ಹೋರಾಡದತ್ತ ಮುಖ ಮಾಡಿದ ಗುತ್ತಿಗೇದಾರರು. ಬಿಡುಗಡೆಯಾಗದ ಅನುದಾನ; ಆರ್ಥಿಕ ಸಂಕಷ್ಟದಲ್ಲಿ ಗುತ್ತಿಗೇದಾರರು.

0
25

ಸಿದ್ದಯ್ಯ ಹಿರೇಮಠ
ಮೋಳೆ : ಈ ಹಿಂದೆ ಪೂರ್ಣಗೊಳಿಸಿರುವ ಅಭಿವೃಧ್ಧಿ ಕಾಮಗಾರಿಗಳ ಕೋಟ್ಯಾಂತರ ರೂ ಗಳ ಬಿಲ್ ಬಾಕಿಯಿಂದಾಗಿ ಗುತ್ತಿಗೇದಾರರು ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲ ಹೊಸದಾಗಿ ಆರಂಭವಾಗಬೇಕಾದ ಅಭಿವೃದ್ದಿ ಕಾಮಗಾರಿಗಳಿಗೂ ಗ್ರಹಣ ಹಿಡಿದಿದೆ.

ಸರಕಾರದ ಆರ್ಥಿಕ ನಿರ್ವಹಣೆ ಬಗ್ಗೆ ಸಾಕಷ್ಟು ಟೀಕೆ ಟಿಪ್ಪಣೆಗಳು ಕೇಳಿ ಬರುತ್ತಿರುವ ಮಧ್ಯೆಯೇ ಲೋಕೋಪಯೋಗಿ,ಕರ್ನಾಟಕ ನೀರಾವರಿ ನಿಗಮ, ಜಿಲ್ಲಾ ಪಂಚಾಯತ್, ನಮ್ಮ ಗ್ರಾಮ ನಮ್ಮ, ರಸ್ತೆ, ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ರಸ್ತೆ, ಕಾಲುವೆ ಕಾಮಗಾರಿ, ಹುಳೆತ್ತುವುದು, ಕುಡಿಯುವ ನೀರಿನ ಕಾಮಗಾರಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಈಗಾಗಲೇ ಕೈಗೊಳ್ಳಲಾಗಿರುವ ಅಭಿವೃದ್ದಿ ಕಾಮಗಾರಿಗಳ ಕೋಟ್ಯಾಂತರ ರೂ.ಗಳನ್ನು ಸರಕಾರ ಬಾಕಿ ಇರಿಸಿಕೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಚಿಕ್ಕೋಡಿ ವಿಭಾಗಿಯ ಜಿಲ್ಲಾ ಪಂಚಾಯತ್, ಲೋಕೋಪಯೋಗಿ, ಕರ್ನಾಟಕ ನೀರಾವರಿ ನಿಗಮ,ನಮ್ಮ ಗ್ರಾಮ ನಮ್ಮ ರಸ್ತೆ, ಪ್ರಧಾನ ಮಂತ್ರಿ ಸಡಕ ಯೋಜನೆ ಸೇರಿದಂತೆ ವಿವಿಧ ಇಲಾಖೆಯ ಕಚೇರಿಗಳಿಗೆ ಅಲೆದು-ಅಲೆದು ಸುಸ್ತಾಗಿರುವ ಗುತ್ತಿಗೆದಾರರು ಹೊಸ ಕಾಮಗಾರಿಗಳಿಗೆ ಟೆಂಡರ ಹಾಕಲು ಸಹ ಹಿಂದೆ ಮುಂದೆ ನೋಡುತ್ತಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ಪೂರ್ಣಗೊಳಿಸಿರುವ ಕಾಮಗಾರಿಯ ಬಿಲ್‍ನ್ನು ಬೆಳಗಾವಿಯ ಕರ್ನಾಟಕ ನೀರಾವರಿ ನಿಗದಮ ಅಧಿಕಾರಿಗಳನ್ನು ಗುತ್ತಿಗೇದಾರರು ಕೇಳಿದರೆ ಕಾಮಗಾರಿಗಳನ್ನು ಪರೀವೀಕ್ಷಣೆ ಮಾಡುವುದಾಗಿ ಹೇಳುತ್ತಿದ್ದಾರೆ. ಒಟ್ಟಾರೆ ಇದೆಲ್ಲದರ ಪರಿಣಾಮ ತ್ವರಿತ ಗತಿಯಲ್ಲಿ ಆಗಬೇಕಾದ ಬಿಲ್‍ಗಳು ನೆನೆಗುದಿಗೆ ಬೀಳುವಂತಾಗಿದೆ. ತಾಲೂಕಿನಲ್ಲಿ ಆಗಿರುವ ಹಲವಾರು ಕಾಮಗಾರಿಗಳ ಸುಮಾರು 50 ಕೋಟಿಗೂ ಅಧಿಕ ಬಿಲ್ ವರ್ಷ ಕಳೆಯುತ್ತ ಬಂದರು ಇನ್ನುವರೆಗೂ ಬಿಡುಗಡೆಗೊಂಡಿಲ್ಲ.

ಕೈಯಿಂದ ಹಣ ಹಾಕಿ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮಾಡಿ ಮುಗಿಸಿರುವ ಗುತ್ತಿಗೆದಾರರು ಈಗ ಸರಕಾರದಿಂದ ಅನುದಾನ ಬಿಡುಗಡೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದಾರೆ. ಅಲ್ಲದೆ ಹೊಸ ಕಾಮಗಾರಿಗಳನ್ನು ಹಿಡಿಯಲು ಸಹ ಹಿಂಜರಿಯುತ್ತಿದ್ದು ಅಧಿಕಾರಿಗಳು ಅಸಹಾಯಕರಾಗಿ ಕುಳಿತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹೋರಾಟ ಎಚ್ಚರಿಕೆ;- ವಿವಿಧ ಇಲಾಖೆಗಳಲ್ಲಿ 50 ಕೋಟಿ ರೂ. ಕೆಲಸ ಮಾಡಿದ್ದು ಒಂದು ವರ್ಷ ಗತಿಸುತ್ತಾ ಬಂದರು ಇನ್ನು ಅನುದಾನ ಬಿಡುಗಡೆಗೊಂಡಿಲ್ಲ. ಸರಕಾರ ಹಾಗೂ ಇಲಾಖೆಯ ಮೇಲೆ ನಂಬಿಕೆ ಇಟ್ಟು ಖಡಿ, ಸಿಮೆಂಟ್, ಡಾಂಬರನಂತಹ ಕಚ್ಚಾ ವಸ್ತುಗಳನ್ನು ತೆಗೆದುಕೊಂಡು ಕಾಮಗಾರಿಗಳನ್ನು ನಿರ್ವಹಿಸಿದ್ದಾರೆ. ಆದರೆ ಒಂದು ವರ್ಷ ಗತಿಸುತ್ತಾ ಬಂದರೂ ಕೂಡ ಸಾಮಗ್ರಿ ಪೂರೈಸಿದ ಮಾಲೀಕರು ಹಣಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಸಾಮಗ್ರಿ ಪೂರೈಸಿದ ಮಾಲಿಕರಿಗೆ ಸುಳ್ಳು ಹೇಳಿ ಹೇಳಿ ಸಾಕಾಗಿದ್ದು ಮೊಬೈಲ್ ಗಳನ್ನು ಸ್ವೀಚ್ ಆಫ್ ಮಾಡಿಕೊಂಡು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗುತ್ತಿಗೇದಾರರು ತಮ್ಮ ಅಳಲನ್ನು ತೋಡಿಕೊಂಡರು. ಸರಕಾರ 15 ದಿನಗಳಲ್ಲಿ ಕ್ರಮ ಕೈಕೊಳ್ಳದೆ ಹೋದಲ್ಲಿ ಎಲ್ಲ ತಾಲೂಕಿನ ಗುತ್ತಿಗೆದಾರರು ಕೂಡಿಕೊಂಡು ಇಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಜಿಲ್ಲೆಯ ಆಯಾ ಇಲಾಖೆಯ ಕಾರ್ಯಾಲಯಗಳ ಮುಂದೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

loading...

LEAVE A REPLY

Please enter your comment!
Please enter your name here