14 ರಂದು ನೂತನ‌ ವಿಮಾನ‌ ನಿಲ್ದಾಣ ಉದ್ಘಾಟನೆ: ಸಂಸದ ಅಂಗಡಿ

0
32

ಕನ್ನಡಮ್ಮ ಸುದ್ದಿ
ಬೆಳಗಾವಿ:12 ಸ್ಮಾಟ್ ೯‌ ಸಿಟಿ ಬೆಳಗಾವಿಯ ನೂತನ ವಿಮಾನ‌ ನಿಲ್ದಾಣವನ್ನು ದಿ.14 ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.
ಅವರು‌ ಮಂಗಳವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಬೆಳಗಾವಿಯ ಸಾರ್ವಜನಿಕರ ಬಹುವರ್ಷಗಳ ಬೇಡಿಕೆಯಂತೆ ಸಾಂಬ್ರಾ ವಿಮಾನ ನಿಲ್ದಾಣವನ್ನು‌‌ ಮೇಲ್ದರ್ಜೆಗೆ ಏರ್ಪಡಿಸಲಾಗಿದೆ. ವಿಮಾನ ನಿಲ್ದಾಣ ನಿರ್ಮಿಸಲು ಭೂಮಿ‌ ನೀಡಿದ ರೈತರ ಕೊಡುಗೆ ಅಪಾರವಾಗಿದೆ ಎಂದರು.
ಸಾಂಬ್ರಾ ನೂತನ ವಿಮಾನ ಉದ್ಘಾಟನೆಗೆ ವಿಮಾನ ಯಾನ ಸಚಿವ ಗಜಪತಿರಾಜು ನೆರವೆರಿಸಲಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.
ಸಾಂಬ್ರಾ ಜನರಿಗೆ ಸಂಚಾರ ನಡೆಸಲು ಸೂಕ್ತ ರಸ್ತೆ ನಿರ್ಮಾಣ ಮಾಡಿಕೊಡಲು ಕರ್ನಾಟಕದ ಸರಕಾರದ ಅಧಿನದಲ್ಲಿದೆ ಮುಖ್ಯಮಂತ್ರಿಗಳು ಬೆಳಗಾವಿಗೆ ಆಗಮಿಸಲಿದ್ದಾರೆ‌ ಅವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಭಾ‌ ಸದಸ್ಯ ಡಾ. ಪ್ರಭಾಕರ ಕೋರೆ, ಶಾಸಕ ಸಂಜಯ ಪಾಟೀಲ, ರಾಜೇಶ ಮೌರ್ಯಾ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...