ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

0
39
loading...

ಬೈಲಹೊಂಗಲ 27- ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾ ಯಕಿಯರ ಮಹಾಮಂಡಳ ಹುಬ್ಬಳ್ಳಿ ಹಾಗೂ ಭಾರತೀಯ ಕ್ರಾಂತಿಕಾರಿ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ತಾಲೂಕಾ ಅಂಗನವಾಡಿ ಕಾಂ

ುರ್ಕರ್ತೆಯರು ವಿವಿಧ ಬೇಡಿಕೆ ಗಳಿಗೆ ಆಗ್ರಹಿಸಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ ಒಕ್ಕೂಟದ ಜಿಲ್ಲಾ ಧಿರೂಣ ವ್ಹಿ.ಜಿ. ಸೊಪ್ಪಿನಮಠ ನೇತೃತ್ವದಲ್ಲಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಅರ್ಪಿಸಿದರು.

ಇಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಕಾರ್ಯಕರ್ತೆಯರು, ಪ್ರಾರಂ ಭಿಸಿದ ಸ್ವಾವಲಂಬನೆಯ ರಾಷ್ಟ್ತ್ರೀಯ ಪಿಂಚಣಿ ಪದ್ಧತಿಗೆ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ಐದನೇ ತಾರೀಖಿನ ಒಳಗಾಗಿ ಗೌರ ಧನ ಬಿಡುಗಡೆಯಾಗಬೇಕು. ಗೌರವ ಧನ ಪದ್ಧತಿ ರದ್ದಾಗಬೇಕು, ಕನಿಷ್ಠ ವೇತನ ಜಾರಿಗೊಳ್ಳಬೇಕು. ಕಟ್ಟಿಗೆ ಹಾಗೂ ಸೀಮೆ ಎಣ್ಣೆಗಳ ಬೆಲೆ ಹೆಚ್ಚಿಸಬೇಕು. ಆಹಾರ ಸಾಮಗ್ರಿಗಳ ಪ್ರಮಾಣ ಹೆಚ್ಚಿಸಬೇಕು. ಅಂಗನವಾಡಿ ಕೆಲಸದ ವೇಳೆಯನ್ನು ಮೊದಲಿನಂತೆ ಇಡಬೇಕು. ಆಶಾ ಕಾರ್ಯ ಕರ್ತೆಯರಿಗೆ ಹಾಗೂ ಎ.ಎನ್.ಎಂ. ಗಳಿಗೆ ತಿಗಳ ವರದಿಯನ್ನು ಆರೋಗ್ಯ ಇಲಾಖೆ ಪಡೆಯಬೇಕು. ಸ್ವಸಹಾಯ ಸಂಘಗಳ ಮೇಲ್ವಿಚಾರಣೆಯನ್ನು ಕಾರ್ಯ ಕರ್ತೆಯರಿಂದ ಹಿಂದೆ ಪಡೆಯಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಸಂಘಗಳ ಬಗ್ಗೆ ಬಹಳ ಹಗುರವಾಗಿ ತಿಳಿದುಕೊಳ್ಳ ಬಾರದು ಎಂಬ ಬೇಡಿಕೆಗಳನ್ನು ಸರಕಾರದ ಮುಂದೆ ಇಟ್ಟು ಆಗ್ರಹಿಸಿದರು.

ಸಂಘಟನೆಯ ನೇತೃತ್ವ ವಹಿಸಿದ್ದ ವ್ಹಿ.ಜಿ. ಸೊಪ್ಪಿನಮಠ ಮಾತನಾಡಿ ರಾಜ್ಯದಲ್ಲಿ 90 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು 25 ವರ್ಷಗಳಿಂದ ಗೌರವ ಧನದಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿಯವರೆಗೆ ಅವರಿಗೆ ಯಾವದೇ ಸೇವ ಭದ್ರತೆ ಇಲ್ಲ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಮುಂಗಡಪತ್ರದಲ್ಲಿ ಘೋಷಣೆ ಮಾಡಿದರೂ ಹೆಚ್ಚಿವರಿ ಗೌರವ ಧನ ಸಂದಾಯವಾಗಿಲ್ಲ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂಗಡ ಪತ್ರದಲ್ಲಿ ಘೋಷಣೆ ಮಾಡಿದರೂ ಹೆಚ್ಚುವರಿ ಗೌರವ ಧನ ಸಂದಾಯವಾಗಿಲ್ಲ ಎಂದರು. ರಾಜ್ಯ ಸರಕಾರ ಘೋಷಿಸಿದ ಹೆಚ್ಚುವರಿ ಗೌರವ ಧನ ನಿವೃತ್ತರಾದ ಕಾರ್ಯಕರ್ತೆಯರಿಗೆ ಹಾಗೂ ಸಹಾ ಯಕರಿಗೆ ಸಂದಾಯ ಮಾಡಿದ್ದಾರೆ. ಆದರೆ ಕೇಂದ್ರ ಸರಕಾರ ಇನ್ನೂವರೆಗೂ ಗೌರವ ಧನ ಹೆಚ್ಚಿಸುವ ಬಗ್ಗೆ ಯಾವದೇ ಸುತ್ತೌಲೆ ಹೊರಡಿಸಿರುವದಿಲ್ಲ. ಪ್ರಸಕ್ತ ಸಾಲಿನ ಬಜೆಟ್ಟಿನಲ್ಲಿ ರಾಜ್ಯ ಸರಕಾರವು ಕಾರ್ಯಕರ್ತರಿಗೆ 500 ರೂ. ಸಹಾಯಕರಿಗೆ 250 ರೂ. ವಿಸ್ತರಿಸಿ ದ್ದಾರೆ. ಕೇಂದ್ರ ಸರಕಾರ ಕಾರ್ಯ ಕರ್ತೆಯರಿಗೆ ರೂ. 1500, ಸಹಾಯಕರಿಗೆ ರೂ. 800 ಹೆಚ್ಚಿದ್ದು ಇದರಿಂದ ಕಾರ್ಯಕರ್ತರಿಗೆ ಗೌರವ  ಧನ ತಿಂಗಳಿಗೆ 4500 ಸಹಾಯಕಿ ಯರಿಗೆ 2250 ರೂ.ಗಳನ್ನು ಹೆಚ್ಚಿಸಿದ್ದರೂ ಆದರೆ ಇಲ್ಲಿಯವರೆಗೆ ಹೆಚ್ಚಿಗೆಯಾದ ಗೌರವ ಧನ ನೀಡುತ್ತಿಲ್ಲ ಎಂದು ಆಕ್ರೌಶ ವ್ಯಕ್ತಪಡಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ 20 ರಿಂದ 25 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಯಾದ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ ಇತ್ತೀಚಿನ ದಿನಗಳಲ್ಲಿ ಕಾರ್ಯಕರ್ತೆ ಹಾಗೂ ಸಹಾಯಕ ರನ್ನು ನೇಮಕ ಮಾಡಿಕೊಳ್ಳುವಾಗ ನಿವೃತ್ತರಾದ ನೌಕರರ ಸಂಬಂಧಿಕರಿಗೆ ಅನುವು ಮಾಡಿಕೊಡಬೇಕೆಂದು ಸೊಪ್ಪಿಮಠ ಆಗ್ರಹಿಸಿದರು. ಪ್ರತಿಭಟನ ೆಯಲ್ಲಿ ಅಂಗನವಾಡಿ ಕಾರ್ಯ ಕರ್ತೆಯರಾದ ಚನ್ನಮ್ಮ ಹಿರೇಮಠ, ನಿರ್ಮಲಾ ಹರಳಿಮರದ, ಚನ್ನಮ್ಮ ಮತ್ತಿಕೊಪ್ಪ, ಲತಾ ತಿಪ್ಪಯ್ಯನವರ, ಶೋಭಾ ಗಲಬಿ, ಮಂಜುಳಾ ಹೊಸ ಮನಿ, ಬಸ್ಸವ್ವ  ದೊಡಗೌಡರ ಮುಂತಾದವರು ನೇತೃತ್ವ ಮುಂತಾ ದವರು ನೇತೃತ್ವ ವಹಿಸಿದ್ದರು. ತಾಲೂಕಿನ ಸಹಸ್ರಾರು ಕಾರ್ಯ ಕರ್ತೆರು ಪ್ರತಿಭಟನೆಯಲ್ಲಿ ಪಾಲ್ಗೊಡಿದ್ದರು.

loading...

LEAVE A REPLY

Please enter your comment!
Please enter your name here