ಹೆಸರು ಬೆಳೆ ಖರೀದಿ ಕೇಂದ್ರಕ್ಕೆ ಶಾಸಕರಿಂದ ಚಾಲನೆ

0
19

ಕನ್ನಡಮ್ಮ ಸುದ್ದಿ-ನರಗುಂದ: ಬೆಲೆ ಕುಸಿತದಿಂದ ರೈತರು ಅನೇಕ ವರ್ಷಗಳಿಂದ ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಯೊಬ್ಬ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈತರು ಬೆಳೆದ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರೆಯಲಿ ಎಂಬ ಆಶಾವಾದದಿಂದ ಬೆಂಬಲ ಬೆಲೆ ಘೋಷಿಸಿದ್ದಲ್ಲದೇ ಖರೀದಿ ಕೇಂದ್ರಗಳನ್ನು ಆರಂಭಿಸಲು ಶ್ರಮವಹಿಸಿದ್ದಾರೆ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಶನಿವಾರ ಹೆಸರು ಬೆಂಬಲ ಬೆಲೆ ಖರೀದಿ ಕೇಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರು ಮುಂಗಾರಿನಲ್ಲಿ ಬೆಳೆದ ಹೆಸರು ಉತ್ಪನ್ನವನ್ನು ಬೆಂಬಲ ಬೆಲೆಗೆ ಖರೀಧಿ ಕೇಂದ್ರವನ್ನು ಆರಂಭಿಸುವಂತೆ ಬೇಡಿಕೆಯಿದ್ದ ಹಿನ್ನೆಲೆ. ಮಾರುಕಟ್ಟೆ ಮತ್ತು ಸಹಕಾರಿ ಸಚಿವ ಬಂಡೆಪ್ಪ ಕಾಶೇಂಪೂರ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಜತೆಗೆ ಚರ್ಚಿಸಿದ್ದೆ. ಅಲ್ಲದೇ ಈ ಮಹತ್ವದ ವಿಷಯವನ್ನು ಸಚಿವ ಸಂಪುಟದಲ್ಲಿ ಸೇರಿಸಿ ಯೋಜನೆ ಕಾರ್ಯಾರಂಭಕ್ಕಾಗಿ ನಾನು ಶ್ರಮಿಸಿದ್ದರ ಫಲವಾಗಿ ಇಂದು ಹೆಸರು ಉತ್ಪನ್‌ದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಗೊಂಡಿದೆ.
ಗದಗ ಜಿಲ್ಲೆ ಸೇರಿದಂತೆ ನರಗುಂದ ತಾಲೂಕಿನಲ್ಲಿಯೂ ಹೆಸರು ಬೆಂಬಲ ಬೆಲೆ ಖರೀಧಿ ಕೇಂದ್ರವನ್ನು ಆರಂಭಿಸಲಾಗಿದ್ದು ರೈತರು ಇದರ ಪ್ರಯೋಜನ ಪಡೆದುಕೊಳ್ಳುಬೇಕು ಎಂದು ತಿಳಿಸಿದರು.
ಎಪಿಎಂಸಿ ಅಧ್ಯಕ್ಷ ಎನ್‌.ವ್ಹಿ ಮೇಟಿ ಮಾತನಾಡಿ, ರೈತರ ಉತ್ಪನ್‌ಗಳನ್ನು ಉತ್ತಮ ಬೆಲೆಗೆ ಖರಿಧೀಸಲು ಶಾಸಕರು ಎಲ್ಲ ಪ್ರಯತ್ನಗಳನ್ನು ಮಾಡಿ ಬೆಂಬಲ ಬೆಲೆ ಕೇಂದ್ರ ಆರಂಭಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜೊತೆ ಚರ್ಚಿಸಿ ಕಾರ್ಯರಂಭ ಮಾಡಿಸಿದ್ದಾರೆ. 90 ದಿನಗಳವರೆಗೆ ರೈತರಿಂದ ಬೆಂಬಲ ಬೆಲೆಯಲ್ಲಿ ಹೆಸರು ಉತ್ಪನ್‌ ಖರೀಧಿಸುವ ನಿಯಮವಿದೆ. ರೈತರು ಸೆ.9 ರವರೆಗೆ ನೊಂದಾವಣೆ ಮಾಡಿಸಿಕೊಳ್ಳಬೇಕು. ಸಹಕಾರಿ ಮಾರುಕಟ್ಟೆ ಮಹಾಮಂಡಳ ಮತ್ತು ಸಹಕಾರಿ ಸೊಸೈಟಿಗಳ ಮುಖಾಂತರ ಹೆಸರು ಖರೀಧಿ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ, ಎಪಿಎಂಸಿ ಉಪಾಧ್ಯಕ್ಷ ಸಣ್ಣಗದಿಗೆಪ್ಪ ತಳವಾರ, ಪುರಸಭೆ ಅಧ್ಯಕ್ಷ ಶಿವಾನಂದ ಮುತವಾಡ. ಟಿಎಪಿಸಿಎಂಎಸ್‌ ಅಧ್ಯಕ್ಷ ಎ.ಎಂ. ಹುಡೇದ, ಎಸ್‌.ಆರ್‌. ಪಾಟೀಲ, ವೈ.ಎಚ್‌.ಯಲ್ಲಪ್ಪಗೌಡ್ರ, ಎಪಿಎಂಸಿ ನಿರ್ಧೆಶಕ ಮಂಡಳಿ ಸದಸ್ಯರಾದ ಗಂಗೂಬಾಯಿ ಕಾಶೀದ, ಬಸಪ್ಪ ಕೊಳ್ಳಿಯವರ, ಜಿಪಂ ಸದಸ್ಯೆ ರೇಣುಕಾ ಅವರಾದಿ, ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ಬಿ.ಬಿ. ಐನಾಪೂರ, ಶಂಕರಗೌಡ ಪಾಟೀಲ, ಶಿವನಗೌಡ ಹೆಬ್ಬಳ್ಳಿ, ಎಸ್‌.ಬಿ. ಕರಿಗೌಡ್ರ, ಸುರೇಶ ಸವದತ್ತಿ, ಬಿ.ಕೆ. ಗುಜಮಾಗಡಿ ಅನೇಕರು ಉಪಸ್ಥಿತರಿದ್ದರು. ಎಪಿಎಂಸಿ ಕಾರ್ಯದರ್ಶಿ ವ್ಹಿ.ಡಿ. ಪಾಟೀಲ ನಿರ್ವಹಿಸಿದರು.

loading...