ಹುಕ್ಕೇರಿ ಪುರಸಭೆ ಚುನಾವಣೆ ಭರ್ಜರಿ ಗೆಲವು ಸಾಧಿಸಿದ ಕಾಂಗ್ರೆಸ್

0
95

ಹುಕ್ಕೇರಿ ಪುರಸಭೆ ಚುನಾವಣೆ ಭರ್ಜರಿ ಗೆಲವು ಸಾಧಿಸಿದ ಕಾಂಗ್ರೆಸ್

ಕನ್ನಡಮ್ಮ ಸುದ್ದಿ-ಹುಕ್ಕೇರಿ: ತೀವ್ರ ಕುತೂಹಲ ಮೂಡಿಸಿದ್ದ ಹುಕ್ಕೇರಿ ಪುರಸಭೆ ಚುನಾವಣೆ ಫಲಿತಾಂಶ ಹೊರಬಿದಿದ್ದು ಒಟ್ಟು ೨೩ ವಾರ್ಡಗಳ ಪೈಕಿ ಕಾಂಗ್ರೆಸ್ ೧೨ ವಾರ್ಡಗಳಲ್ಲಿ ಭರ್ಜರಿ ಗೆಲವು ಸಾಧಿಸಿದೆ.

ಇಂದು ನಡೆದ ಪುರಸಭೆಯ ಫಲಿತಾಂಶದ ಮತ ಎಣಿಕೆಯಲ್ಲಿ ಅಚ್ಚರಿ ಫಲಿತಾಂಶ ಬಂದಿದ್ದು ಕಾಂಗ್ರೆಸ್ ೧೨ ಬಿಜೆಪಿ ೦೮ ಹಾಗೂ ಪಕ್ಷೇತರ ೩ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ .

ಈ ಚುನಾವಣೆ ಕತ್ತಿ ವರ್ಸಸ್ ಎ.ಬಿ ಪಾಟೀಲ ಎಂದೆ ಬಿಂಬಿಸಲಾಗಿತ್ತು .ಕಳೆದ ಹತ್ತು ವರ್ಷ ಬಿಜೆಪಿ ಇಲ್ಲಿ ಆಡಳಿತ ನಡೆಸಿತ್ತು. ಈ ಬಾರಿ ಕೈ ಅಭ್ಯರ್ಥಿಗಳು ಗೆಲ್ಲುವ ಮೂಲಕ ಹುಕ್ಕೇರಿ ಪುರಸಭೆ ಬಹುತೇಕ ಬಹುಮತ ಪಡೆದಿದ್ದಾರೆ .
ಕಾಂಗ್ರೆಸ್ ವಿಜೇತ ಅಭ್ಯರ್ಥಿಗಳಿಂದ ಪಟ್ಟಣದಲ್ಲಿ ಗುಲಾಲ ಹಾರಿಸಿ ,ಪಟಾಕಿ ಸಿಡಿಸಿ ಸಂಭ್ರಮಿಸಿದರು .ಕೈ ಕಾರ್ಯಕರ್ತರು ಸಂಭ್ರಮ ಮುಗಿಲು ಮುಟ್ಟಿತ್ತು .ಮತ ಎಣಿಕೆ ಕೇಂದ್ರದ ಸುತ್ತ ಬೀಗಿ ಪೋಲಿಸ ಬಂದೂಬಸ್ತ ಏರ್ಡಡಿಸಲಾಗಿತ್ತು .

loading...