೬೩ನೇಯ ವಾರ್ಷಿಕ ಸಾಮಾನ್ಯ ಸಭೆ

0
24

ಕನ್ನಡಮ್ಮ ಸುದ್ದಿ-ದಾಂಡೇಲಿ: ದಾಂಡೇಲಿಯ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆ ೨೦೧೭-೧೮ನೇ ಸಾಲಿನಲ್ಲಿ ರೂ. ೨೨೩ ಕೋಟಿ ಒಟ್ಟು ನಿವ್ವಳ ಲಾಭವನ್ನು ಪಡೆದಿದೆ. ಈ ಸಾಲಿನ ಶೇರುದಾರರಿಗೆ ಶೇ.೨೦೦ ರಷ್ಟು ಲಾಭಾಂಶ ನೀಡಲಾಗುವುದೆಂದು ವೆಸ್ಟ್ಕೋಸ್ಟ್ ಪೇಪರ್ ಮಿಲ್ಲಿನ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್ ತಿಳಿಸಿದರು.
ಅವರು ನಗರದ ಶ್ರಿÃ ರಂಗನಾಥ ಸಭಾಂಗಣದಲ್ಲಿ ಬುಧವಾರ ಸಂಜೆ ಜರುಗಿದ ೨೦೧೭-೧೮ನೇ ಸಾಲಿನ ಶೇರುದಾರರ ೬೩ನೇಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಕಂಪನಿಯ ವಾರ್ಷಿಕ ವರದಿಯನ್ನು ಮಂಡಿಸುತ್ತಾ ವಿವರಣೆ ನೀಡಿದರು. ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆ ೨೦೧೭-೧೮ನೇಯ ಸಾಲಿನಲ್ಲಿ ಒಟ್ಟು ೨೯೦೮೪೪ ಮೆಟ್ರಿಕ್ ಟನ್(ಶೇ.೯೧ಬಳಕೆ) ಉತ್ಪಾದಿಸಿದ್ದು, ಕಳೆದ ವರ್ಷದ ಉತ್ಪಾದನೆ ೩೧೩೩೧೧(ಶೇ೯೮ ಬಳಕೆ) ಮೆಟ್ರಿಕ್ ಟನ್‌ದಷ್ಟು ಇದ್ದಿತು, ಕಳೆದ ವರ್ಷದ ಉತ್ಪಾದನೆಗಿಂತ ಈ ಬಾರಿಯ ಉತ್ಪಾದನೆ ೨೨೪೬೭ ಮೆಟ್ರಿಕ್ ಟನ್ ಕಡಿಮೆ ಆಗಿದೆ. ಕಳೆದ ವರ್ಷದ ವಹಿವಾಟು ರೂ.೧೬೯೨ ಕೋಟಿ ಈ ಬಾರಿಯ ವಹಿವಾಟು ರೂ.೧೬೨೪ ಕೋಟಿ, ಕಳೆದ ವರ್ಷಕ್ಕೆ ಹೊಲಿಸಿದರೆ ರೂ. ೬೮ ಕೋಟಿ ವಹಿವಾಟು ಕಡಿಮೆಯಾಗಿದೆ. ಮೈಸೂರಿನ ಆಪ್ಟಿಕಲ್ ಪೈಬರ್ ಕೆಬಲ್ ಉತ್ಪಾದನೆಯಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿ ಈ ವರ್ಷ ರೂ.೭೪ ಕೋಟಿ ಕೆಬಲ್ ಮಾರಾಟ ಮಾಡಲಾಗಿದೆ. ಕಳೆದ ವರ್ಷ ರೂ: ೬೯ ಕೋಟಿ ಕೆಬಲ್ ಮಾರಾಟ ಮಾಡಲಾಗಿದೆ ರೂ.೫ ಕೋಟಿ ಹೆಚ್ಚಿನ ಕೆಬಲ್ ಮಾರಾಟ ಮಾಡಲಾಗಿದೆ ಕಾರ್ಖಾನೆಯು ತಿಂಗಳಿಗೆ ಬಿಟು-ಬಿ ೯೦೦೦ ಟನ್ ಕ್ವಾಪಿಯರ್ ಎಂದು ಅವರು ತಿಳಿಸಿದರು. ಕಾರ್ಖಾನೆಯು ಸಿಎಸ್‌ಆರ್ ನೀತಿಯಡಿ ಆರೋಗ್ಯ ತಪಾಸಣೆ ಶಿಬಿರ, ಚಿಕಿತ್ಸೆ, ವಿದ್ಯಾರ್ಥಿಗಳಿಗೆ ನೋಟ್ ಬುಕ್ ಸ್ಕೂಲ್ ಬ್ಯಾಗ್, ಛತ್ರಿ ವಿತರಣೆ, ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಸೌಲಭ್ಯ ನಗರದ ದಂಡಕಾರಣ್ಯ, ನಂದುಗೋಕುಲ್ ಉದ್ಯಾನವನ ಅಭಿವೃದ್ಧಿ, ನಗರದ ಸ್ವಚ್ಛತಾ ಕಾರ್ಯಗಳಲ್ಲಿ ಭಾಗವಹಿಸಿ ಜನರ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದರು. ವೇದಿಕೆಯಲ್ಲಿ ವೆಸ್ಟ್ಕೋಸ್ಟ್ ಪೇಪರ್ ಮಿಲ್ಲಿನ ನಿರ್ದೇಶಕರಾದ ಲೆಪ್ಟ್ನೆಂಟ್ ಕರ್ನಲ್ ಉತ್ಪಲ್ ಭಟ್ಟಾಚಾರ್ಯ, ಕಾರ್ಖಾನೆಯ ಮುಖ್ಯ ಆಡಿಟರ್‌ಗಳಾದ ಸುಖದೇವ ಲೋದಾ, ನಮನ ಜೋಶಿ ಉಪಸ್ಥಿತರಿದ್ದರು. ಕಂಪನಿ ಕಾರ್ಯಾದರ್ಶಿ ಬ್ರಿಜ್ ಮೋಹನಪ್ರಸಾದ ಸ್ವಾಗತಿಸಿ ಕಾರ್ಖಾನೆಯ ಲೆಕ್ಕ ಪರಿಶೋಧನಾ ವರದಿ ಮಂಡಿಸಿ ವಂದಿಸಿದರು. ವಾರ್ಷಿಕ ಸಭೆಯಲ್ಲಿ ಕೇಲವು ನಿರ್ಣಯಗಳಿಗೆ ಶೇರುದಾರರಿಂದ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು.

loading...