ಹೈಕಮಾಂಡ್ ಹಸ್ತಕ್ಷೇಪ-ಡಿವಿ

0
34

 

ಮೈಸೂರು, ಸೆ.15: ರಾಜ್ಯದ ಆಡಳಿತದಲ್ಲಿ ಹೈಕಮಾಂಡ್ ಹಸ್ತಕ್ಷೇಪ ಮಾಡಿಲ್ಲ ಎಂದುಮುಖ್ಯಮಂತ್ರಿ ಸದಾನಂದಗೌಡರು ಸ್ಪಷ್ಟಪಡಿಸಿದ್ದಾರೆ.

ಮೈಸೂರ ದಸರಾ ಸಿದ್ದತೆಯ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಸದಾನಂದಗೌಡರು ಮಾತನಾಡಿದರು.

ಹಿರಿಯರ ಸಲಹೆಗಳನ್ನು ಆಡಳಿತದಲ್ಲಿ ಪಡೆಯಬೇಕು. ಆದರೆ ಅಧಿಕಾರದಲ್ಲಿ ನನ್ನಮೇಲೆ ಯಾರೂ ಒತ್ತಡ ಹಾಗೂ ಹಸ್ತಕ್ಷೇಪ ಮಾಡುವ ಪ್ರಯತ್ನಗಳನ್ನು ಇದುವರೆಗೆ ಮಾಡಿಲ್ಲ ಎಂದು ಅವರು ಹೇಳಿದರು.

ಸಚಿವ ಯೋಗೇಶ್ವರ್ ಅವರ ಮೇಲಿನ ಆರೋಪಗಳ ಕುರಿತಂತೆ ಪ್ರಶ್ನೆಗಳು ತೂರಿ ಬಂದಾಗ ಅವುಗಳಿಗೆ ಪ್ರತಿಕ್ರಿಯೆ ನೀಡಿಲ್ಲ. ಅವರು ವಂಚನೆ ವ್ಯವಹಾರದಲ್ಲಿ ಅರಣ್ಯ ಸಚಿವ ಯೋಗೇಶ್ವರ್ ವಿರುದ್ದ ಈಗ ಮಾಡಿರುವ ಆರೋಪಗಳು ಸಾಬೀತಾದರೆ ಅವರಿಗೆ ಯಾವುದೇ ಮುಲಾಜು ನೋಡದೆ ಸಂಪುಟದಿಂದ ಗೆಟ್ಪಾಸ್ ನೀಡಲಾಗುವುದು ಎಂದರು.

ಆರೋಪಿಗಳೆಲ್ಲ ಅಪರಾಧಿ ಆಗಿರುವದಿಲ್ಲ. ರಾಜಕೀಯ ಜೀವನದಲ್ಲಿ ಈ ರೀತಿ ಆರೋಪಗಳು ಬರುವುದು ಸಹಜ ಸಂಗತಿಯಾಗಿದೆ. ಆದರೆ ಅವರ ವಿರುದ್ದ ಆರೋಪ ಸಾಬೀತಾಗೊಂಡರೆ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

ಯೋಗೇಶ್ವರ್ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಂಡಿರುವುದುವರಿಷ್ಠರ ನಿರ್ಧಾರದ ಮೇಲೆ ಆಗಿದೆ. ಇದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಇರುವುದಿಲ್ಲ. ಆದ್ದರಿಂದ ಹೈಕಮಾಂಡ್ ಆದೇಶದಂತೆ ನಾನು ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಂಡಿದ್ದೇನೆ. ಅವರ ವಿರುದ್ದ ಆರೋಪಗಳನ್ನು ವರಿಷ್ಠರು ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವರಿಷ್ಠರು ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ನನಗೆ ಸೂಚನೆ ಕೊಟ್ಟರೆ ಅದನ್ನು ನಾನು ಖಂಡಿತವಾಗಿ ಪಾಲನೆ ಮಾಡುತ್ತೇನೆ. ನಾನು ಯಾರನ್ನೂ ರಕ್ಷಿಸಲು ಬಯಸುವದಿಲ್ಲ ಎಂದರು.

ಶ್ರೀರಾಮುಲು ರಾಜೀನಾಮೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಇದು ಶ್ರೀರಾಮುಲು ಮತ್ತು ಸ್ಪೀಕರ್ ಕೆ.ಜಿ. ಬೋಪಯ್ಯನವರಿಗೆ ಸಂಬಂಧಪಟ್ಟ ವಿಷಯವಾಗಿದೆ. ನಾನು ಇದರಲ್ಲಿ ತಲೆ ಹಾಕುವದಿಲ್ಲ. ಶ್ರೀರಾಮುಲು ಅವರು ರಾಜೀನಾಮೆ ಕೊಟ್ಟಿದ್ದಾರೆ. ಅದನ್ನು ಅಂಗೀಕಾರ ಮಾಡುವುದು ಇಲ್ಲವೇ ತಿರಸ್ಕರಿಸುವುದು ಸ್ಪೀಕರ್ ಅವರಿಗೆ ಬಿಟ್ಟ ವಿಚಾರವಾಗಿದೆ ಎಂದು ಅವರು ಹೇಳಿದರು.

loading...

LEAVE A REPLY

Please enter your comment!
Please enter your name here