ಕೇರಿ ಪಟ್ಟಣದ ತಹಶಿಲ್ದಾರರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಿದರು .

ಕೇಂದ್ರ ಸರಕಾರದ ಹಿಂದಿ ಹೇರಿಕೆಯನ್ನ ಕರವೇ ಕಾರ್ಯಕರ್ತರು ಪ್ರತಿಭಟಿಸಿ ಕೇಂದ್ರ ಸರಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು .ಈ ವೇಳೆ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಪ್ರಮೋದ ಹೊಸಮನಿ ಹಾಗೂ ಮಹೇಶ ಹಟ್ಡಿಹೋಳಿ ಸಂವಿಧಾನದ 8 ನೇ ಪರಿಚ್ಛೇದದಲ್ಲಿರುವ ಎಲ್ಲಾ 22 ಭಾಷೆಗಳಿಗೂ ಸಮಾನ ಸ್ಥಾನಮಾನವಿರಬೇಕು, ಆದರೆ ಕೇಂದ್ರ ಸರಕಾರ ನೀತಿ ದೇಶದ ತುಂಬೆಲ್ಲಾ ಒಂದೆ ಭಾಷೆ ಇರಬೇಕು ಎಂಬಂತೆ ಕಾಣುತ್ತಿದೆ ,ಈ ನೀತಿಯಿಂದ ದೇಶದ ಭಾಷಾ ವೈವಿದ್ಯಮಯಕ್ಕೆ ಧಕ್ಕೆಯಾಗುತ್ತಿದೆ ಎಂದು ಕೇಂದ್ರ ಸರಕಾರದ ವಿರುದ್ದ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು .ಕೂಡಲೇ ಕೇಂದ್ರ ಸರಕಾರ ಹಿಂದಿ ಹೇರಿಕೆ ನೀತಿ ನಿಲ್ಲಿಸಬೇಕು,ಭಾರತದ ಭಾಷಾ ನೀತಿಯನ್ನು ಮರು ಪರಿಶೀಲಿಸುವಂತೆ ಕ್ರಮ ಕೈಗೋಳಬೇಕು . ಇಲ್ಲವಾದರೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಜ್ಯಾದ್ಯಕ್ಷರಾದ ಟಿ.ಎ ನಾರಾಯಣಗೌಡರ ನೇತೃತ್ವದಲ್ಲಿ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಉಗ್ರವಾದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು .

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಯುವ ಘಟಕದ ಅಧ್ಯಕ್ಷ ವಿನಯ ಪಾಟೀಲ ,ಮುಖಂಡರಾದ ಸಂತೋಷ ಸತನಾಯಿಕ,ಬಾಬು ಭೋಸಗೋಳ,ಅಮರ ಪಾಟೀಲ ,ಶಂಕರ ಭೋಸಲೆ ಸೇರಿದಂತೆ ಇತರರು ಇದ್ದರು .

loading...