ಬೆಳಗಾವಿ 17-ವೈಜ್ಞಾನಿಕ ಪ್ರಗತಿಯ ಭರದಲ್ಲಿ ನೈಸರ್ಗಿಕ ಸಂಪತ್ತು ನಾಶವಾಗುತ್ತಿದೆ. ಕಾಲಕಾಲಕ್ಕೆ ಆಗಬೇಕಾಗಿದ್ದ ಮಳೆಯ ಪ್ರಮಾಣ ಕಡಿಮೆಯಾಗಿ ಪರಿಸರ ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತಿದೆ. ಸಸ್ಯಗಳನ್ನು ನೆಟ್ಟು ಪೋಷಿಸಿ ಬೆಳೆಸುವದರಿಂದ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಒದಗಿಸಲು ಸಾಧ್ಯ ಎಂದು ರುದ್ರಾಕ್ಷಿಮಠದ ನಾಗನೂರು ಶ್ರೀಗಳು ಅಭಿಪ್ರಾಯಪಟ್ಟರು. ನಾಗನೂರ ಶ್ರೀ ಶಿವಬಸವೇಶ್ವರ ಟ್ರಸ್ಟಿನ ವೃದ್ದಾಶ್ರಮ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಶಿಉಜ್ವಲಾಷಿ ಮಹಿಳೆಯರ ಪುನರ್ವಸತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಯೊಂದು ಬೀದಿಗಳು ನೀರು, ಆಹಾರದ ಅವಶ್ಯಕತೆಯಿದ್ದು ಸಸ್ಯಗಳಿಂದ ಅವುಗಳ ಪೂರೈಕೆ ಸಾಧ್ಯ. ಕಾರಣ ಪ್ರತಿಯೊಬ್ಬರು ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳಬೇಕೆಂದರು. ಸೇವಾಮಿತ್ರ ಸಮಾಜ ಕಾರ್ಯ ವಿದ್ಯಾರ್ಥಿಗಳು, ವೃದ್ದಾಶ್ರಮದ ನಿವಾಸಿಗಳು ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕ ಎಂ.ಎಸ್.ಚೌಗಲಾ ಉಪಸ್ಥಿತರಿದ್ದರು.


