ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಸ್ಪರ್ಧೆ : ಸಿಇಓ ಮಾನಕರ

0
10

 

ಬಾಗಲಕೋಟೆ: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಸೆಪ್ಟೆಂಬರ ೧೦ ರಂದು ತಾಲೂಕಾ ಮಟ್ಟದಲ್ಲಿ ಹಾಗೂ ೧೪ ರಂದು ಜಿಲ್ಲಾ ಮಟ್ಟದಲ್ಲಿ ಕ್ರಿÃಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಈ ಕುರಿತು ಜರುಗಿದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯ ಮಟ್ಟದಲ್ಲಿ ಅಕ್ಟೊÃಬರ ೧ ರಂದು ವಿಶ್ವ ನಾಗರಿಕ ದಿನಾಚರಣೆಯನ್ನು ಆಚರಿಸಲು ನಿರ್ಧರಿಸಲಾಗಿದ್ದು, ಸೆಪ್ಟೆಂಬರ ೧೮ ರಂದು ರಾಜ್ಯ ಮಟ್ಟದ ಕ್ರಿÃಡೆ ಹಾಗೂ ೧೯ ರಂದು ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆ ಮಾಡುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಮಾಡಿ ರಾಜ್ಯ ಮಟ್ಟದ ಕ್ರಿÃಡಾ ಮತ್ತು ಸಾಂಸ್ಕೃತಿ ಸ್ಪರ್ಧೆಗಳಿಗೆ ಕಳುಹಿಸಬೇಕಾಗಿದೆ ಎಂದರು.

ಕ್ರಿÃಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಬಗ್ಗೆ ಜಿಲ್ಲಾ ಅಂಗವಿಕಲರ ಪ್ರಭಾರಿ ಕಲ್ಯಾಣಾಧಿಕಾರಿ ಗೀತಾ ಪಾಟೀಲ ವಿವರಣೆ ನೀಡುತ್ತಾ, ಕ್ರಿÃಡಾ ವಿಭಾಗದಲ್ಲಿ ೬೦ ರಿಂದ ೭೦ ವರ್ಷ ಪುರುಷರಿಗೆ ೧೦೦ ಮೀಟರ್ ಓಟ, ೩ ಕೆ.ಜಿ ಗುಂಡು ಎಸೆತ, ೭೧ ರಿಂದ ೮೦ ವರ್ಷದವರಿಗೆ ೭೫ ಮೀಟರ್ ಓಟ, ೩ ಕೆಜಿ ಗುಂಡು ಎಸೆತ, ೮೦ ವರ್ಷ ಮೇಲ್ಪಟ್ಟವರಿಗೆ ೨೦೦ ಮೀಟರ್ ನಡಿಗೆ, ಕ್ರಿಕೆಟ್ ಚೆಂಡು ಎಸೆತ, ಮಹಿಳೆಯರಿಗಾಗಿ ೬೦-೭೦ ವರ್ಷದವರಿಗೆ ೪೦೦ ಮೀ. ನಡಿಗೆ, ಕ್ರಿಕೆಟ್ ಚೆಂಡು ಎಸೆತ, ೭೧-೮೦ ವರ್ಷದವರಿಗೆ ೨೦೦ ಮೀ. ನಡಿಗೆ, ಕ್ರಿಕೆಟ್ ಚೆಂಡು ಎಸೆತ, ೮೦ ವಷ್ ಮೇಲ್ಪಟ್ಟವರಿಗೆ ೧೦೦ ಮೀ. ನಡಿಗೆ, ಕ್ರಿಕೆಟ್ ಚೆಂಡು ಎಸೆತ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಸಾಂಸ್ಕೃತಿಕ ವಿಭಾಗದಲ್ಲಿ ೬೦-೭೦, ೭೧-೮೦ ಹಾಗೂ ೮೦ ವರ್ಷ ಮೇಲ್ಪಟ್ಟ ಪುರುಷರಿಗೆ ಏಕಪಾತ್ರ ಅಭಿನಯ, ಜಾನಪದ ಗೀತೆ, ಮಹಿಳೆಯರಿಗಾಗಿ ೬೦-೭೦, ೭೧-೮೦ ಹಾಗೂ ೮೦ ವರ್ಷ ಮೇಲ್ಪಟ್ಟವರಿಗೆ ಏಕ ಪಾತ್ರ ಅಭಿನಯ, ಜಾನಪದ ಗೀತೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.

ಸೆಪ್ಟೆಂಬರ ೧೦ ರಂದು ಆಯಾ ತಾಲೂಕಾ ಮಟ್ಟದಲ್ಲಿ ಹಾಗೂ ೧೪ ರಂದು ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ನವನಗರದ ಜಿಲ್ಲಾ ಕ್ರಿÃಡಾಂಗಣದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಚಿಸುವ ಆಸಕ್ತ ಹಿರಿಯ ಹಿರಿಯ ನಾಗರಿಕರು ಆಯಾ ತಾಲೂಕಿನ ಎಂ.ಆರ್.ಡಬ್ಲೂ ಗಳನ್ನು ಸಂಪರ್ಕಿಸಬಹುದಾಗಿದೆ. ಬಾಗಲಕೋಟ ತಾಲೂಕು ಪಾಂಡಪ್ಪ ಲಮಾಣಿ (೯೫೩೮೭೧೪೪೪೧), ಬೀಳಗಿ ತಾಲೂಕು ಸುರೇಶ ತಳಗೇರಿ (೯೮೮೦೪೪೫೨೩೧), ಹುನಗುಂದ ತಾಲೂಕು ಸಂಗಪ್ಪ ಬೀರಗೊಂಡ (೮೯೭೦೫೬೫೮೬೯), ಬಾದಾಮಿ ತಾಲೂಕು ಮಹಾಂತೇಶ ಪಾಟೀಲ (೯೯೪೫೪೦೮೨೧೫), ಮುಧೋಳ ತಾಲೂಕು ಮಾಗುಂಡಪ್ಪ ಮುದ್ನೂರ (೯೦೦೮೧೭೩೭೭೩) ಹಾಗೂ ಜಮಖಂಡಿ ತಾಲೂಕು ನಿಂಗರಾಜ ಹನಗಂಡಿ (೯೯೦೦೪೧೭೭೬೪) ಇವರನ್ನು ಸಂಪರ್ಕಿಸು ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿಗದಿಪಡಿಸಿದ ವಿವಿಧ ಕ್ರಿÃಡಾ ಸ್ಪರ್ಧೆಗಳನ್ನು ಹೊರತುಪಡಿಸಿ ಒಳಾಂಗಣ ಕ್ರಿÃಡೆಗಳಾದ ಕೇರಂ ಮತ್ತು ಚೆಸ್ ಸ್ಪರ್ಧೆಗಳನ್ನು ಸಹ ಏರ್ಪಡಿಸಲಾಗುತ್ತಿದೆ. ಪ್ರತಿಯೊಂದು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುತ್ತಿದೆ ಎಂದ ಜಿ.ಪಂ ಸಿಇಓ ಮಾನಕರ ಅವರು ಹಿರಿಯ ನಾಗರಿಕರ ಕುಂದು ಕೊರತೆ ಹಾಗೂ ಅಹವಾಲುಗಳನ್ನು ಆಲಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ೧ನೇ ತಾರೀಖಿನಂದು ಸಂಜೆ ೫.೩೦ಕ್ಕೆ ಸಭೆ ಜರುಗಿಸಲಾಗುತ್ತದೆ ಎಂದರು. ಸಭೆಯಲ್ಲಿ ಹಿರಿಯ ನಾಗರಿಕರು, ಆಯಾ ತಾಲೂಕಾ ಎಂಆರ್.ಡಬ್ಲೂಗಳು ಉಪಸ್ಥಿತರಿದ್ದರು.

loading...