ಅನಾಮದೇಯ ಹೆಣ್ಣು ಶವ ಪತ್ತೆ

0
22
loading...

ಮಹಾಲಿಂಗಪೂರ 14; ಯಾರೊ ಯಾವುದೋ ಕಾರಣಕ್ಕಾಗಿ ಅನಾಮದೇಯ ಹೆಣ್ಣು ಮಗಳನ್ನು ಕೋಲೆ ಮಾಡಿ ಶವವನ್ನು ಒಂದು ಗೋಣಿ ಚೀಲದಲ್ಲಿ ಕಟ್ಟಿ ಘಟಪ್ರಭಾ ಮೇನ ಕೆನಾಲದ ಹರಿಯುವ ನೀರಿನಲ್ಲಿ ಬಿಟ್ಟಿದ್ದು ಅದು ತೆಲುತ್ತಾ ಬಂದು ಬೆಳಗಲಿ ಗ್ರಾಮದ ಲಕ್ಕಪ್ಪ ಮಾಯಪ್ಪ ಕಾರಟಗಿ ಅವರ ಜಮೀನಿನ ಹತ್ತಿರ ಇರುವ ಬೆಳಗಲಿ ಸಮೀಪದ ಹಂಚಿಕೆ ಕೆನಾಲದ ಪೂಲದಲ್ಲಿ ತಟ್ಟಿನಿಂತಿರುತ್ತದೆ ಎಂದು ಶಿವಲಿಂಗಪ್ಪ ಅ ದೇವರಡ್ಡಿ ಸಾ; ಕೋಳಿಗುಡ್ಡ ಇವರು ಇದೆ ತಿಂಗಳ 11 ರಂದು ಸಾಯಂಕಾಲ 4.30 ಘಂ,ಗೆ ಇಲ್ಲಿನ ಠಾಣೆಗೆ ದೂರು ನೀಡಿರುತ್ತಾರೆ.

ಮಹಿಳೆಯ ಚಹರೆ ಗುರ್ತುಗಳು ; ಇವಳ ಅಂದಾಜು ವಯಸ್ಸು 25 ರಿಂದ 30 ವರ್ಷ. ಎತ್ತರ 4`.8″ ಇದ್ದು ಮುಖ ಜಜ್ಜಿದಂತೆ ಆಗಿದೆ, ಎಡಗೈ ಹಸ್ತದ ಮೇಲೆ ಹೂವಿನ ಆಕಾರದ ಹಂಚಿಬಟ್ಟು ಹಾಕಿದ್ದು, ಬಲಗೈಯಲ್ಲಿ ಬದಾಮ ಚಿನ್ ಇದ್ದು ಅದರಲ್ಲಿ ಎನ್,ಎಂ, ಎಂದು ಇಂಗ್ಲೀಷನಲ್ಲಿ ಬರೆದ ಅಕ್ಷರವಿದ್ದು ಅದಕ್ಕೆ ಬಾಣಿನ ಚಿನ್ನೆ ಇರುವ ಹಂಚಿಬಟ್ಟು ಇರುತ್ತದೆ, ಅದು ನೀರಲ್ಲಿ ಶೆಲಿತಿರುತ್ತದೆ, ಅವಳ ಮೈಮೆಲಿನ ಬಟ್ಟೆಗಳು ಚಾಕಲೇಟ ಬಣ್ಣದ ಸೀರೆ, ಕರಿ ಜಂಪರ, ಹಸಿರು ಲಂಗ್. ಕೋರಳಲ್ಲಿ ಕರಿ ದಾರ, ತಾಯಿತ ಮತ್ತು ಗುಂಡಗಡಿಗೆ ಹಾಕಿ ಕೊಂಡಿರುತ್ತಾಳೆ, ಇವಳನ್ನು ಕೊರಳಲ್ಲಿ ಹಗ್ಗ ಕಟ್ಟಿ ಗೋನಿ ಚೀಲದಲ್ಲಿ ಕಟ್ಟಿ ಹರಿಯುವ ನೀರಿನಲ್ಲಿ ಬಿಟ್ಟಿರುತ್ತಾರೆ.

ಕೊಲೆಯಾದ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು ;- ಬಾಗಲಕೋಟ ಜಿಲ್ಲಾ ಪೊಲೀಸ್ ಅಧೀಕ್ಷಕರು ಫೋನ ನಂ,08354-235079. ಅಥವಾ ಡಿ.ಎಸ್,ಪಿ ಜಮಖಂಡಿ ಫೋನ ನಂ, 08353-230114 ಇವರಿಗೆ, ಅಥವಾ ಸಿ,ಪಿ,ಐ ಮುಧೋಳ ಫೋನ,ನಂ, 08350-280103 ಮಹಾಲಿಂಗಪೂರ ಪೊಲೀಸ ಠಾಣಾ ಅಧಿಕಾರಿಯವರ ಫೋನ,ನಂ, 08350-270033.ಇವುಗಳಿಗೆ ಮಾಹಿತಿ ನೀಡಲು ಕೋರಲಾಗಿದೆ, ಈ ಪ್ರಕರಣ ವಿಚಾರವಾಗಿ ಇಲ್ಲಿನ ಠಾಣಾಧಿಕಾರಿ ರಾಜು ಆರ್,ಪಾಟೀಲ ಇವರು ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ

loading...

LEAVE A REPLY

Please enter your comment!
Please enter your name here