ಅಧ್ಯಕ್ಷರ ನೇಮಕಕ್ಕೆ ಅಸಮಾಧಾನ

0
9
loading...

ಜಮಖಂಡಿ- ಜಮಖಂಡಿ ತಾಲ್ಲೂಕ ಜೆಡಿಎಸ್ ಪಕ್ಷದ ಅಧ್ಯಕ್ಷರನ್ನಾಗಿ ನಗರಸಭೆಯ ಸದಸ್ಯ ಸುರೇಶ ಬ್ಯಾಡಗಿ ವಕೀಲರ ಅವರನ್ನು ನೇಮಕವಾಗಿರುವುದು ಅಸಿಂಧು ಇದ್ದು ಇದಕ್ಕೆ ನಮ್ಮ ವಿರೋಧವಿದೆ ಎಂದು ಸಿ.ಆರ್.ಸುತಾರ್ ವಕೀಲ, ಬಸವರಾಜ್ ಆರ್. ಹಿಪ್ಪರಗಿ, ಬಸವರಾಜ್ ಸಿಂಧೂರ್, ಶಿವಪ್ಪ ಮಾಳಿ, ಅಲ್ಲದೆ ನೂರಾರು ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ.

ಸುರೇಶ್ ಬ್ಯಾಡಗಿ ಅವರು ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರೆಂದು ಗುರುತಿಸಿಕೊಂಡಿದ್ದು, ಈಗ ಮತ್ತು ಜೆಡಿಎಸ್ ಪಕ್ಷದ ಸಕ್ರಿಯ ಕಾರ್ಯರೆಂದು ಪೋಸ್ ಕೊಡುತ್ತಿರುವುದು ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರಿಗೆ ಅನ್ಯಾಯವಾಗಿದ್ದು ಅವರ ಅಧ್ಯಕ್ಷ ಆಯ್ಕೆ ಪ್ರಕ್ರಿಯೆ ಸಂಪೂರ್ಣ ಪ್ರಜಾತಂತ್ರವಿರೋಧಿಯಾಗಿದೆ ಎಂದು ತಿಳಿಸಿದರು. ಅಲ್ಲದೆ, ಜಿಲ್ಲಾ ಜೆಡಿಎಸ್ ಅಧ್ಯಕ್ಷರು ಪಕ್ಷದ ತತ್ವ ಸಿದ್ದಾಂತಕ್ಕೆ ಕೊಡಲಿ ಪೆಟ್ಟು ನೀಡಿದ್ದಾರೆ ಎಂದು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ, ಹಾಗೂ ಪಕ್ಷಾಂತರಿಗಳಿಗೆ ಅಧಿಕಾರ ನೀಡಿವುದು ಸರ್ವಥಾ ಸರಿಯಲ್ಲ ಎಂದಿದ್ದಾರೆ.

loading...

LEAVE A REPLY

Please enter your comment!
Please enter your name here