2 ಲಕ್ಷ ಕ್ಯೂಸೆಕ ದಾಟಿದ ಹಿಪ್ಪರಗಿ ಬ್ಯಾರೇಜ್‍ ಹೊರಹರಿವು

0
92
ಚಿಕ್ಕೋಡಿ ತಾಲೂಕಿನ ಸದಲಗಾ ಬಳಿ ಯಕ್ಸಂಬಾ-ದಾನವಾಡ ಸೇತುವೆ ಉಕ್ಕಿ ಹರಿಯುತ್ತಿರುವ ದೂಧಗಂಗೆ

ಕನ್ನಡಮ್ಮ ಸುದ್ದಿ
ಚಿಕ್ಕೋಡಿ 20: ಪಶ್ಚಿಮ ಮಹಾರಾಷ್ಟ್ರದಲ್ಲಿ ಶುಕ್ರವಾರ ಮಳೆ ಅಬ್ಬರಿಸುತ್ತಿದ್ದು, ಕೃಷ್ಣಾ ಹಾಗೂ ಉಪನದಿಗಳ ಮೂಲಕ ರಾಜ್ಯಕ್ಕೆ ಹರಿದು ಬರುವ ನೀರಿನ ಹೆಚ್ಚಳವಾಗಿ ನದಿಗಳ ನೀರಿನ ಮಟ್ಟದಲ್ಲಿ ಅಲ್ಪ ಏರಿಕೆ ಕಂಡು ಬಂದಿದೆ.
ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ರಾಜಾಪೂರ ಬ್ಯಾರೇಜ್ ಮುಖಾಂತರ ಕೃಷ್ಣಾ ನದಿಗೆ 1,81,331 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಹಿಪ್ಪರಗಿ ಬ್ಯಾರೇಜ್‍ದಿಂದ 2,02,000 ಲಕ್ಷ ಕ್ಯೂಸೆಕ್ ಮತ್ತು ಆಲಮಟ್ಟಿ ಜಲಾಶಯದಿಂದ 1,73,678 ಕ್ಯೂಸೆಕ್ ನೀರನ್ನು ಹೊರಗೆಬಿಡಲಾಗುತ್ತಿದೆ.
ದೂಧಗಂಗಾ ನದಿನ ನೀರಿನ ಮಟ್ಟದಲ್ಲಿ ಶುಕ್ರವಾರ 1.5 ಅಡಿಯಷ್ಟು ನೀರಿನ ಹರಿವಿನಲ್ಲಿ ಕಡಿಮೆಯಾಗಿದೆ. ಹೀಗಿದ್ದರೂ ನೆರೆಯ ಮಹಾರಾಷ್ಟ್ರದ ನರಸಿಂಹವಾಡಿ ಸುಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಯಕ್ಸಂಬಾ ದಾನವಾಡ ಸೇತುವೆ ಬಳಿ ಹಿನ್ನೀರಿನಿಂದ ರಸ್ತೆಯ ಮೇಲೆ ನೀರು ಬಂದಿದ್ದು ಸಂಜೆಯ ವೇಳೆಗೆ ಇದೇ ರೀತಿ ನೀರು ಬಂದರೇ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.
ಚಿಕ್ಕೋಡಿ ತಾಲೂಕಿನಲ್ಲಿರುವ 8 ಸೇತುವೆಗಳ ಪೈಕಿ 6 ಸೇತುವೆಗಳು ಇನ್ನು ಮುಳುಗಡೆ ಸ್ಥಿತಿಯಲ್ಲಿಯೇ ಇವೆ. ಇಂಗಳಿ ಗ್ರಾಮ ವ್ಯಾಪ್ತಿಯಲ್ಲಿ ಬರುವ ಮಳಿಭಾಗ ಜನವಸತಿ ಪ್ರದೇಶದ ಸುತ್ತ ಕೃಷ್ಣಾ ನದಿ ನೀರು ಸುತ್ತುವರೆಯುತ್ತಿರುವುದರಿಂದ ಅಲ್ಲಿನ ರೈತರನ್ನು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತಾಲೂಕಾಡಳಿತ ಸ್ಥಳಾಂತರಿಸುತ್ತಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಅಬ್ಬರ ಮುಂದುವರೆದಿದ್ದು ಜಿಲ್ಲಾಡಳಿತ ತಾಲೂಕಾಡಳಿತಕ್ಕೆ ಅಗತ್ಯವಿರುವ ನದಿ ತೀರದ ಗ್ರಾಮಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯುವಂತೆ ಸೂಚನೆ ನೀಡಿದೆ.
ನದಿ ತೀರದಲ್ಲಿ ಕೃಷಿಗೆ ಅಳವಡಿಸಿರುವ ಪಂಪಸೆಟ್ಟಗಳನ್ನು ರೈತರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿದ್ದಾರೆ. ಕೃಷ್ಣಾ ನದಿ ತೀರದ ಇಂಗಳಿ,ಯಡೂರ ಸೇರಿದಂತೆ ಇನ್ನುಳಿದ ಗ್ರಾಮಗಳಲ್ಲಿನ ಕೃಷಿ ಜಮೀನುಗಳು ಎರಡು ಬದಿಗೆ ಇರುವ ನದಿಯ ದಡದ ರೈತರು ಬೋಟಗಳ ಅವಶ್ಯಕತೆಯನ್ನು ಅಧಿಕಾರಿಗಳ ಮುಂದೆ ತಮ್ಮ ಬೇಡಿಕೆಯನ್ನು ಇಟ್ಟಿದ್ದಾರೆ.

ಮಹಾರಾಷ್ಟ್ರ ಮಳೆ ವಿವರ
ಕೋಯ್ನಾ-93 ಮಿ.ಮೀ,ನವಜಾ-129 ಮಿ.ಮೀ,ಮಹಾಬಳೇಶ್ವರ-71 ಮಿ.ಮೀ,ಕಾಳಮ್ಮಾವಾಡಿ-81 ಮಿ.ಮೀ, ವಾರಣಾ-54 ಮಿ.ಮೀ,ರಾಧಾನಗರಿ-73 ಮಿ.ಮೀ,ಕೊಲ್ಲಾಪೂರ-17 ಮಿ.ಮೀ,ಸಾಂಗಲಿ-7 ಮಿ.ಮೀ, ಪಾಟಗಾಂವ-50 ಮಿ.ಮೀಟರ್‍ನಷ್ಟು ಮಳೆಯಾಗಿದೆ.
ಚಿಕ್ಕೋಡಿ ತಾಲೂಕಿನ ಮಳೆ ವಿವರ
ಚಿಕ್ಕೋಡಿ-7.9ಮಿ.ಮೀ, ಅಂಕಲಿ-4.6 ಮಿ.ಮೀ, ಸದಲಗಾ-7.0ಮಿ.ಮೀ, ಗಳತಗಾ-7.2ಮಿ.ಮೀ, ನಾಗರಮುನ್ನೋಳಿ-1.4ಮಿ.ಮೀ, ಜೋಡಟ್ಟಿ-3.4 ಮಿ.ಮೀ, ನಿಪ್ಪಾಣಿ(ಪಿಡಬ್ಲುಡಿ)-12.0 ಮಿ.ಮೀ, ನಿಪ್ಪಾಣಿ(ಎಆರ್‍ಎಸ್)-14.0 ಮಿ.ಮೀ ಮತ್ತು ಸೌಂದಲಗಾ-7.2ಮಿ.ಮೀಟರನಷ್ಟು ಮಳೆಯಾಗಿದೆ.
ಬಾಕ್ಸ:
ಮಹಾರಾಷ್ಟ್ರದಿಂದ ಹರಿದು ಬರುವ ನೀರಿನ ಪ್ರಮಾಣಕ್ಕಿಂತ ಹಿಪ್ಪರಗಿ ಬ್ಯಾರೇಜ್ ಮತ್ತು ಆಲಮಟ್ಟಿ ಜಲಾಶಯಗಲಿಂದ ಹೊರ ಬಿಡಲಾಗುತ್ತಿದೆ. ಹೀಗಾಗಿ ನದಿ ತೀರದ ಜನರಿಗೆ ಸದ್ಯಕ್ಕೆ ಪ್ರವಾಹದ ಭೀತಿ ಇಲ್ಲ
ಸಿ.ಎಸ್.ಕುಲಕರ್ಣಿ
ತಹಶೀಲ್ದಾರ, ಚಿಕ್ಕೋಡಿ

loading...