ಹೆತ್ತ ಮಗನನ್ನೆ ಕೊಲೆಗೈದ ತಂದೆ

0
9

ಬೆಳಗಾವಿ

ಕ್ಷುಲ್ಲಕ ಕಾರಣಕ್ಕಾಗಿ ತಂದೆಯೊಬ್ಬ ಹೆತ್ತ ಮಗನನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಗೋಕಾಕ ತಾಲ್ಲೂಕಿನಲ್ಲಿ ನಡೆದಿದೆ.

ದನಕ್ಕೆ ಮೇವು ಹಾಕುವ ವಿಚಾರದಲ್ಲಿ ತಂದೆ ಮತ್ತು ಮಗನ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಹೆತ್ತ ಮಗನ ಎದೆಗೆ ಕೊಡಲಿ ಏಟು ನೀಡಿ ಮಗನನ್ನೇ ಕೊಂದ ಪಾಪಿ ತಂದೆ, ಈಗ ಪರಾರಿಯಾಗಿದ್ದಾನೆ. ಗೋಕಾಕ ತಾಲ್ಲೂಕಿನ ಮೇಲ್ಮನಹಟ್ಟಿಯಲ್ಲಿ ಯಮನಪ್ಪ (೪೧) ಹತ್ಯೆಯಾದ ದುರ್ದೈವಿ ಹತ್ಯೆಗೈದ ತಂದೆ ಬಾಳಪ್ಪ ಗುತ್ತಿಗೆ ಪರಾರಿಯಾಗಿದ್ದಾನೆ.

ಕೊಡಲಿಯಿಂದ ಮಗನ ಎದೆಗೆ ಹೊಡೆದು ಬರ್ಬರ ಹತ್ಯೆ ಮಾಡಲಾಗಿದೆ. ಕೊಲೆ ಮಾಡಿ ಪರಾರಿಯಾಗಿರುವ ಪಾಪಿ ತಂದೆ ಬಾಳಪ್ಪನಿಗಾಗಿ ಪೋಲೀಸರು ಶೋಧ ನಡೆಸಿದ್ದಾರೆ ಗೋಕಾಕ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

loading...