ಅಭಿವೃದ್ದಿ ಪಥಕ್ಕೆ ಬ್ಯಾಂಕ್ ಸಹಕಾರಿ : ರಾಮನಗೌಡಾಪಾಟೀಲ

0
18
loading...

 

ಅಥಣಿ 28- ಐವತ್ತು ವರ್ಷಗಳನ್ನು ಕಂಡು ಸುವರ್ಣ ಮಹೋತ್ಸವ ಆಚರಿಸುತ್ತಿರುವ ಈ ನಮ್ಮ ಅಥಣಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕು ಸಾಲ ವಸೂಲಾತಿಯಲ್ಲಿ ರಾಜ್ಯದಲ್ಲಿ ಐದನೇ ಸ್ಥಾನದಲ್ಲಿರುವದು ಹೆಮ್ಮೆಯ ಸಂಗತಿ. 2011 ಮಾರ್ಚ ಅಂತ್ಯಕ್ಕೆ 9048 ಸದಸ್ಯರನ್ನು ಹೊಂದಿದ್ದು ಅದರಲ್ಲಿ 5791 ಸಾಲ ಪಡೆದ ಸದಸ್ಯರಿರುರುತ್ತಾರೆ. ಶೇ. 3ಅರಂತೆ ಒಟ್ಟು 12.21 ಲಕ್ಷ ಸಾಲ ವಿತರಿಸಲಾಗಿದೆ. ಇದರಿಂದ ಬ್ಯಾಂಕು ಪ್ರಗತಿ ಪಥದಲ್ಲಿ ಇರುವದು ಎಂದು ಬ್ಯಾಂಕ ಅಧ್ಯಕ್ಷರಾದ ರಾಮನಗೌಡಾ ಸಂಗನಗೌಡಾ ಪಾಟೀಲ ಇವರು ಬ್ಯಾಂಕಿನ ಐವತ್ತನೇ ವರ್ಷದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಹೇಳಿದರು.

ಮುಂದುವರೆದು 2009-10ರ ಸಾಲಿನಲ್ಲಿ ವಸೂಲಿ 20550 ಇದ್ದುದು ಈ ವರ್ಷ 361,12 ಆಗಿರುವದು. ಕಳೆದ  ನಾಲ್ಕು ವರ್ಷಗಳಲ್ಲಿ ಅದರಲ್ಲಿ 2009,10 ರಲ್ಲಿ 72.03 ಕ್ಕೆ ಹಾನಿಯಾಗಲಿದ್ದು ಈವ ವರ್ಷ 24.47 ಲಾಭ ಗಳಿಸಿರುವದು. ಇದಕ್ಕೆಲ್ಲ ನಿರ್ದೇಶಕರ, ಸದಸ್ಯರ ಸಹಕಾರವೇ ಕಾರಣ ಎಂದು ಘಂಟಾಘೋಷವಾಗಿ ಹೇಳಬಯ ಸುತ್ತೇನೆ ಎಂದರು. ಶೇ. 3ಅ ಬಡ್ಡಿಗಾಗಿ ಸಂಪೂರ್ಣ ಸಹಕಾರ ನೀಡಿರುವ ಸಹಕಾರ ಸಚಿವರಾದ ಲಕ್ಷ್ಮಣ ಸವದಿಯವರನ್ನು ಅಭಿನಂದಿಸದೇ ಇರಲಾರೆ ಎಂದರು.

ಈ ಸಮಯದಲ್ಲಿ ಉಪಾಧ್ಯಕ್ಷರಾದ ರಾಜಗೌಡಾ ಶಿ. ಪಾಟೀಲ, ನಿರ್ದೇಶಕರಾದ ಅಶೋಕ ಪ. ಪಡನಾಡ, ತಮ್ಮಣ್ಣ ಯ. ಮಗರೆ, ಬಸವರಾಜ ಸಿ. ಗಾಣಿಗೇರ, ನಿಂಗಪ್ಪ ಖೋತ, ಕಾಮಣ್ಣ ಯ. ಹೊನಖಾಂಡೆ, ಶ್ರೀಮತಿ ರೇಖಾ ರವಿಗಣಿ, ಶ್ರೀಮತಿ ಬಾಳಾಬಾಯಿ ಮ. ಮೇತ್ರಿ, ಸರಕಾರದ ಪ್ರತಿನಿಧಿ ಅಣ್ಣಪ್ಪಾ ಬಾ. ಖೋತ ಹಾಗೂ ವಿವಿಧ ಗ್ರಾಮಗಳಿಂದ ಬಂದಿದ್ದ ಸದಸ್ಯರು ಉಪಸ್ಥಿತರಿದ್ದರು.

ಬ್ಯಾಂಕಿನ ವಾರ್ಷಿಕ ವರದಿಯನ್ನು ವ್ಯವಸ್ಥಾಪಕರಾದ ಆರ.ಎಮ್. ಪಾಟೀಲರು ಪ್ರಸ್ತುತ ಪಡಿಸಿದರು.

loading...

LEAVE A REPLY

Please enter your comment!
Please enter your name here