ಹೊಸ ತಂತ್ರಜ್ಞಾನದೊಂದಿಗೆ ವೈದ್ಯರು ಸೇವೆ ನೀಡಲಿ

0
5

ಕನ್ನಡಮ್ಮ ಸುದ್ದಿ-ಗದಗ: ವಿಜ್ಞಾನ ಮತ್ತು ತಾಂತ್ರಿಕತೆಯಿಂದಾಗಿ ವೈದ್ಯಕೀಯ ಕ್ಷೇತ್ರ ಇಂದು ಸಾಕಷ್ಟು ಪ್ರಗತಿಯಾಗಿದ್ದು ವೈದ್ಯರು ಹೊಸ ಹೊಸ ಆವಿಷ್ಕಾರಗಳನ್ನು ಬಳಕೆ ಮಾಡಿಕೊಂಡು ಜನತೆಯ ಉತ್ತಮ ವೈದ್ಯಕೀಯ ಸೇವೆ ನೀಡಬೇಕೆಂದು ಗದಗ ವೈದ್ಯಕೀಯ ಸಂಸ್ಥೆಯ ನಿರ್ದೆಶಕ ಡಾ.ಪಿ.ಎಸ್.ಭೂಸರಡ್ಡಿ ಅಭಿಪ್ರಾಯಪಟ್ಟರು.
ಗದುಗಿನ ಖಾಸಗಿ ಹೋಟೇಲ್ ಸಭಾಂಗಣದಲ್ಲಿ ಗದಗ ಐಎಂ, ಗದಗ ವೈದ್ಯಕೀಯ ಸಂಸ್ಥೆಯ ಅರವಳಿಕೆ ವಿಭಾಗ ಹಾಘೂ ಭಾರತೀಯ ಅರವಳಿಕೆ ಸಂಘ ಗದಗ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಿರಂತರ ವೈದ್ಯಕೀಯ ಶಿಕ್ಷಣ ಯೋಜನೆಯಡಿ ಎರ್ಪಡಿಸಿದ್ದ ‘ಅರವಳಿಕೆಯ ಹೊಸ ತಿಳುವಳಿಕೆ’ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ವೈದ್ಯಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿರುವ ವೈದ್ಯರುಗಳು ಹಿರಿಯ ತಜ್ಞ ವೈದ್ಯರ ಸಲಹೆ ಸೂಚನೆಯೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಾದ ಹೊಸ ಹೊಸ ಸಂಶೋಧನೆಗಳನ್ನು ತಮ್ಮ ವೈದ್ಯಕೀಯ ಸೇವೆಯಲ್ಲಿ ಅಳವಡಿಸಿಕೊಂಡು ಜನತೆಯ ಉತ್ತಮ ಆರೋಗ್ಯ ಸೇವೆ ನೀಡಬೇಕೆಂದು ಸಲಹೆ ನೀಡಿದರು.ಐಎಸ್‍ಎ ರಾಷ್ಟ್ರೀಯ ಅಧ್ಯಕ್ಷ ಡಾ.ಬಾಲಬಾಸ್ಕರ್ ಅವರು ವೈದ್ಯಕೀಯ ರಂಗದಲ್ಲಿ ಆಗಿರುವ ಹೊಸ ಹೊಸ ತಂತ್ರಜ್ಞಾನ ಹಾಗೂ ಅದನ್ನು ಅನ್ವಯಿಸುವ ಬಗೆ ವಿವರಿಸಿದರು. ಡಾ. ಆರ್.ರವಿ, ಡಾ. ಸುಫಿಯಾ ಶೇಖ, ಡಾ. ಸಂದೀಪ ಸಜ್ಜನ, ಡಾ. ಎಸ್.ಎಸ್.ಹರಸುರ, ಡಾ. ಗುರುಪ್ರಸಾದ, ಡಾ. ವಿನಾಯಕ ಅವರು ಅರವಳಿಕೆಯ ವಿಷಯವಾಗಿ ಮಾತನಾಡಿದರು.

loading...