ಹೆಮಂತ್ ನಿಂಬಾಳ್ಕರ್ ಗೂ ಬಂಧನದ ಭೀತಿ…!

0
312

ಐಎಂಎ ಹಗರಣದಲ್ಲಿ ನಿಂಬಾಳ್ಕರ್ ಸೇರಿದಂತೆ ಇಬ್ಬರ ಮೇಲೆ ಕಾನೂನು ಕ್ರಮಕ್ಕೆ ಸರಕಾರ ಅಸ್ತು
ಬೆಳಗಾವಿ

ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ರಾಜ್ಯ ಸರಕಾರವು ಅನುಮತಿ ನೀಡಿದೆ.

ರಾಜ್ಯದ ಐಪಿಎಸ್‌ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್‍ ಮತ್ತು ಹಿಲೋರಿ ವಿರುದ್ಧ ಸಿಬಿಐ ಎಫ್‌ಐಆರ್‍ ದಾಖಲಿಸಿತ್ತು. ಈಗ ಇವರಿಬ್ಬರ ನಮೇಲೆಯೂ ಕ್ರಮಕ್ಕೆ ಸರಕಾರ ಅಸ್ತು ಎಂದಿದೆ.

ಕಳೆದ ವರ್ಷ ಸಿಇಐ ಈ ಇಬ್ಬರು ಅಧಿಕಾರಿಗಳ ನಿವಾಸದ ಮೇಲೆ ದಾಳಿ ಮಾಡಿ ಮಾಹಿತಿ ಕಲೆ ಹಾಕಿತ್ತು.

ಐಎಂಎ ಯಾವುದೇ ಅಕ್ರಮದಲ್ಲಿ ತೊಡಗಿಲ್ಲ ಎಂದು ವರದಿ ನೀಡಿದ್ದೇ ಅಲ್ಲದೇ ಹೆಚ್ಚಿನ ತನಿಖೆಗೆ ನಿರಾಸಕ್ತಿ ತೋರಿದ ಆರೋಪ ಹೇಮಂತ್ ನಿಂಬಾಳ್ಕರ್‍ ಮೇಲಿದೆ.

ಐಎಂಎ ವಂಚನೆಯ ಬಗ್ಗೆ ರಿಸರ್ವ್ ಬ್ಯಾಂಕಿಗೆ ವರದಿ ಸಲ್ಲ್ಲಿಸುವಲ್ಲಿ ವಿಳಂಬ ನೀತಿ ಮತ್ತು ಸಂಸ್ಥೆಯ ಮಾಲೀಕ ಮನ್ಸೂರ್‌ ಖಾನ್‌ರಿಂದ ರುಷುವತ್ತು ಸ್ವೀಕರಿಸಿದ ಆರೋಪವನ್ನು ಅಂದಿನ ವಲಯ ಡಿಸಿಪಿ ಅಜಯ್ ಹಿಲೋರಿ ಮೇಲೆ ಹೊರಿಸಲಾಗಿದೆ.

ಬಹುಕೋಟಿ ವಂಚನೆ ಹಗರಣದ ರೂವಾರಿ ಹಾಗೂ ಪ್ರಮುಖ ಆರೋಪಿ ಮನ್ಸೂರ್‍ ಖಾನ್ ಈಗಾಗಲೇ ಪೊಲೀಸರ ವಶದಲ್ಲಿದ್ದು ತೀವ್ರ ವಿಚಾರಣೆ ಎದುರಿಸುತ್ತಿದ್ದಾನೆ. ಇದೇ ಹಗರಣಕ್ಕೆ ಸಂಬಂಧಿಸಿದಂತೆ ಐಎಎಸ್‌ ಅಧಿಕಾರಿಯನ್ನು ಸಹ ಬಂಧಿಸಲಾಗಿತ್ತು.

ಹಣ ದ್ವಿಗುಣದ ಆಮಿಷವೊಡ್ಡಿ ಜನರಿಂದ ಸಾವಿರಾರು ಕೋಟಿ ಹಣ ಗುಳುಂ ಮಾಡಿದ ಹಗರಣ ಕಳೆದ ವರ್ಷ ಬಯಲಾಗಿತ್ತು.

ಈ ಸಂಬಂಧ ಮೊದಲು ಎಸ್‌ಐಟಿ ತನಿಖೆ ನಡೆದಿತ್ತಾದರೂ ತದನಂತರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.

loading...