ಹುಕ್ಕೇರಿ ತಾಲೂಕಿಗೆ ಮತ್ತೆ ವಕ್ಕರಿಸಿದ ಕೊರೊನ ಸೊಂಕು

0
364

ಹುಕ್ಕೇರಿ ತಾಲೂಕಿಗೆ ಮತ್ತೆ ವಕ್ಕರಿಸಿದ ಕೊರೊನ ಸೊಂಕು

ಕನ್ನಡಮ್ಮ ಸುದ್ದಿ -ಸಂಕೇಶ್ವರ : ಕಳೆದ ಕೆಲವು ದಿನದಿಂದ ದೂರವಾಗಿದ್ದ ಭಯಾನಕ ಕೊರೊನ ಸೊಂಕು ಮತ್ತೆ ಹುಕ್ಕೇರಿ ತಾಲೂಕಿಗೆ ವಕ್ಕರಿಸಿದೆ . ತಾಲೂಕಿನ ಹೆಬ್ಬಾಳ ಗ್ರಾಮದ ಒಂದೆ ಮನೆಯ ತಾಯಿ ಮಗಳಲ್ಲಿ ಸೊಂಕು ಕಂಡು ಬಂದಿದ್ದು , ಹೆಬ್ಬಾಳ ಗ್ರಾಮದ ಸೊಂಕಿತರು ವಾಸಿಸುವ ಪ್ರದೇಶವನ್ನು ಸಿಲಡೌನ ಮಾಡಲಾಗಿದೆ .

ಸೊಂಕಿತ ಯುವತಿ ಕಳೆದ ಜೂನ 17ರಂದು ಬನಹಟ್ಟಿ ಗ್ರಾಮದಿಂದ ಹೆಬ್ಬಾಳ ಗ್ರಾಮದ ತವರು ಮನೆಗೆ ಕಾರ್ಯಕ್ರಮ ನಿಮಿತ್ಯ ಆಗಮಿಸಿದ ಓರ್ವ ಹೆಣ್ಣು ಮಗಳು ಮತ್ತು ಮನೆಯ 4 ಜನರನ್ನು ಹೋಮ್ ಕ್ವಾರೆಂಟೈನ್ ಮಾಡಲಾಗಿತ್ತು. ಶಂಕಿತರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು . ಅದರಲ್ಲಿ 55 ವರ್ಷದ ತಾಯಿ ಮತ್ತು 27 ವರ್ಷದ ಮಗಳಿಗೆ ಕೊರೊನಾ ವೈರಸ್ ದೃಢಪಟ್ಟಿದೆ.

ಇನ್ನು ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ತಾಯಿ ಮಗಳನ್ನು ಬೆಳಗಾವಿ ಬಿಮ್ಸಗೆ ದಾಖಲು ಮಾಡಿ, ಅವರು ವಾಸಿಸುವ ಪ್ರದೇಶದ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಅದೇ ರೀತಿ ಸೋಂಕಿತರ ಜೊತೆ ಸಂಪರ್ಕ ಹೊಂದಿರುವವರನ್ನು ಕ್ವಾರಂಟೈನ್‍ಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಜೊತೆಗೆ ಸೊಂಕಿತರ ಟ್ರಾವೆಲ್ ಹಿಸ್ಟರಿ ಸಂಗ್ರಹಿಸಿ ಇನ್ನಷ್ಟು ಜನರನ್ನು ಕ್ವಾರಂಟೈನ್ ಮಾಡುವ ಸಿದ್ದತೆ ನಡೆದಿದ್ದು ,ಹೆಬ್ಬಾಳ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ .

loading...