11 ವರ್ಷದ ಬಳಿಕ 5ನೇ ಮಾಸ್ಟರ್ಸ್‌ ಪ್ರಶಸ್ತಿ ಗೆದ್ದ ಟೈಗರ್‌ವುಡ್‌

0
1

ಆಗಸ್ಟಾ:-ವಿಶ್ವ ಶ್ರೇಷ್ಠ ಗಾಲ್ಫ್‌ ಪಟು ಟೈಗರ್‌ ವುಡ್‌ 11 ವರ್ಷಗಳ ಬಳಿಕ ಇದೇ ಮೊದಲ ಬಾರಿ 5ನೇ ಮಾಸ್ಟರ್ಸ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಅನುಭವಿಸಿದ್ದ ಸಾಲು ಸಾಲು ವೈಫಲ್ಯಕ್ಕೆ ತೀಲಾಂಜಲಿ ಹಾಡಿದರು.
ಪ್ರಶಸ್ತಿ ಅಂತಿಮ ಸುತ್ತಿನಲ್ಲಿದ್ದ ಅಮೆರಿಕದ ಡಸ್ಟಿನ್‌ ಜಾನ್ಸನ್‌, ಝ್ಯಾಂಡರ್ ಸ್ಕೌಫೇಲೆ ಹಾಗೂ ಬ್ರೂಕ್ಸ್ ಕೋಪ್ಕಾ ಅವರನ್ನು ಹಿಂದಿಕ್ಕಿ ಟೈಗರ್‌ ವುಡ್‌ ಮಾಸ್ಟರ್ಸ್‌ ಕಿರೀಟ ಮುಡಿಗೇರಿಸಿಕೊಂಡರು.
18ನೇ ಹೋಲ್‌ಗೆ ಚೆಂಡನ್ನು ಯಶಸ್ವಿಯಾಗಿ ಕಳುಹಿಸಿದ ಬಳಿಕ ವೃತ್ತಿ ಜೀವನದ 15ನೇ ಪ್ರಮುಖ ವಿಜಯ ಸಾಧಿಸಿದರು. ಟೈಗರ್‌ ಜಯ ಸಾಧಿಸುತ್ತಿದ್ದಂತೆ ನೆರೆದಿದ್ದ ಅಪಾರ ಅಭಿಮಾನಿಗಳು ಟೈಗರ್‌, ಟೈಗರ್‌ ಎಂದು ಕೂಗುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು ಎಂದು ಕತಾರ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

loading...